/newsfirstlive-kannada/media/post_attachments/wp-content/uploads/2025/07/CHINA.jpg)
ಬ್ರಹ್ಮಪುತ್ರ ನದಿ (Brahmaputra river) ಕೆಳಗಿರುವ ಯಾರ್ಲುಂಗ್ ತ್ಸಾಂಗ್ಪೊ ನದಿಗೆ (Yarlung Tsangpo) ಅಡ್ಡಲಾಗಿ ಜಲವಿದ್ಯುತ್ ಅಣೆಕಟ್ಟು ಕಟ್ಟುವ ಪ್ರಾಜೆಕ್ಟ್ಗೆ ಚೀನಾ ನಿನ್ನೆ ಚಾಲನೆ ನೀಡಿದೆ. ಟಿಬೆಟ್‌ನ ನಿಂಗ್ಚಿ ಪ್ರಾಂತ್ಯದಲ್ಲಿ ಡ್ಯಾಮ್ ನಿರ್ಮಾಣ ಕಾರ್ಯಕ್ಕೆ ಚೀನಾ ಮುಂದಾಗಿದೆ. ಇದನ್ನು ಯಾಜಿಯಾಂಗ್ ಗ್ರೂಪ್ ಅಭಿವೃದ್ಧಿಪಡಿಸುತ್ತಿದೆ. ಈ ಡ್ಯಾಂ ಮೂಲಕ ಚೀನಾ 300 ಬಿಲಿಯನ್ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.
ಇದನ್ನೂ ಓದಿ: ಈಕೆ ASI, ಆತ CRPC ಯೋಧ.. ಒಟ್ಟಿಗೆ ವಾಸವಿದ್ದರು, ರಾತ್ರಿ ನಡೆದ ಗಲಾಟೆಯಲ್ಲಿ ದುರಂತ ಅಂತ್ಯ
ಬೀಜಿಂಗ್ ಸರ್ಕಾರ ಕಳೆದ ಜನವರಿಯಲ್ಲಿ ಈ ಪ್ರಾಜೆಕ್ಟ್ಗೆ ಅನುಮೋದನೆ ನೀಡಿತ್ತು. ಚೀನಾದ ಈ ಪ್ರಾಜೆಕ್ಟ್ನಿಂದ ಕೇವಲ ಟಿಬಿಟಿಯನ್ ಮಾತ್ರವಲ್ಲದೇ ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಭಾರೀ ಪರಿಣಾಮ ಬೀರಲಿದೆ. ಹೀಗಾಗಿ ಭಾರತ ಚೀನಾ ಈ ಪ್ರಾಜೆಕ್ಟ್ನ್ನ ವಿರೋಧಿಸುತ್ತಲೇ ಇತ್ತು. ಇದೀಗ ಡ್ಯಾಂ ನಿರ್ಮಾಣ ಕಾರ್ಯಕ್ಕೆ ಚೀನಾ ಚಾಲನೆ ನೀಡಿದೆ.
ಭಾರತ, ಬಾಂಗ್ಲಾದೇಶಕ್ಕೆ ಆತಂಕ..
ಬ್ರಹ್ಮಪುತ್ರ ನದಿ ಕೇವಲ ನದಿಯಲ್ಲ. ಇದು ಈಶಾನ್ಯ ಭಾರತದ ಲಕ್ಷಾಂತರ ಜನರ ಜೀವನಾಡಿ. ಚೀನಾ ಬ್ರಹ್ಮಪುತ್ರ ನದಿಗೆ ಅಣೆಕಟ್ಟುಗಳನ್ನು ಕಟ್ಟೋದು ಇದೇ ಮೊದಲಲ್ಲ. ಈಗಾಗಲೇ ಸಣ್ಣ, ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿದೆ. ಈ ಅಣೆಕಟ್ಟುಗಳು ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಲ್ಲಿ ಒಂದು.
ಇದೀಗ ಮತ್ತೆ ಭಾರತ ಮತ್ತು ಬಾಂಗ್ಲಾದೇಶಕ್ಕೆ ಆತಂಕ ಶುರುವಾಗಿದೆ. ಈ ಅಣೆಕಟ್ಟು ಟಿಬೆಟ್‌ನಲ್ಲಿ ಮಾತ್ರವಲ್ಲದೆ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಬಾಂಗ್ಲಾದೇಶದಲ್ಲಿಯೂ ಭಾರಿ ಪ್ರವಾಹ ಮತ್ತು ಭೂಕುಸಿತಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಮತ್ತೊಂದೆಡೆ ಅಣೆಕಟ್ಟು ಕೆಳ ಹರಿವಿನ ದೇಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆದರೆ ಚೀನಾ ಇದನ್ನು ಒಪ್ಪಿಕೊಳ್ತಿಲ್ಲ.
ಇದನ್ನೂ ಓದಿ: ಬಗೆದಷ್ಟು ಬಯಲಾಗ್ತಿದೆ ರೋಹನ್ ಮಾಯಾಜಾಲ.. ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ