ಕೆರಳಿದ ಚೀನಾ, ಅಮೆರಿಕಾಗೆ ಮತ್ತೆ ಬಿಗ್​​ ಶಾಕ್.. ಏಟಿಗೆ ಎದುರೇಟು ಅಂದ್ರೆ ಇದೇ ಎಂದ ಡ್ರ್ಯಾಗನ್..!

author-image
Ganesh
Updated On
ಕೆರಳಿದ ಚೀನಾ, ಅಮೆರಿಕಾಗೆ ಮತ್ತೆ ಬಿಗ್​​ ಶಾಕ್.. ಏಟಿಗೆ ಎದುರೇಟು ಅಂದ್ರೆ ಇದೇ ಎಂದ ಡ್ರ್ಯಾಗನ್..!
Advertisment
  • ತೀವ್ರಗೊಂಡ ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರ
  • ದೊಡ್ಡಣ್ಣನಿಗೆ ಮತ್ತೆ ಆಮದು ಸುಂಕ ಹೆಚ್ಚಿಸಿದ ಡ್ರ್ಯಾಗನ್
  • ​ಜಾಗತಿಕ ವ್ಯಾಪಾರದಲ್ಲಿ ಏರುಪೇರು ಆಗುವ ನಿರೀಕ್ಷೆ

ವಿಶ್ವದ ಬಲಾಢ್ಯ ಆರ್ಥಿಕತೆಯನ್ನ ಹೊಂದಿರುವ ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ ಮತ್ತಷ್ಟು ಜೋರಾಗಿದೆ. ಅಮೆರಿಕದ ಟ್ಯಾಕ್ಸ್​ ಏಟಿನಿಂದ ಕೆರಳಿರುವ ಚೀನಾ, ಇದೀಗ ದೊಡ್ಡಣ್ಣನ ಮೇಲೆ ಭಾರೀ ಸುಂಕ ಹೇರಿದ್ದು, ತಿರುಗೇಟಿನ ಹೆಜ್ಜೆ ಇಟ್ಟಿದೆ.

ದೊಡ್ಡಣ್ಣನಿಗೆ ಶೇ.125ಕ್ಕೆ ಆಮದು ಸುಂಕ ಹೆಚ್ಚಿಸಿದ ಡ್ರ್ಯಾಗನ್​

ಅಮೆರಿಕ-ಚೀನಾದ ನಡುವಿನ ತೆರಿಗೆ ಯುದ್ಧ ಮತ್ತೊಂದು ಮಜಲು ಪಡೆದಿದೆ. ಅಮೆರಿಕ ವಿಧಿಸಿದ್ದ 145% ತೆರಿಗೆಗೆ ಪ್ರತಿಯಾಗಿ ಈಗ ಚೀನಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 125% ತೆರಿಗೆ ವಿಧಿಸಲು ಮುಂದಾಗಿದೆ. ಇದು ಈ ರಾತ್ರಿಯಿಂದಲೇ ಜಾರಿಗೆ ಬಂದಿದೆ.

ಇದನ್ನೂ ಓದಿ: ಇಬ್ಬರ ಜಗಳದಲ್ಲಿ ಭಾರತಕ್ಕೆ ಲಾಭ.. ಚೈನಾ ಮಾಲು ಈಗ ಅಗ್ಗ! ಯಾವ ವಸ್ತುಗಳು ಚೀಪ್? ಯಾವಾಗ?

publive-image

ಅಮೆರಿಕಾ ಏಟು.. ಚೀನಾದಿಂದ ತಿರುಗೇಟು!

ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಸುಂಕ ಸಮರ ಆರಂಭಿಸಿದ್ದ ಡೊನಾಲ್ಡ್‌ ಟ್ರಂಪ್‌ ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ಬ್ರೇಕ್ ಹಾಕಿದ್ದರು. ಆದ್ರೆ ಚೀನಾ ದೇಶದ ಮೇಲೆ ಮಾತ್ರ ಯಾವುದೆ ಕರುಣೆ ತೋರಿಲ್ಲ. 75 ದೇಶಗಳಿಗೆ ಸ್ವಲ್ಪ ರಿಲೀಫ್‌ ನೀಡಿದರೂ ಚೀನಾದ ಮೇಲಿನ ತೆರಿಗೆಯನ್ನು 105 ಪರ್ಸೆಂಟ್​ನಿಂದ 145 ಪರ್ಸೆಂಟ್​ಗೆ ಏರಿಸಿ ಮತ್ತೆ ದೊಡ್ಡ ಹೊಡೆತ ನೀಡಿದ್ದರು.

ಇದನ್ನೂ ಓದಿ:ಬಿಲ್​​ ಗೇಟ್ಸ್​ ಆಸ್ತಿಯಲ್ಲಿ 1% ಪಾಲು ಮಕ್ಕಳಿಗೆ, ಇನ್ನುಳಿದ 99% ಯಾರಿಗೆ ಸಿಗಲಿದೆ? ರತನ್ ಟಾಟಾ ಮಾದರಿಯೇ?

publive-image

ಈ ಬೆನ್ನಲ್ಲೇ ಅಮೆರಿಕಕ್ಕೆ ಮತ್ತೊಮ್ಮೆ ಚೀನಾ ತಿರುಗೇಟು ನೀಡಿದೆ. ಅಮೆರಿಕದ ಸರಕುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಶೇಕಡಾ 84ರಿಂದ ಶೇಕಡಾ 125ಕ್ಕೆ ಏರಿಸಿರುವುದಾಗಿ ಘೋಷಿಸಿದೆ. ಈ ಮೂಲಕ ಅಮೆರಿಕ ಎಷ್ಟು ಸುಂಕ ವಿಧಿಸಿದ್ರೂ ನಾವು ಜಗ್ಗಲ್ಲ ಎಂಬುದು ಡ್ರ್ಯಾಗನ್​ ರಾಷ್ಟ್ರದ ಸಂದೇಶ.

ಒಟ್ಟಾರೆ ಅಮೆರಿಕಾ ಫಸ್ಟ್ ಅನ್ನೋ ದೂರದೃಷ್ಟಿ ಇಟ್ಕೊಂಡಿರೋ ಟ್ರಂಪ್, ತಮ್ಮ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರೋ ಚೀನಾ ಮೇಲೆ ಒತ್ತಡ ಹಾಕೋದಕ್ಕೆ ಮುಂದಾಗಿತ್ತು. ಆದ್ರೆ ಊಹೆಗೂ ಮೀರಿದಂತೆ ಕೌಂಟರ್ ಕೊಡ್ತಿರೋ ಚೀನಾ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ದೊಡ್ಡಣ್ಣನ ವಿರುದ್ಧ ರಿವೇಂಜ್ ಶುರುಮಾಡಿದ್ದಾರೆ. ಈ ಜಟಾಪಟಿ ಜಾಗತಿಕ ವ್ಯಾಪಾರದಲ್ಲಿ ದೊಡ್ಡ ಏರುಪೇರಿಗೆ ಕಾರಣವಾಗೋ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಆಲ್​ರೌಂಡರ್​ಗೆ ಬಿಗ್ ಶಾಕ್; IPLಗೆ ಬಂದಿದ್ದಕ್ಕೆ ಮುಂಬೈ ತಂಡದ ಪ್ಲೇಯರ್​​ ಬ್ಯಾನ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment