/newsfirstlive-kannada/media/post_attachments/wp-content/uploads/2025/05/CHINA.jpg)
ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ತಲುಪಿದೆ. ಎರಡೂ ದೇಶಗಳ ಮಧ್ಯೆ ದೊಡ್ಡ ಮೊಟ್ಟದಲ್ಲಿ ಘರ್ಷಣೆ ಆಗ್ತಿದ್ದು, ದೊಡ್ಡ ಅಪಾಯದ ಸೂಚನೆ ಸಿಗ್ತಿದೆ. ಚೀನಾ, ತನ್ನ ಆಪ್ತಮಿತ್ರ ಪಾಕ್​​ಗೆ ಯುದ್ಧ ಪ್ರಚೋದನೆ ನೀಡಿ ಈಗ ಶಾಂತಿಯ ಮಂತ್ರವನ್ನು ಪಠಿಸುತ್ತಿದೆ.
ಪಾಕ್ ಮೇಲೆ ಭಾರತದ ದಾಳಿಗೆ ಪ್ರತಿಕ್ರಿಯಿಸಿದ ಚೀನಾ, ಭಾರತ-ಪಾಕಿಸ್ತಾನ ರಾಷ್ಟ್ರಗಳು ಶಾಂತಿ ಕಾಪಾಡಿಕೊಳ್ಳಬೇಕು. ನಾವು ಎಲ್ಲಾ ರೀತಿಯ ಭಯೋತ್ಪಾದನಾ ಕೃತ್ಯವನ್ನ ಖಂಡಿಸುತ್ತೇವೆ. ಭಾರತ, ಪಾಕಿಸ್ತಾನ ಎಂದಿಗೂ ನೆರೆ ಹೊರೆಯ ದೇಶಗಳು. ಎರಡೂ ದೇಶಗಳೂ ಶಾಂತಿಯನ್ನ ಕಾಪಾಡಿಕೊಳ್ಳಬೇಕು ಎಂದು ವಿದೇಶಾಂಗ ಸಚಿವ ವಾಂಗ್​ ಯಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಧಿಕೃತ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ.. ಗಡಿಯಲ್ಲಿ ಪಾಕ್​​ ಡ್ರೋಣ್ ಪುಡಿಪುಡಿ..! VIDEO
ಆದರೆ ಪಾಕ್ ಭಯೋತ್ಪಾದನೆ ಕೃತ್ಯದ ಬಗ್ಗೆ ಚೀನಾ ಮೌನವಹಿಸಿದೆ. ಭಾರತಕ್ಕೆ ಶಾಂತಿ ಕಾಪಾಡಿಕೊಳ್ಳುವಂತೆ ಬಿಟ್ಟಿ ಸಲಹೆಯನ್ನು ರವಾನಿಸಿದೆ. ಹಾಗೆ ನೋಡೋದಾದ್ರೆ, ಚೀನಾ ಮತ್ತು ಪಾಕಿಸ್ತಾನ ಯಾವತ್ತಿದ್ದರೂ ಭಾಯಿಭಾಯಿ. ಚೀನಾದ ಬೆಂಬಲದಿಂದಲೇ ಪಾಕಿಸ್ತಾನ ಯುದ್ಧಪ್ರಚೋದಿತ ಕೃತ್ಯಗಳನ್ನು ನಡೆಸ್ತಿರೋದು. ಮಾತ್ರವಲ್ಲ, ಪಾಕಿಸ್ತಾನದ ಸೇನಾ ನೆಲೆಗಳಲ್ಲಿ ತುಂಬಿ ತುಳುಕುತ್ತಿರೋದೆಲ್ಲ ಚೀನಾ ಮಾಲ್​​ಗಳೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us