/newsfirstlive-kannada/media/post_attachments/wp-content/uploads/2025/01/PIG-FARMING-1.jpg)
ಬಹುತೇಕರು ಕೈತುಂಬಾ ಸಂಬಳ ಸಿಗುವ ಉದ್ಯೋಗ ಸಿಕ್ಕರೆ ಸಾಕು ಎಂದು ಅಂದುಕೊಳ್ಳುತ್ತಾರೆ. ಅಂತಹವರ ನಡುವೆ ಯುವತಿಯೊಬ್ಬಳು ಫ್ಲೈಟ್ ಅಟೆಂಡೆಂಟ್ ಕೆಲಸವನ್ನು ಬಿಟ್ಟು ಹಂದಿ ಸಾಕಣೆ ಮಾಡುತ್ತಿರುವ ಘಟನೆ ಚೀನಾದಲ್ಲಿ ಕಂಡು ಬಂದಿದೆ. ಚೀನಾದ ಶಾಂಘೈನ ಯಾಂಗ್ ಯಾಂಕ್ಸಿ ಎಂಬ 27 ವರ್ಷದ ಯುವತಿ, ತನ್ನ ಹೆತ್ತವರು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು ಎನ್ನುವ ಉದ್ದೇಶದಿಂದ, ಏರ್ ಹೋಸ್ಟೆಸ್ ಕೆಲಸವನ್ನು ತೊರೆದು ಈಗ ಹಂದಿ ಫಾರ್ಮ್ ನಡೆಸಿಕೊಂಡು ಹೋಗುತ್ತಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:13 ವರ್ಷದ ವಿದ್ಯಾರ್ಥಿ ಜತೆ ಮಲಗಿ ಮಗು ಮಾಡಿಕೊಂಡ ಶಿಕ್ಷಕಿ; ಬೆಡ್ರೂಮ್ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?
ಚೀನಾದ 27 ವರ್ಷದ ಯಂಗ್ ಯಂಕ್ಸಿ ಗ್ರಾಮೀಣ ಭಾಗದಲ್ಲಿ ಬೆಳೆದಂತಹ ಹುಡುಗಿ ತನ್ನ ಪದವಿ ಮುಗಿದ ಬಳಿಕ ಐದು ವರ್ಷ ವಿಮಾನಯಾನ ಸಂಸ್ಥೆಯೊಂದರಲ್ಲಿ ಫ್ಲೈಟ್ ಅಟೆಂಡಂಟ್ ಆಗಿ ಕೆಲಸ ನಿರ್ವಹಿಸಿದರು. ಇಷ್ಟ ಸಾಕಗಲ್ಲ, ಬೇರೆ ಏನಾದರೂ ಸಾಧಿಸಬೇಕು. ಬೇರೆಯವರಂತೆ ನಾನು ಹೆಚ್ಚು ಹೆಚ್ಚು ಹಣವನ್ನು ಮಾಡಬೇಕು ಎಂಬ ಹಂಬಲ ಅವರಲ್ಲಿ ಬೆಳೆಯಿತು. ಶಾಂಘೈ ಏರ್ಲೈನ್ಸ್ನಲ್ಲಿದ್ದ ಕೆಲಸವನ್ನು ಬಿಟ್ಟು ತನ್ನದೇ ಒಂದು ಸ್ವಯಂ ಉದ್ಯೋಗ ಶುರು ಮಾಡಿದರು.
ಇದನ್ನೂ ಓದಿ:ಅಮೆರಿಕಾದಲ್ಲಿ ಅವಧಿಗೂ ಮುನ್ನ ಹೆರಿಗೆಗೆ ಮುಗಿಬಿದ್ದ ಅನಿವಾಸಿ ಭಾರತೀಯರು; ಕಾರಣವೇನು?
ಕೇವಲ 2800 ಯೌನ್ ಸಂಬಳ ಪಡೆಯುತ್ತಿದ್ದ ಯಂಕ್ಸಿ, ತನ್ನದೇ ಸ್ವಯಂ ಉದ್ಯಮ ಶುರು ಮಾಡುವಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಸಂಕಷ್ಟ ಕಾಲಗಳು ಅವರನ್ನು ಕಾಡಿದವು. ಆದರೂ ಕೂಡ ಛಲ ಬಿಡದ ಹಠವಾದಿ ತಂದೆ ತಾಯಿಂದ ಕೊಂಚ ಹಣಕಾಸಿನ ಸಹಾಯ ಪಡೆದು ಹಂದಿ ಸಾಕಾಣಿಕೆ ಉದ್ಯಮ ಆರಂಭಿಸಿದರು. ಮೊದಲ ದಿನದಿಂದಲೇ ಕೈ ಹಿಡಿದು ಈ ಉದ್ಯಮ ಕೇವಲ ಎರಡು ತಿಂಗಳಲ್ಲಿ ಈ ಯುವತಿಗೆ 24 ಲಕ್ಷ ರೂಪಾಯಿ ಲಾಭ ತಂದುಕೊಟ್ಟಿತು.
ಇನ್ನು ಇವರು ರೂರಲ್ ಫಾರ್ಮಿಂಗ್ ಬಗ್ಗೆ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡುತ್ತಾರೆ. ಅದನ್ನು ಸೋಷಿಯಲ್ ಮೀಡಿಯಾಲ್ಲೂ ಪೋಸ್ಟ್ ಮಾಡುತ್ತಾರೆ ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಇವರಿಗೆ ಸುಮಾರು 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಅವರ ವಿಡಿಯೋದಲ್ಲಿ ಸಾಮಾನ್ಯವಾಗಿ ಹಂದಿ ಸಾಕಾಣಿಕೆ, ಹಂದಿಗಳಿಗೆ ಆಹಾರಗಳನ್ನು ಹೇಗೆ ಸಿದ್ಧಪಡಿಸಬೇಕು. ಅವುಗಳಿಗೆ ಹೇಗೆ ಆಹಾರ ಕೊಡಬೇಕು.ಅವುಗಳನ್ನು ಹೇಗೆಲ್ಲಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬೆಲ್ಲಾ ಮಾಹಿತಿಗಳನ್ನು ನೀಡುತ್ತಾರೆ. ಇವೆಲ್ಲವೂ ಕೂಡ ಜನರ ಗಮನ ಸೆಳೆದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ