ದಿಢೀರ್‌ ಭಾರತದ ಜೊತೆ ಸ್ನೇಹ ಹಸ್ತ ಚಾಚಿದ ಚೀನಾ; ಡ್ರ್ಯಾಗನ್ ಬದಲಾಗಲು ಕಾರಣವೇನು?

author-image
admin
Updated On
ದಿಢೀರ್‌ ಭಾರತದ ಜೊತೆ ಸ್ನೇಹ ಹಸ್ತ ಚಾಚಿದ ಚೀನಾ; ಡ್ರ್ಯಾಗನ್ ಬದಲಾಗಲು ಕಾರಣವೇನು?
Advertisment
  • ಹಲವು ವರ್ಷಗಳ ವೈರತ್ವ ಬಿಟ್ಟು ಒಂದಾಗಲು ಬಂದ ಚೀನಾ
  • ಭಾರತದ ಎಲಿಫೆಂಟ್‌ ಹಾಗೂ ಚೀನಾದ ಡ್ರ್ಯಾಗನ್ ಒಟ್ಟಿಗೆ ಡ್ಸಾನ್ಸ್!
  • ಮಾತುಕತೆ ಮೂಲಕ 2 ದೇಶಗಳ ಬಿಕ್ಕಟ್ಟು ಬಗೆಹರಿಸಿಕೊಳ್ಳೋಣ

ಭಾರತ, ಚೀನಾ ಹಾವು-ಮುಂಗುಸಿಯಂತೆ ಇದ್ದ ಕಾಲ ದೂರವಾಗುತ್ತಿದೆ. ಹಲವು ವರ್ಷಗಳ ವೈರತ್ವ ಬಿಟ್ಟು ಒಂದಾಗಲು ಚೀನಾ ಇದೀಗ ಸ್ನೇಹ ಹಸ್ತ ಚಾಚಿದೆ. ಭಾರತದ ಎಲಿಫೆಂಟ್‌ ಹಾಗೂ ಚೀನಾದ ಡ್ರ್ಯಾಗನ್ ಒಟ್ಟಿಗೆ ಡ್ಸಾನ್ಸ್ ಮಾಡಬೇಕು ಅನ್ನೋ ಮಾತು 2 ರಾಷ್ಟ್ರದ ಸಂಬಂಧಕ್ಕೆ ಹೊಸ ಮುನ್ನುಡಿಯನ್ನೇ ಬರೆದಿದೆ.

publive-image

ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ನಿಜಕ್ಕೂ ಅಚ್ಚರಿಯ ಹೇಳಿಕೆಯನ್ನೇ ನೀಡಿದ್ದಾರೆ. ಭಾರತ-ಚೀನಾ ಪಾರ್ಟನರ್‌ಗಳಾಗಿ ಪರಸ್ಪರರ ಯಶಸ್ಸಿಗೆ ಕೊಡುಗೆ ನೀಡಬೇಕು. ಪರಸ್ಪರ ಸಹಕಾರ ಅಂದ್ರೆ ಎಲಿಫೆಂಟ್-ಡ್ರ್ಯಾಗನ್ ಜೊತೆಯಾಗಿ ಡ್ಯಾನ್ಸ್ ಎರಡು ಕಡೆಯವರಿಗೂ ಸರಿಯಾದ ಆಯ್ಕೆ ಎಂದಿದ್ದಾರೆ.

publive-image

ವಾಂಗ್ ಝೀ ಮಾತಿನ ಅರ್ಥವೇನು?
ಎಲಿಫೆಂಟ್-ಡ್ರ್ಯಾಗನ್ ಡ್ಯಾನ್ಸ್ ಅಂತ ಚೀನಾ ವಿದೇಶಾಂಗ ಸಚಿವ ಹೇಳಿದ ಮಾತಿನ ಅರ್ಥ ಏನಂದ್ರೆ ಮತ್ತೊಮ್ಮೆ ಭಾರತ- ಚೀನಾ ಭಾಯಿ ಭಾಯಿ ಆಗೋಣ ಅನ್ನೋದು.

ಭಾರತ-ಚೀನಾ ವೈರತ್ವ ಬಿಟ್ಟು ಒಂದಾಗಬೇಕು. ರಾಜತಾಂತ್ರಿಕ ಮಾತುಕತೆ ಮೂಲಕ 2 ದೇಶಗಳ ಬಿಕ್ಕಟ್ಟು ಬಗೆಹರಿಸಿಕೊಳ್ಳೋಣ. ಪರಸ್ಪರರನ್ನು ಬೆಂಬಲಿಸುವುದು. ಪರಸ್ಪರರ ಜತೆ ಕೆಲಸ ಮಾಡುವುದು ನಿಜವಾಗಿಯೂ 2 ರಾಷ್ಟ್ರದ ಹಿತಾಸಕ್ತಿಗೆ ಒಳ್ಳೆಯದು. ಇದರಿಂದ 2 ರಾಷ್ಟ್ರದ ಜನರ ಹಿತಾಸಕ್ತಿಯ ರಕ್ಷಣೆ ಮಾಡಿದಂತೆ ಆಗಲಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ.

ಇದನ್ನೂ ಓದಿ: ತಾಜ್​ ಮಹಲ್ ಒಂದೇ ಅಲ್ಲ.. ಭಾರತದಲ್ಲಿ ಇನ್ನೂ 6 ಪ್ರೇಮಿಗಾಗಿ ಕಟ್ಟಿದ ಸ್ಮಾರಕಗಳಿವೆ! ಎಲ್ಲಿ ಗೊತ್ತಾ? 

ಭಾರತ-ಚೀನಾ ಕೈ ಜೋಡಿಸಿದಾಗ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಪ್ರಜಾಪ್ರಭುತ್ವ ಬಲವಾಗುತ್ತೆ. ಜೊತೆಗೆ ಜಾಗತಿಕ ದಕ್ಷಿಣವೂ ಪ್ರಬಲವಾಗಿ ವೃದ್ದಿಯಾಗಲಿದೆ ಅನ್ನೋದು ಚೀನಾದ ವಾದವಾಗಿದೆ. ಹಿಂದಿನ ಅನುಭವದ ಆಧಾರದಲ್ಲಿ ಚೀನಾ ದೇಶವೂ ಭಾರತದ ಜೊತೆ ಕೆಲಸ ಮಾಡಲು ಸಿದ್ಧವಾಗಿದೆ.

publive-image

ಟ್ರಂಪ್‌ನಿಂದ ದಿಢೀರ್ ನಿರ್ಧಾರ!
ಕಳೆದ ವರ್ಷ ರಷ್ಯಾದಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗಿದ್ದರು. ಇದಾದ ಬಳಿಕ 4 ವರ್ಷಗಳ ಲಡಾಖ್ ಗಡಿ ಬಿಕ್ಕಟ್ಟು ಬಗೆಹರಿದಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಚೀನಾ ಭಾರತದ ಜೊತೆಯಾಗಿ ಕೆಲಸ ಮಾಡೋಣ ಎಂದು ಕರೆ ಕೊಟ್ಟಿದೆ.

ಏಪ್ರಿಲ್ 2ರಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಚೀನಾ ಸೇರಿದಂತೆ ಎಲ್ಲಾ ದೇಶಗಳ ಮೇಲೆ ಆಮದು ಸುಂಕ ವಿಧಿಸಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಆಮದು ಸುಂಕ ಭಾರತ, ಚೀನಾ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದ್ದು, ಟ್ರಂಪ್ ನಿರ್ಧಾರದ ಬಳಿಕ ಚೀನಾ ತನ್ನ ಸ್ನೇಹ ಹಸ್ತದ ಟ್ರಂಪ್ ಕಾರ್ಡ್‌ಗೆ ಚಾಲನೆ ನೀಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment