newsfirstkannada.com

ಚೀನಾದಲ್ಲಿ ಈ ರಾಶಿಯವರಿಗೆ ಸಿಗಲ್ಲ ಕೆಲಸ; ಕಂಪನಿಗಳು ಇವರಿಗೆ ಜಾಬ್​ ಆಫರ್ ಮಾಡಲ್ಲ ಯಾಕೆ?

Share :

Published August 9, 2024 at 9:35pm

    ರಾಶಿ, ಫಲ, ಇಷ್ಟ, ಅನಿಷ್ಟಗಳು ಕೇವಲ ಭಾರತದಲ್ಲಿ ಮಾತ್ರವಲ್ಲ

    ಚೀನಾದಲ್ಲೂ ಕೆಲವು ರಾಶಿಯವರಿಗೆ ಕೆಲಸ ಸಿಗೋದಿಲ್ಲ, ಯಾಕೆ?

    ಕಂಪನಿಯೊಂದು ನೀಡಿದ ಜಾಹಿರಾತು ಅಷ್ಟೊಂದು ಚರ್ಚೆ ಆಗಿದ್ದೇಕೆ?

ಬೀಜಿಂಗ್: ರಾಶಿ, ಫಲ, ಕುಂಡಲಿ, ಜಾತಕ ಈ ತರದ ವಿಷಯಗಳು ಹೆಚ್ಚು ಪ್ರಚಲಿತದಲ್ಲಿರೊದು ಭಾರತದಲ್ಲಿ, ಇಷ್ಟ ಅನಿಷ್ಟಗಳೆಲ್ಲಾ ಇವುಗಳ ಮೇಲೆಯೇ ನಿರ್ಧಾರವಾಗುತ್ತವೆ. ಕೆಲವರಿಗೆ ಇವು ನಂಬಿಕೆಗಳಾದ್ರೆ ಇನ್ನೂ ಕೆಲವರಿಗೆ ಮೂಢ ನಂಬಿಕೆಗಳು. ಇಂಥಹ ನಂಬಿಕೆ ಹಾಗೂ ಮೂಢ ನಂಭಿಕೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ಚೀನಾದಂತಹ ರಾಷ್ಟ್ರಗಳಲ್ಲಿಯೂ ಇವೆ. ಹೀಗಾಗಿ ಕೆಲವು ರಾಶಿಗಳಲ್ಲಿ ಹುಟ್ಟಿದ ಯುವಕರಿಗೆ ನಮ್ಮಲ್ಲಿ ಕೆಲಸ ಕೊಡೋದಿಲ್ಲ ಎಂದು ಚೀನಾದ ಕೆಲವು ಕಂಪನಿಗಳು ಘೋಷಿಸಿಕೊಂಡಿವೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

ಭಾರತದಲ್ಲಿ ಇರುವ ಹಾಗೆ ಚೀನಾದಲ್ಲಿ ಕುಂಭ, ವೃಶ್ಚಿಕ ಅನ್ನೋ ರಾಶಿಗಳಿಲ್ಲ. ಅಲ್ಲಿ ಹುಟ್ಟಿದ ವರ್ಷದ ಮೇಲೆ ಅಲ್ಲಿನ ರಾಶಿಗಳನ್ನು ನಿರ್ಧರಿಸುತ್ತಾರೆ, ಇಯರ್ ಆಫ್ ಡಾಗ್, ಇಯರ್ ಆಫ್ ಪಿಗ್, ಇಯರ್ ಆಫ್ ರ್ಯಾಟ್​ ಮತ್ತು ಇಯರ್ ಆಫ್ ಆಕ್ಸ್​ ಎನ್ನುವ ರಾಶಿ ಪದ್ಧತಿ ಇದೆ ಅಂದ್ರೆ,1922, 34 ರಿಂದ 2018ರವರೆಗೆ ಹುಟ್ಟಿದವರನ್ನು ಇಯರ್ ಆಫ್ ಡಾಗ್​ ಎಂದು ಕರೆಯಲಾಗುತ್ತದೆ. ಇಂಥಹ ಇಯರ್ ಆಫ್​ ಡಾಗ್​ ಇಸ್ವಿಯಲ್ಲಿ ಹುಟ್ಟಿದವರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ರೆ ಅವರಿಗೆ ಕೆಲಸ ಸಿಗುತ್ತಿಲ್ಲ. ಅವರ ಬದಲು ಕಡಿಮೆ ಶಿಕ್ಷಣ ಪಡೆದರು ಪರವಾಗಿಲ್ಲ, ಬೇರೆ ಇಸ್ವಿಯಲ್ಲಿ ಹುಟ್ಟಿದವರಿಗೆ ಮಣೆ ಹಾಕುತ್ತಿದ್ದಾರೆ. ಹಾಗಂತ ಅದನ್ನ ಜಾಹಿರಾತಿನಲ್ಲಿಯೂ ಕೂಡ ಉಲ್ಲೇಖಿಸಿದೆ. ಇಯರ್​ ಆಫ್ ಡಾಗ್​ನಲ್ಲಿ ಹುಟ್ಟಿದವರು ಕಡಿಮೆ ಶಿಕ್ಷಣ ಹೊಂದಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು ಎಂದು ತನ್ನ ಜಾಹಿರಾತಿನಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ‘ಮದುವೆ ಮಾಡಲು ಗಂಡಿಗೆ 15 ವರ್ಷ, ಮಹಿಳೆಗೆ 9 ವರ್ಷ ಇದ್ರೆ ಸಾಕು’- ಇರಾಕ್​​ ಮಸೂದೆಯಲ್ಲೇನಿದೆ?

ಸ್ಯಾನ್ಸ್ಕಿಂಗ್ ಟ್ರಾನ್ಸ್​ಪೋರ್ಟೇಷನ್ ಅನ್ನೋ ಕಂಪನಿಯೊಂದು ಮಾರ್ಕೆಟಿಂಗ್ ವಿಭಾಗದಲ್ಲಿ ಕ್ಲರ್ಕ್ ಖಾಲಿ ಇರುವುದರ ಬಗ್ಗೆ ಜಾಹಿರಾತೊದಂದನ್ನು ನೀಡಿತ್ತು. ಸಂಬಳವನ್ನ 3000 ರಿಂದ 4000 ಯೆನ್ ಅಂದ್ರೆ ಭಾರತದ 35140 ರಿಂದ 46850 ರೂಪಾಯಿ ಆದ್ರೆ ಇಯರ್ ಆಫ್ ಡಾಗ್​ನಲ್ಲಿ ಹುಟ್ಟಿದವರಿಗೆ ಅವಕಾಶವಿಲ್ಲ ಎಂಬ ನಿಬಂಧನೆಯನ್ನು ಕೂಡ ಜಾಹಿರಾತಿನಲ್ಲಿ ಉಲ್ಲೇಖಿಸಿತ್ತು. ಇದನ್ನು ಪ್ರಶ್ನಿಸಿ ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದ್ರೆ ಎಸ್​ಸಿಎಂಪಿ ಕಂಪನಿಯು ಈ ಬಗ್ಗೆ ಸ್ಪಷ್ಟನೆ ನೀಡಿದೆ. ನಮ್ಮ ಕಂಪನಿಯ ಬಾಸ್ ಹುಟ್ಟಿದ್ದು ಇಯರ್ ಆಫ್​ ಡ್ರ್ಯಾಗನ್​ನಲ್ಲಿ, ಹೀಗಾಗಿ ಇಯರ್ ಆಫ್ ಡಾಗ್ ಮತ್ತು ಡ್ರ್ಯಾಗನ್​ ಒಂದೇ ಕಡೆ ಸೇರಿ ಕೆಲಸ ಮಾಡಲು ಸಾಧ್ಯವಿಲ್ಲ ಇದರಿಂದ ಅನೇಕ ಅನಿಷ್ಟಗಳು ಸಂಭವಿಸುತ್ತವೆ ಎಂದು ಸ್ಪಷ್ಟನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾದಲ್ಲಿ ಈ ರಾಶಿಯವರಿಗೆ ಸಿಗಲ್ಲ ಕೆಲಸ; ಕಂಪನಿಗಳು ಇವರಿಗೆ ಜಾಬ್​ ಆಫರ್ ಮಾಡಲ್ಲ ಯಾಕೆ?

https://newsfirstlive.com/wp-content/uploads/2024/08/YEAR-OF-DOG.jpg

Load More