/newsfirstlive-kannada/media/post_attachments/wp-content/uploads/2025/01/HMPV-VIRUS.jpg)
ಸದ್ಯ ಚೀನಾದಲ್ಲಿ ಕಂಡು ಬಂದಿರುವ ಹೆಚ್ಎಂಪಿವಿ ವೈರಸ್ ಕೋವಿಡ್ ವೈರಸ್ ಸೃಷ್ಟಿಸಿದ ಆತಂಕವನ್ನೇ ಸೃಷ್ಟಿಸಿದೆ. ಇದು ಕೂಡ ಕೋವಿಡ್ ರೀತಿ ಎಲ್ಲಿ ವಿಶ್ವವ್ಯಾಪಿ ಹರಡಿ, ಜನರ ಜೀವನವನ್ನು ಇನ್ನೊಮ್ಮೆ ಲಾಕ್ಡೌನ್ ಒಳಗೆ ನೂಕುತ್ತದೆಯೋ ಎಂಬ ಭೀತಿ ಶುರುವಾಗಿದೆ. ಆದ್ರೆ ಸಾಂಕ್ರಾಮಿಕ ರೋಗ ತಜ್ಞರಾದ ಸುನೀಲ್ಕುಮಾರ್ ದೊಡ್ಡೇರಿಯವರು ನ್ಯೂಸ್ಫಸ್ಟ್ ಜೊತೆ ಮಾತನಾಡಿ ಯಾವುದೇ ಕಾರಣಕ್ಕೂ ಭೀತಿ ಪಡುವ ಅವಶ್ಯಕತೆ ಇಲ್ಲ. ಈ ಒಂದು ವೈರಸ್ ಕೋವಿಡ್ನಷ್ಟು ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ.
‘ಕೋವಿಡ್ನಷ್ಟು ಅಪಾಯಕಾರಿ ವೈರಸ್ ಅಲ್ಲ’
ಈಗ ಚೀನಾದಲ್ಲಿ ನಾಳ್ಕು ಪ್ರಮುಖ ವೈರಸ್ಗಳು ಇವೆ. ಉಸಿರಾಟದ ಸೋಂಕಗಳೆಂದು ಕರೆಯುವ ಸಮಸ್ಯೆಗಳಿರುವ ಪ್ರಕರಣಗಳಲ್ಲಿ ಜಾಸ್ತಿ ಕಂಡು ಬರುತ್ತಿವೆ ಅದರಲ್ಲೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಾಲ್ಕು ವೈರಸ್ನಲ್ಲಿ ಒಂದು ಹೆಚ್ಎಂಪಿವಿ ವೈರಸ್ ಅಂತ ಒಂದಿದೆ ಅದು ಒಂದು ಹೊಸ ಲಂಗ್ ವೈರಸ್. ಈ ವೈರಸ್ಗಳು ಚೈನಾದಲ್ಲಿ ಕಳೆದ ಒಂದು ತಿಂಗಳಿಂದ ಪ್ರಕರಣಗಳನ್ನು ಹೆಚ್ಚಿಸುತ್ತಿವೆ.
ಐದು ವರ್ಷಗಳ ಹಿಂದೆ ನೋಡಿದಾಗ ಕೋವಿಡ್ ಶುರುವಾಗಿದ್ದು ಕೂಡ ಇದೇ ರೀತಿಯಲ್ಲಿ ಹಾಗಾಗಿ ಆತಂಕ ಆಗಿರುವುದು ಸಾಮಾನ್ಯ ನಾಲ್ಕು ವೈರಸ್ನಲ್ಲಿ ಹೆಚ್ಎಂಪಿವಿ ವೈರಸ್ ಮೊದಲ ಬಾರಿ 2001ರಲ್ಲಿ ನೆದರ್ಲ್ಯಾಂಡ್ನಲ್ಲಿ ಮೊದಲ ಬಾರಿ ಪತ್ತೆಯಾಗಿತ್ತು. ಇದು ಈಗ ಚೈನಾದಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ 14 ವರ್ಷದೊಳಗಿನ ಮಕ್ಕಳಲ್ಲಿ ಇದು ಜಾಸ್ತಿ ಕಾಣಿಸುತ್ತಿದೆ. ಈಗೀನ ಸ್ಥಿತಿಯಲ್ಲಿ ನೋಡಿದಾಗ ಕೇಸಸ್ಗಳು ಜಾಸ್ತಿ ಆಗಿರುವುದರಿಂದ ಚೈನಾದಲ್ಲಿ ಸ್ವಲ್ಪ ಆತಂಕ ಮನೆಮಾಡಿದೆ ಅಂತ ಹೇಳಬಹುದು ಆದ್ರೆ ಇನ್ನೂವರೆಗೂ ಚೀನಾದವರು ಪಬ್ಲಿಕ್ ಎಮರ್ಜೆನ್ಸಿ ತರ ಏನನ್ನೂ ಘೋಷಣೆ ಮಾಡಿಲ್ಲ ಇತ್ತ ವಿಶ್ವ ಆರೋಗ್ಯ ಸಂಸ್ಥೆಯೂ ಆ ರೀತಿ ಹೇಳಿಲ್ಲ. ಎಂದು ಸುನೀಲ್ ಕುಮಾರ್ ದೊಡ್ಡೆರಿ ಹೇಳಿದ್ದಾರೆ.
ಯಾವುದೇ ಒಂದು ಹೊಸ ವೈರಸ್ ಬಂದಾಗ ಎಲ್ಲರಲ್ಲೂ ಆತಂಕ ಮನೆ ಮಾಡೋದು ಸಹಜ. ಚೈನಾದಲ್ಲಿ ಕಂಡಿರುವ ನಾಲ್ಕು ವೈರಸ್ಗಳಲ್ಲಿ ಹೆಚ್ಎಂಪಿವಿ ನಮ್ಮ ದೇಶದಲ್ಲಿ ಸದ್ಯಕ್ಕೆ ಕಾಣಿಸಿಕೊಂಡ ಉದಾಹರಣೆಯಿಲ್ಲ. ಅದಕ್ಕೆ ಸಂಬಂಧಪಟ್ಟ ನಿಖರವಾದ ಮಾಹಿತಿಯೂ ಕೂಡ ಇಲ್ಲ. ಆದ್ರೆ ಒಂದು ಏನು ಅಂದ್ರೆ ಈಗ ಕೊವಿಡ್ ಒಂದು ಪಾಠ ಇರೋದ್ರಿಂದ ಬರುವ ವೈರಸ್ಗಳೆಲ್ಲಾ ಅದೇ ರೀತಿ ಸಮಸ್ಯೆ ಮಾಡುತ್ತವೆ ಎಂದು ಅಂದುಕೊಳ್ಳಬಾರದು ಜನಗಳು ಕೂಡ ಆತಂಕ ಪಡವು ಅಗತ್ಯವಿಲ್ಲ. ಕೋವಿಡ್ ಬಳಿಕ ಜಗತ್ತಿನಲ್ಲಿ ಅನೇಕ ಹೊಸ ಹೊಸ ವೈರಸ್ಗಳು ಬಂದು ಹೋಗಿವೆ.
‘ಮುಂಜಾಗ್ರತೆವಹಿಸದಿದ್ರೆ ಎಲ್ಲಾ ವೈರಸ್ ಅಪಾಯವೇ’
ಅವು ಕೋವಿಡ್ ರೀತಿ ಮಾರಣಾಂತಿಕವಾಗಿ ಕಾಡಲಿಲ್ಲ. ಸದ್ಯ ಇರುವ ಹವಾಮಾನ ಡಿಸೆಂಬರ್ನಿಂದ ಫೆಬ್ರವರಿವರೆಗೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ.ಹೀಗಾಗಿ ಕೇಸ್ಗಳ ಸಂಖ್ಯೆ ಜಾಸ್ತಿ ಆಗಬಹುದು. ಚೀನಾದಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಆಗಿರುವುದರಿಂದ ಜಗತ್ತಿನ ನಾನಾ ಭಾಗದ ಜನರು ಬಂದಿರುತ್ತಾರೆ. ಇದು ಬೇರೆ ದೇಶಗಳಲ್ಲಿ ಹಾಗೂ ಭಾರತದಲ್ಲಿಯೂ ಬರುವ ಸಾಧ್ಯತೆ ಇದೆ ಆದ್ರೆ ಇದು ಸದ್ಯಕ್ಕೆ ಈ ಕೇಸ್ ಬಂದರೂ ಕೂಡ ಗಾಬರಿಯಾಗುವಂತಹ ಅವಶ್ಯಕತೆ ಇಲ್ಲ. ಈ ವೈರಸ್ ಅಷ್ಟೊಂದು ಅಪಾಯಕಾರಿ ಅಲ್ಲ. ಇದರಲ್ಲಿ 5 ರಿಂದ 10 ಪರ್ಸೆಮಟ್ನಷ್ಟು ನ್ಯೂಮೊನಿಯಾ ಹಾಗೂ ಬ್ರಾಂಕಲೈಟಿಸ್ ಅಂತ ಎರಡು ಸಮಸ್ಯೆಗಳು ಉದ್ಭವಿಸಬಹುದು. ಮುಂಜಾಗ್ರತ ಕ್ರಮಗಳನ್ನು ಬೇರೆ ವೈರಸ್ಗಳಿಗೆ ಹೇಗೆ ವಹಿಸುತ್ತೇವೋ ಇದಕ್ಕೂ ಕೂಡ ವಹಿಸಬೇಕು ಎಂದು ಸುನೀಲ್ ಕುಮಾರ್ ದದ್ದೇರಿ ಹೇಳಿದ್ದಾರೆ.
ಇದನ್ನೂ ಓದಿ: ಕತ್ತಿನಲ್ಲಿದ್ದ ಸರ ಬಳೆಯಾಗಿ ಕೈಗೆ ಬಂತು.. ಕರಿಮಣಿ, ಮುತ್ತು, ಲಾಕೆಟ್ ಅಷ್ಟೇ ಅಲ್ಲ ಇನ್ನೂ ಏನೋ ಇದೆ..!
ಇನ್ನೂ ಈ ವೈರಸ್ ಕೋವಿಡ್ನಷ್ಟೇ ಅಪಾಯ ತಂದಿಡುವಂತ ವೈರಸ್ ಆಗಿದ್ದರೆ ಇಷ್ಟೊತ್ತಿಗೆ ವಿಶ್ವ ಆರೋಗ್ಯ ಸಂಸ್ಥ ಹಲವು ಮಾರ್ಗಸೂಚಿಗಳನ್ನು ಹೊರಡಿಸುತ್ತಿತ್ತು. ಅದು ಯಾವದೇ ರೀತಿಯ ಘೋಷಣೆಗಳನ್ನು ಮಾಡಿಲ್ಲ. ಈಗಾಗಲೇ ಹೇಳಿದಂತೆ ಕೋವಿಡ್ ಬಳಿಕ ಅನೇಕ ವೈರಸ್ಗಳು ಬಂದಿವೆ. ಆದರೆ ಅವು ಯಾವವೂ ಕೋವಿಡ್ ರೀತಿ ಮಾರಣಾಂತಿಕವಾಗಿ ಪರಿಣಾಮ ಬೀರಿಲ್ಲ. ಈ ವೈರಸ್ ಕೂಡ ಅದೇ ರೀತಿ ಆದ್ರೆ ಪ್ರಮುಖವಾಗಿ ಮಕ್ಕಳು, ಕ್ಯಾನ್ಸರ್ ಹಾಗೂ ಹೆಚ್ಐವಿಯಿಂದ ಬಳಲುತ್ತಿರುವವರು, ಹಿರಿಯ ನಾಗರಿಕರು ಹಾಗೂ ಬಾಣಂತಿಯರು ಸ್ವಲ್ಪ ಮುಂಜಾಗ್ರತೆಯಿಂದ ಇರಬೇಕು. ಅವರಲ್ಲಿ ಈ ವೈರಸ್ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೊಟ್ಟಾಯಂನಲ್ಲಿ ಅಪಘಾತ.. ದೊಡ್ಡ ಪ್ರಪಾತಕ್ಕೆ ಜಾರಿದ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್
ಮುಂಜಾಗ್ರತಾ ಕ್ರಮಗಳು ಅಂದರೆ ಸಾಮಾನ್ಯವಾಗಿ ಸೀನು ಹಾಗೂ ಕೆಮ್ಮು ಬಂದಾಗ ಕೈವಸ್ತ್ರದಿಂದ ಮುಖ ಮುಚ್ಚಿಕೊಂಡು ಕೆಮ್ಮುವುದು. ಆಗಾಗ ಕೈತೊಳೆಯುವುದು. ಜನಬೀಡ ಪ್ರದೇಶದಲ್ಲಿ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೋಗುವುದು. ಏನಾದರು ವೈರಲ್ ಇನ್ಫೆಕ್ಷನ್ನ ತರಹ ಲಕ್ಷಣಗಳು ಕಂಡು ಬಂದರೆ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಕೋವಿಡ್ ವೈರಸ್ಗೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೆವೋ ಅವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಎಲ್ಲಾ ವೈರಸ್ ಇನ್ಫೆಕ್ಷನ್ಗಳಿಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ