ಡ್ರೋನ್​​ ಮೂಲಕ ಹೆಂಡತಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಗಂಡ.. ಆಮೇಲೆ ನಡೆದಿದ್ದೇ ಬೇರೆ!

author-image
Bheemappa
Updated On
ಡ್ರೋನ್​​ ಮೂಲಕ ಹೆಂಡತಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಗಂಡ.. ಆಮೇಲೆ ನಡೆದಿದ್ದೇ ಬೇರೆ!
Advertisment
  • ಪೋಷಕರನ್ನು ಭೇಟಿ ಮಾಡಬೇಕೆಂದು ಪದೇ ಪದೇ ಹೋಗುತ್ತಿದ್ದ ಪತ್ನಿ
  • ಹೆಂಡತಿ ಮಾಡುವ ನಾಟಕದಿಂದಲೇ ಅನುಮಾನ ಇಟ್ಟುಕೊಂಡಿದ್ದ ಗಂಡ
  • ತನ್ನ ಹೆಂಡತಿ ಅನೈತಿಕ ಸಂಬಂಧ ಡ್ರೋನ್ ಮೂಲಕ ಪತ್ತೆ ಮಾಡಿದ್ದು ಹೇಗೆ?

ತನ್ನ ಹೆಂಡತಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನು ಆಕೆಯ ಗಂಡ ಡ್ರೋನ್ ಮೂಲಕ ಪತ್ತೆ ಹಚ್ಚಿದ್ದಾನೆ. ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

ಇದನ್ನೂ ಓದಿ:ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ

ಚೀನಾದ ಹುಬೈ ಪ್ರಾಂತ್ಯದ ಶಿಯಾನ್‌ನ ನಿವಾಸಿ ಜಿಂಗ್ ಎನ್ನುವ 33 ವರ್ಷದ ವ್ಯಕ್ತಿ ಟೆಕ್ನಾಲಾಜಿ ಮೂಲಕ ತನ್ನ ಹೆಂಡತಿ ವೂಳ ಅನೈತಿಕ ಸಂಬಂಧವನ್ನು ಪತ್ತೆ ಹಚ್ಚಿದ್ದಾನೆ. ಇವರಿಬ್ಬರು ಮದುವೆಯಾದ ಮೇಲೆ ಮೊದಲು ಅನ್ಯೋನ್ಯವಾಗಿದ್ದರು. ಇಬ್ಬರಲ್ಲೂ ಯಾವುದೇ ಅನುಮಾನಗಳು ಸುಳಿದಿರಲಿಲ್ಲ. ಆದರೆ ಕಳೆದ ವರ್ಷದಿಂದ ಹೆಂಡತಿ, ಗಂಡನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಿದಳು. ತನ್ನ ಪೋಷಕರನ್ನು, ಸಂಬಂಧಿಗಳನ್ನು ಭೇಟಿ ಮಾಡಬೇಕೆಂದು ಪದೇ ಪದೇ ಗಂಡನನ್ನು ಬಿಟ್ಟು ಹೋಗುತ್ತಿದ್ದಳು. ಇದರಿಂದ ಗಂಡ ಬೇಸರಕ್ಕೆ ಒಳಗಾಗುವುದರ ಜೊತೆಗೆ ಆತನಲ್ಲಿ ಅನುಮಾನಗಳು ಶುರುವಾದವು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಕ್ಷ್‌ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?

publive-image

ಹೀಗಾಗಿಯೇ ತನ್ನ ಹೆಂಡತಿಯ ಜಾಡನ್ನು ಪತ್ತೆ ಹಚ್ಚಲು ಟೆಕ್ನಾಲಾಜಿ ಮೊರೆ ಹೋಗಿ ಡ್ರೋನ್ ಅನ್ನು ಬಳಕೆ ಮಾಡಿದನು. ಮನೆ ಬಿಟ್ಟ ತಕ್ಷಣ ಹೆಂಡತಿ ತನ್ನ ಕಾರನ್ನು ತೆಗೆದುಕೊಂಡು ನಿರ್ಜನ ಪ್ರದೇಶದ ಕಡೆಗೆ ಹೋಗುತ್ತಿರುವುದು ಡ್ರೋನ್ ಮೂಲಕ ಕಂಡುಕೊಂಡನು. ಅಲ್ಲಿ ಅವಳು ಒಬ್ಬ ವ್ಯಕ್ತಿಯನ್ನು ಭೇಟಿಯಾಗಿ ಆತನ ಕೈ ಹಿಡಿದು ಪಾಳು ಬಿದ್ದ ಮನೆ ಒಳಗೆ ಹೋದಳು. ಬಳಿಕ 20 ನಿಮಿಷಗಳ ನಂತರ ಇಬ್ಬರು ಹೊರಗೆ ಬಂದು ವೂ ತನ್ನ ಕಂಪನಿಗೆ ಕೆಲಸಕ್ಕೆಂದು ಹೋದಳು. ಸದ್ಯ ಈ ಡ್ರೋನ್​ ದೃಶ್ಯಗಳನ್ನೇ ಸಾಕ್ಷಿಗಳಾಗಿ ಇಟ್ಟುಕೊಂಡು ಹೆಂಡತಿಯಿಂದ ಡಿವೋರ್ಸ್​ ಪಡೆಯಲು ಗಂಡ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೊಹರಂ ಆಚರಣೆಯಲ್ಲಿ ಅವಘಡ.. ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ, ಸಾವು

ಇನ್ನು ಜಿಂಗ್​ನ ಹೆಂಡತಿ ವೂಳು ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಬೇರೆ ಯಾರು ಅಲ್ಲ, ಆಕೆ ಕೆಲಸ ಮಾಡುವ ಕಂಪನಿಯ ಬಾಸ್ ಆಗಿದ್ದಾನೆ. ಬಾಸ್​ ಹಾಗೂ ಬಾಸ್ ಹೆಂಡತಿ ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಅಲ್ಲಿ ಏನು ಮಾಡೋಕೆ ಆಗದ ಕಾರಣ, ಜಿಂಗ್ ಹೆಂಡತಿಯನ್ನು ಆಗಾಗ ಆ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment