/newsfirstlive-kannada/media/post_attachments/wp-content/uploads/2023/12/Covid-19-1.jpg)
ಬೀಜಿಂಗ್: ಹೋದೆಯಾ ಪಿಶಾಚಿ ಎಂದ್ರೆ, ಬಂದೆ ಗವಾಕ್ಷಿ ಎನ್ನುವಂತೆ ಮತ್ತೊಂದು ಚೀನಾ ವೈರಸ್​​​​ ಒಕ್ಕರಿಸಲು ಕಾದು ಕುಳಿತಿದೆ. ಕೋವಿಡ್​​ ತವರೂರು ಚೀನಾದಲ್ಲಿ ಮತ್ತೆ ವೈರಸ್​​​ ಆರ್ಭಟ ಶುರುವಾಗಿದೆ. ಹೊಸ ವೈರಸ್ ಹರಡುವಿಕೆಯಿಂದ ಇಡೀ ಜಗತ್ತಿನಲ್ಲಿ ಮತ್ತೆ ನಡುಕ ಹುಟ್ಟಿಸಿದ್ದು, ಈ ಬಾರಿ ಒಂದಲ್ಲ, ಎರಡಲ್ಲ, ಹಲವು ವೈರಸ್​ಗಳ ಕಾಟ ಶುರುವಾಗುವ ಭೀತಿ ಎದುರಾಗಿದೆ.
ಕೋವಿಡ್​-19 ಸರಿಯಾಗಿ ಐದು ವರ್ಷಗಳ ಹಿಂದೆ ಇಡೀ ಪ್ರಪಂಚವನ್ನೇ ತನ್ನ ಕದಂಬ ಬಾಹುವಿನಲ್ಲಿ ಬಂಧಿಸಿ ಕಳವಳ ಸೃಷ್ಟಿಸಿತ್ತು. ಚೀನಾದ ವುಹಾನ್​​​ ಲ್ಯಾಬ್​​ನಲ್ಲಿ ಹುಟ್ಟಿ ಇಡೀ ಜಗತ್ತಿಗೆ ಹರಿಡಿದ್ದ ಈ ವೈರಸ್​​​, ಬಿರುಗಾಳಿಯಂತೆ ಇಡೀ ವಿಶ್ವವನ್ನೇ ವ್ಯಾಪಿಸಿ ಬಲಿಪಡೆದ ಜೀವಗಳಿಗೆ ಲೆಕ್ಕವೇ ಇಲ್ಲ. ವೈರಸ್​​ಗಳ ಜನ್ಮಭೂಮಿ ಚೀನಾದಲ್ಲಿ ಮತ್ತೆ ವೈರಸ್​​ಗಳ ಆರ್ಭಟ ಶುರುವಾಗಿದ್ದು, ಇಡೀ ಜಗತ್ತಿಗೆ ಆತಂಕ ಶುರುವಾಗಿದೆ.
ಚೀನಾದಲ್ಲಿ ಮತ್ತೆ ವೈರಸ್​​ ಆರ್ಭಟ
ಲಾಕ್​​ಡೌನ್​​, ಸೀಲ್​​ಡೌನ್​​, ಕ್ವಾರಂಟೈನ್​​, ಮಾಸ್ಕ್​​​​, ಸಾನಿಟೈಜರ್​​​. ಈ ಪದಗಳನ್ನ ಕೇಳ್ತಿದ್ರೇ ಜನ ಒಂದ್ಸಲ ಬೆಚ್ಚಿ ಬೀಳೋದು ಗ್ಯಾರಂಟಿ. ಸದ್ಯ ಈ ಪದಗಳು ಕೋವಿಡ್​​ನ ಜನಕ ಚೀನಾದಲ್ಲಿ ಮತ್ತೆ ಚಾಲ್ತಿಗೆ ಬಂದಿದೆ. ಡ್ರ್ಯಾಗನ್​ ದೇಶದಲ್ಲಿ ವೈರಸ್ ಸೋಂಕುಗಳು ರಣಕೇಕೆ ಹಾಕ್ತಿದ್ದು, ಚೀನಾದಲ್ಲಿ ಮೆಡಿಕಲ್​ ಎಮರ್ಜೆನ್ಸಿ ಘೋಷಿಸಲಾಗಿದೆ.
ಕೋವಿಡ್​​-19 ಮಾತ್ರವಲ್ಲದೇ, ಇನ್​ ಪ್ಲೂಯೆಂಜಾ ಎ, HMPV, ಮೈಕೋ ಪ್ಲಾಸ್ಲಾ ನ್ಯೂಮೋನಿಯಾಗಳ ಎಂಬ ಸಾಂಕ್ರಮಿಕ ರೋಗಗಳ ಕಾಟ ಶುರುವಾಗಿದೆ. ಪ್ರಮುಖವಾಗಿ HMPV ಅಂದ್ರೆ ಹ್ಯೂಮನ್​​ ಮೆಟೋನ್ಯುಮೋ ವೈರಸ್​​ ಚೀನಾದಲ್ಲಿ ಮಹಾಮಾರಿಯಂತೆ ವ್ಯಾಪಿಸಿದ್ದು, ರೋಗಿಗಳಿಂದ ಆಸ್ಪತ್ರೆಗಳು ಮತ್ತು ಶವಗಾರಗಳು ತುಂಬಿ ತುಳುಕುತ್ತಿವೆ.
ಏನಿದು HMPV ವೈರಸ್?
ಹ್ಯೂಮನ್​ ಮೆಟನ್ಯುಮೋ ಎಂದು ಕರೆಯಲ್ಪಡರು ಈ ವೈರಸ್​​​, 2001ರಲ್ಲಿ ಮೊಲದ ಬಾರಿಗೆ ಪತ್ತೆ ಮಾಡಲಾಗಿತ್ತು. ಇದ್ರ ಲಕ್ಷಣಗಳು ಏನು ಅಂತ ನೋಡೊದಾದ್ರೇ, ರೋಗಿಗಳಲ್ಲಿ ಜ್ವರ, ಕೋವಿಡ್​​-19 ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಚಳಿಗಾಲದ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 14 ವರ್ಷದೊಳಗಿನ ಮಕ್ಕಳೇ ಈ ವೈರಸ್​​​ನ ಟಾರ್ಗೆಟ್​​ ಆಗಿದ್ದು, ಇದರ ಇನ್​ ಕ್ಯೂಬೇಷನ್​ ಅವಧಿ ಮೂರರಿಂದ ಆರು ದಿನಗಳವರೆಗೆ ಇದೆ. ಆರು ದಿನಗಳಲ್ಲಿ ಸೋಂಕಿನ ಲಕ್ಷಣ ತೀವ್ರವಾಗಿ ಕಾಣಿಕೊಳ್ಳುತ್ತದೆ. ಸದ್ಯ ಚೀನಾದಲ್ಲಿ ರಣಕೇಕೆ ಹಾಕ್ತಿರುವ ಈ ಹೆಚ್​​ಎಂಪಿವಿ ವೈರಸ್​​ಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಆ್ಯಂಟಿವೈರಲ್​​ ಇಲ್ಲದಿರುವುದು ದುರಾದೃಷ್ಟಕರ ಸಂಗತಿ.
ಸದ್ಯ ಚೀನಾದಲ್ಲಿ ಜನರು ಕಡ್ಡಯವಾಗಿ ಮಾಸ್ಕರ್​ ಧರಿಸಬೇಕು ಮತ್ತು ಕೈಗಳನ್ನು ಆಗಾಗ್ಗೆ ತೋಳೆದುಕೊಳ್ಳಬೇಕು ಎಂಬ ಸೂಚನೆಗಳನ್ನ ಹೊರಡಿಸಲಾಗಿದೆ.
ಚೀನಾ ಪರಿಸ್ಥಿತಿ ಕಣ್ಣಾರೆ ಕಂಡು ಶಾಸಕ ಶಾಕ್
ಮಂಡ್ಯ ಕಾಂಗ್ರೆಸ್​ ಶಾಸಕ ರವಿ ಗಣಿಗ ಚೀನಾದ ಪರಿಸ್ಥಿತಿ ಕಂಡು ಶಾಕ್​ ಆಗಿದ್ದಾರೆ.. ನಾಲ್ಕು ದಿನಗಳ ಕಾಲ ಪ್ರವಾಸದಲ್ಲಿದ್ದ ಶಾಸಕ ರವಿ ಗಣಿಗ ಚೀನಾದ ಪರಿಸ್ಥಿತಿಯನ್ನ ಕಣ್ಣಾರೆ ಕಂಡು ವಿವರಿಸಿದ್ದಾರೆ.. ಶೇ.80% ರಷ್ಟು ಜನ ಮಾಸ್ಕ್ ಧರಿಸಿ ಓಡಾಡ್ತಿದ್ದಾರೆ, ಹೊಸ ವೈರಸ್ ಬಂದಿರಬಹುದು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸ ವೈರಸ್​​ ಬಗ್ಗೆ ಚೀನಾ ಗಪ್​ ಚುಪ್​​
5 ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಮ್ಮೆ ವೈರಸ್​​​ಗಳ ಉತ್ಪಾದಿಸಿ ಬಯೋ ವಾರ್​ ಮಾಡ್ತಿದಿಯಾ ಎಂಬ ಶಂಕೆ ವ್ಯಕ್ತವಾಗಿದೆ. ತಮ್ಮ ರಾಷ್ಟ್ರದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಚೀನಾ ಅಧ್ಯಕ್ಷ ಜಿನ್​ಪಿಂಗ್​​ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಜೊತೆಗೆ ವಿಶ್ವದ ಬೇರೆ ಬೇರೆ ದೇಶಗಳಿಗೂ ಅಲರ್ಟ್​ ನೀಡದೆ ಚೀನಾ ಮೌನವಾಗಿದ್ದು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ವಿಷಮಿಸ್ತಿದ್ದು, ಜಗತ್ತಿಗೆ ಎಚ್ಚರಿಕೆ ಗಂಟೆ ಬಾರಿಸ್ತಿದೆ. ಇತ್ತ ಭಾರತ ಕೂಡ ಹಿಂದಿನ ತಪ್ಪುಗಳು ಮರುಕಳಿಸದಂತೆ ಅಲರ್ಟ್​​ ಆಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us