/newsfirstlive-kannada/media/post_attachments/wp-content/uploads/2024/08/marriage3.jpg)
ಮಕ್ಕಳು ಮದುವೆ ಆಗಲಿಲ್ಲ ಎಂದರೆ ಪೋಷಕರು ಒತ್ತಡ ಹಾಕೋದು ಕಂಡಿದ್ದೇವೆ. ಕುಟುಂಬದ ಹಿರಿಯರು ಕೂಡ ಒತ್ತಡ ಹೇರುವ ಎಷ್ಟೋ ಕೇಸುಗಳು ನೋಡಿದ್ದೇವೆ. ಆದರೀಗ ಚೀನಾದಲ್ಲಿ ಮಾತ್ರ ಸಂಸ್ಥೆಯೊಂದು ಕೆಲಸಗಾರರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಿದ್ದು, ಮದುವೆ ಆಗಲೇಬೇಕು ಎಂದು ಕಂಡೀಷನ್​ ಹಾಕಿದೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸೆಪ್ಟೆಂಬರ್ ಒಳಗೆ ಮದುವೆಯಾಗದೆ ಹೋದರೆ ಕೆಲಸದಿಂದ ತೆಗೆದು ಹಾಕುವುದಾಗಿ ಸಂಸ್ಥೆಯೊಂದು ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರೋ ಉದ್ಯೋಗಿಗಳಿಗೆ ವಾರ್ನ್​ ಮಾಡಿದೆ. ಅದರಲ್ಲೂ ಅವಿವಾಹಿತ ಯುವಕ ಯುವತಿಯರು ಆದಷ್ಟು ಬೇಗ ಮದುವೆ ಆಗಲೇಬೇಕು ಎಂದು ಹೇಳಿದೆ. ಇದರ ಪರಿಣಾಮ ಅವಿವಾಹಿತ ಸಿಂಗಲ್ಸ್‌ಗಳಿಗೆ ದಿಕ್ಕು ತೋಚದಾಗಿದ್ದಾರೆ.
ಏನಿದು ಶಾಕಿಂಗ್​ ಪಾಲಿಸಿ?
ಚೀನಾದ ಕಂಪನಿ ಈ ಶಾಕಿಂಗ್​​​ ಪಾಲಿಸಿ ಜಾರಿಗೆ ತಂದಿದೆ. ಸಂಸ್ಥೆಯಲ್ಲಿ ಮದುವೆ ಪ್ರಮಾಣ ಹೆಚ್ಚು ಮಾಡುವುದು ಇದರ ಹಿಂದಿನ ಉದ್ದೇಶ ಆಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಅನೇಕರು ಸಂಸ್ಥೆಯ ಈ ವಿವಾದಾತ್ಮಕ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರದಿಯ ಪ್ರಕಾರ ಕಂಪನಿ ಜನವರಿ ತಿಂಗಳಲ್ಲೇ ಈ ವಿವಾದಿತ ಕಾನೂನು ಜಾರಿಗೆ ತಂದಿದೆ.
28-58 ವರ್ಷ ಒಳಗಿನ ವಯಸ್ಸಿನವರೇ ಸಂಸ್ಥೆಯ ಟಾರ್ಗೆಟ್​ ಆಗಿದೆ. ಒಂಟಿಯಾಗಿರೋ ಹಾಗೂ ವಿಚ್ಛೇದಿತ ಉದ್ಯೋಗಿಗಳಿಗೆ ಈ ಕಾನೂನು ಅನ್ವಯ ಆಗಲಿದೆ. ತನ್ನ ಕಚೇರಿಯಲ್ಲಿರುವ ಸಿಬ್ಬಂದಿ ಸೆಪ್ಟೆಂಬರ್ ತಿಂಗಳ ಒಳಗೆ ಮದುವೆ ಆಗಲೇಬೇಕಿದೆ. ಈ ನಿಯಮ ಪಾಲಿಸದ ಎಲ್ಲರನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಕುಸಿಯುತ್ತಿರೋ ಜನಸಂಖ್ಯೆ
ಸದ್ಯ ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿದೆ. ವಿವಾಹಗಳು ಸಂಖ್ಯೆ ಕೂಡ ಕಡಿಮೆ ಆಗಿದೆ. ಕಳೆದ ವರ್ಷ ವಿವಾಹಗಳ ಸಂಖ್ಯೆ 6.1 ಮಿಲಿಯನ್‌ಗೆ ಇಳಿದಿತ್ತು. ಇದಕ್ಕೂ ಮುನ್ನ 7.68 ಮಿಲಿಯನ್ ಇದ್ದು, ಈಗ 20.5 ಪ್ರತಿಶತದಷ್ಟು ಕುಸಿತ ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us