/newsfirstlive-kannada/media/post_attachments/wp-content/uploads/2025/04/US_DONALD_TRUMP_CHINA.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ವಸ್ತುಗಳ ಮೇಲೆ ಹೊಸ ತೆರಿಗೆ ನೀತಿ ಜಾರಿ ಮಾಡಿರುವುದು ತಲ್ಲಣ ಮೂಡಿಸಿದೆ. ಇದರಲ್ಲಿ ಚೀನಾದ ವಸ್ತುಗಳ ಮೇಲೆ ಟ್ರಂಪ್ ಶೇಕಡಾ 104 ರಷ್ಟು ಸುಂಕ ವಿಧಿಸಿದ್ದರು. ಸದ್ಯ ಇದಕ್ಕೆ ಕೌಂಟರ್ ಕೊಟ್ಟಿರುವ ಚೀನಾ, ಅಮೆರಿಕ ವಸ್ತುಗಳ ಮೇಲೆ ಪ್ರತಿಸುಂಕ ಹಾಕಿದೆ.
ಅಮೆರಿಕಕ್ಕೆ ಕೌಂಟರ್ ಕೊಟ್ಟಿರುವ ಚೀನಾ, ಯುಎಸ್ನಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡಾ 84 ರಷ್ಟು ಪ್ರತಿ ಸುಂಕ ವಿಧಿಸಲಾಗಿದೆ. ಇದು ಏಪ್ರಿಲ್ 10 ರಿಂದ ಜಾರಿಗೆ ಬರುತ್ತದೆ. ಅಮೆರಿಕ ಶೇಕಡಾ 104 ರಷ್ಟು ತೆರಿಗೆ ವಿಧಿಸಿರುವುದು ಬೆದರಿಕೆಯ ನೀತಿ ಆಗಿದೆ ಎಂದು ಚೀನಾದ ವಿದೇಶಾಂಗ ಸಚಿವರು ಆರೋಪ ಮಾಡಿದ್ದಾರೆ. ಈ ಹಿಂದೆ ಅಮೆರಿಕ ವಸ್ತುಗಳ ಮೇಲೆ ಶೇಕಡಾ 34 ರಷ್ಟು ಹೆಚ್ಚುವರಿ ತೆರಿಗೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮ್ಯಾಕ್ಸ್ವೆಲ್ಗೆ BCCI ಬಿಗ್ ಶಾಕ್.. ನಿಯಮ ತಪ್ಪಿದ ಆಲ್ರೌಂಡರ್ಗೆ ಶಿಕ್ಷೆ!
ಅಮೆರಿಕದ 12 ವಸ್ತುಗಳ ಮೇಲೆ ರಪ್ತು ನಿಯಂತ್ರಣ ಘೋಷಣೆ ಮಾಡಲಾಗಿದ್ದು ಇದರಲ್ಲಿ 6 ವಿಶ್ವಾಸಾರ್ಹವಲ್ಲದ್ದು ಎಂದು ಚೀನಾ ಹೇಳಿದೆ. ಪ್ರತಿ ಸುಂಕ ಘೋಷಣೆ ಮಾಡಿದ ಬೆನಲ್ಲೇ ಅಮೆರಿಕದಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿದೆ ಎಂದು ವರದಿ ಮಾಡಲಾಗಿದೆ.
ಅಮೆರಿಕ ಹಾಕಿರುವ ಸುಂಕಕ್ಕೆ ಚೀನಾದ ಪ್ರತೀಕಾರದ ತೆರಿಗೆ ಇದಾಗಿದೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ರತಿಸುಂಕ ನೀತಿಯಿಂದ ವಿಶ್ವದ 50 ರಾಷ್ಟ್ರಗಳಿಗೆ ಈಗಾಗಲೇ ಬಿಸಿ ತಟ್ಟಿದೆ. ಹೀಗಾಗಿ ಇದರಲ್ಲಿ ಕೆಲವು ರಾಷ್ಟ್ರಗಳು ಅಮೆರಿಕದ ಜೊತೆ ಸಂಧಾನಕ್ಕೆ ಮುಂದಾಗಿವೆ. ಇನ್ನೂ ಕೆಲ ರಾಷ್ಟ್ರ ಏನು ಮಾಡೋದು ಅಂತಾ ಗೊತ್ತಾಗದೆ ಯೋಚಿಸುತ್ತಿವೆ. ಡ್ರ್ಯಾಗನ್ಗೆ ರಾಷ್ಟ್ರದ ಮೇಲೆ ಅಧಿಕ ತೆರಿಗೆ ವಿಧಿಸಿದಕ್ಕೆ ಚೀನಾ ಕೂಡ ತಿರುಗೇಟು ಕೊಟ್ಟಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ