ಚೀನಾ ನಂಬಿ ಕೆಟ್ಟ ಪಾಕಿಸ್ತಾನ.. ಭಾರತ-ರಷ್ಯಾ ಬಾಂಧವ್ಯಕ್ಕೆ ಅತಿ ದೊಡ್ಡ ಯಶಸ್ಸು; ಮೀಮ್ಸ್ ವಿಡಿಯೋ ವೈರಲ್‌!

author-image
admin
Updated On
ಭಾರತ, ಪಾಕ್ ಸಂಘರ್ಷದಲ್ಲಿ ಗೆಲುವು ಯಾರಿಗೆ? ಎಷ್ಟು ಕೋಟಿ ನಷ್ಟ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!
Advertisment
  • ಸಂಕಷ್ಟದ ಕಾಲದಲ್ಲಿ ಭಾರತ-ರಷ್ಯಾ ಬಾಂಧವ್ಯಕ್ಕೆ ಅತಿ ದೊಡ್ಡ ಯಶಸ್ಸು
  • ಪಾಕ್‌ ಜೊತೆಗೆ ನಿಲ್ಲುವ ಚೀನಾದ ಕುತಂತ್ರದ ಬಣ್ಣ ಕೂಡ ಬಯಲು
  • ರಷ್ಯಾದ S-400 ಮುಂದೆ ಚೀನಾದ HQ-9 ಏರ್ ಡಿಫೆನ್ಸ್‌ ಸಿಸ್ಟಮ್‌ ಉಡೀಸ್!

ಭಾರತದ ಮೇಲೆ ಕಾಲ್ಕೆರೆದು ಬರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಈ ಬಾರಿ ಭಾರತೀಯ ಸೇನೆ ಸಂಪೂರ್ಣ ಪಾಕಿಸ್ತಾನದ ಬುಡಕ್ಕೆ ಬೆಂಕಿ ಇಟ್ಟಿದೆ. ಈ ಸಂಘರ್ಷದ ಜೊತೆಗೆ ಪಾಕ್‌ ಜೊತೆಗೆ ನಿಲ್ಲುವ ಚೀನಾದ ವಿಷಕಾರುವ ಬಣ್ಣ ಕೂಡ ಬಯಲಾಗಿದೆ. ಪಾಕಿಸ್ತಾನ ಚೀನಾವನ್ನೇ ನಂಬಿ ಕೆಟ್ಟಿದ್ರೆ, ಸಂಕಷ್ಟದ ಕಾಲದಲ್ಲಿ ಭಾರತ-ರಷ್ಯಾ ಬಾಂಧವ್ಯಕ್ಕೆ ಅತಿ ದೊಡ್ಡ ಯಶಸ್ಸು ಸಿಕ್ಕಿದೆ.

ಚೀನಾ-ಪಾಕ್ ಕುತಂತ್ರಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಚೀನಾವನ್ನೇ ನಂಬಿದೆ. ಆದರೆ ಚೀನಾ ಮಾಲು ಎಷ್ಟು ಪರಿಣಾಮಕಾರಿಯಾದದ್ದು ಅನ್ನೋದು ಈಗ ಜಗಜ್ಜಾಹೀರಾಗಿದೆ.
ಪಾಕಿಸ್ತಾನದ ಕ್ಷಿಪಣಿ ದಾಳಿಯ ಯತ್ನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಚೀನಾದ HQ-9 ಏರ್ ಡಿಫೆನ್ಸ್‌ಗಳನ್ನ ಭಾರತ ಸಂಪೂರ್ಣವಾಗಿ ಧ್ವಂಸ ಮಾಡಿದೆ. ಈ HQ-9 ಏರ್ ಡಿಫೆನ್ಸ್‌ ಸಿಸ್ಟಮ್‌ 120 ರಿಂದ 300 ಕಿ.ಮೀ ವರೆಗಿನ ಮಿಸೈಲ್ ದಾಳಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ರಷ್ಯಾದ S-400 ಮುಂದೆ ಚೀನಾದ HQ-9 ಏರ್ ಡಿಫೆನ್ಸ್‌ ಸಿಸ್ಟಮ್‌ ಮಕಾಡೆ ಮಲಗಿದೆ.

publive-image

ಚೀನಾದ HQ-9 ಏರ್ ಡಿಫೆನ್ಸ್‌ ಸಿಸ್ಟಮ್‌ ನಂಬಿದ್ದ ಪಾಕಿಸ್ತಾನ ಸಂಪೂರ್ಣವಾಗಿ ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪಾಕ್ ಪರಿಸ್ಥಿತಿಯ ಬಗ್ಗೆ ಬಹಳಷ್ಟು ಮೀಮ್ಸ್‌ ವಿಡಿಯೋಗಳು ವೈರಲ್ ಆಗಿದೆ.


">May 8, 2025

2019ರ ಪುಲ್ವಾಮಾ ದಾಳಿಯ ಬಳಿಕ ಭಾರತ ರಷ್ಯಾದಿಂದ ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿ ಮಾಡಿದೆ. ಇದು 400 ಕಿಮೀ ದೂರದಿಂದಲೇ ಬರುವ ವೈರಿ ರಾಷ್ಟ್ರಗಳ ಮಿಸೈಲ್ ಅನ್ನು ಪತ್ತೆ ಹಚ್ಚಿ ಹೊಡೆದುರುಳಿಸುತ್ತದೆ. S-400 ಏಕಕಾಲಕ್ಕೆ 72 ವೈರಿ ಮಿಸೈಲ್ ದಾಳಿಯನ್ನು ಪತ್ತೆ ಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.


">May 8, 2025

S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತವು ರಷ್ಯಾದಿಂದ 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿದೆ. ರಷ್ಯಾದ ಏರ್ ಡಿಫೆನ್ಸ್ ಸಿಸ್ಚಮ್‌ನಿಂದ ತನ್ನ ವಿಮಾನಗಳ ರಹಸ್ಯವನ್ನು ಭೇದಿಸಬಹುದು ಎಂಬ ಭಯ ಅಮೆರಿಕಾಕ್ಕೂ ಇತ್ತು. ಹೀಗಾಗಿ ರಷ್ಯಾದ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತ ಖರೀದಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕಾದ ವಿರೋಧಕ್ಕೆ ಮಣಿಯದ ಭಾರತ S-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿ ಮಾಡಿದ್ದ ಈಗ ಭಾರತದ ರಕ್ಷಣೆಗೆ ಬಳಕೆಯಾಗಿದೆ.

ಇದನ್ನೂ ಓದಿ: S-400 ಡಿಫೆನ್ಸ್​ ಸಿಸ್ಟಮ್​ ಬಗ್ಗೆ ಗೊತ್ತಾ..? 600 ಕಿಲೋ ಮೀಟರ್​ವರೆಗೆ ಟಾರ್ಗೆಟ್ ಮಾಡೋ ಬಲಿಷ್ಠ ಸುದರ್ಶನ್ ಚಕ್ರ 

ಎಸ್​-400 ಏರ್​ ಡಿಫೆನ್ಸ್​ ಸಿಸ್ಟಮ್ ಪ್ರಮುಖವಾದ 3 ಘಟಕಗಳನ್ನು ಹೊಂದಿದೆ. ಅಂದರೆ ಈ ಒಂದು ಯಂತ್ರದಿಂದ ಮೂರು ಕೆಲಸಗಳನ್ನು ಮಾಡಬಹುದು. ಒಂದು ಕ್ಷಿಪಣಿ ಉಡಾವಣಾ ವಾಹನವಾಗಿದೆ, 2ನೇಯದಾಗಿ ಶಕ್ತಿಶಾಲಿ ರಾಡಾರ್ ಹೊಂದಿದ್ದು ನೂರಾರು ಕಿಲೋ ಮೀಟರ್ ದೂರವಿರುವ ವಸ್ತುಗಳ ದಿಕ್ಕು, ದೂರ, ಎತ್ತರ, ಆಕಾರ, ವೇಗವನ್ನು ರೇಡಿಯೋ ತರಂಗಗಳಿಂದ ಪತ್ತೆ ಹಚ್ಚಿ ನಾಶ ಮಾಡುತ್ತದೆ. ಕೊನೆಯದಾಗಿ ಕಮಾಂಡ್ ಸೆಂಟರ್ ಆಗಿದೆ.
S-400 ಕ್ಷಿಪಣಿ ಅತ್ಯಂತ ಶಕ್ತಿಶಾಲಿಯಾಗಿದ್ದು ಸುದೀರ್ಘವಾದ ಸಾಮರ್ಥ್ಯ ಹೊಂದಿರುವುದರಿಂದ ನ್ಯಾಟೋ (NATO) ಸದಸ್ಯರು ಇದನ್ನು ಬೆದರಿಕೆ ಯಂತ್ರ ಎಂದು ಕರೆದಿದ್ದಾರೆ.

ಬಹುತೇಕ ಎಲ್ಲ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮಾರ್ಥ್ಯವನ್ನು ಈ S-400 ಕ್ಷಿಪಣಿ ಹೊಂದಿದೆ. ಇದರ ರಾಡಾರ್ ಸುಮಾರು 600 ಕಿಲೋ ಮೀಟರ್​ವರೆಗೆ ಟಾರ್ಗೆಟ್ ಮಾಡಿ ನಾಶ ಪಡಿಸುವ ಶಕ್ತಿ ಇದೆ.

2018ರಲ್ಲಿ ರಷ್ಯಾ ಜೊತೆ ಎಸ್​-400 ಏರ್​ ಡಿಫೆನ್ಸ್​ ಸಿಸ್ಟಮ್ ಒಪ್ಪಂದವನ್ನು ಭಾರತ ಮಾಡಿಕೊಂಡಿತು. ಇದು 5 ಬಿಲಿಯನ್ ಡಾಲರ್​ ಒಪ್ಪಂದವಾಗಿದ್ದು ಒಟ್ಟು 5 ಅತ್ಯುನ್ನತ ಏರ್​ ಡಿಫೆನ್ಸ್​ ಸಿಸ್ಟಮ್ ಅನ್ನು ಭಾರತ ಖರೀದಿ ಮಾಡಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment