newsfirstkannada.com

120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು?

Share :

Published May 6, 2024 at 4:21pm

  ಈ ಔಷಧಗಳನ್ನು ಮಾನವರಿಗೆ ಯಾವಾಗ ನೀಡುತ್ತಾರೆ ಗೊತ್ತಾ.?

  ಇಲಿಗಳ ಪ್ರಯೋಗ ಮಾಡಿ ಯಶಸ್ಸು ಕಂಡು ಕೊಂಡ ವಿಜ್ಞಾನಿಗಳು

  ಇನ್ಮುಂದೆ ವಿಶ್ವದಲ್ಲಿನ ಜನರೆಲ್ಲರೂ ಶತಾಯುಷಿಗಳು ಆಗುತ್ತಾರಾ?

ವಿಶ್ವದಲ್ಲಿ ಇತ್ತೀಚಿನ ಆಹಾರ ಪದ್ಧತಿಗಳ ಪ್ರಕಾರ ಜನರು ಅಷ್ಟೇನೂ ಜಾಸ್ತಿ ವರ್ಷಗಳ ಕಾಲ ಬದುಕುತ್ತಿಲ್ಲ. 50 ರಿಂದ 60 ವರ್ಷಗಳ ಕಾಲ ಬದುಕಬಹುದು ಎಂದು ಅಂದಾಜು ಮಾಡುವ ಕಾಲ ಬಂದಿದೆ. ಕೆಲವೊಬ್ಬರಿಗೆ 100 ವರ್ಷಕ್ಕೂ ಹೆಚ್ಚಿನ ಅವಧಿ ಜೀವನ ನಡೆಸಬೇಕೆಂಬುದು ಆಸೆ ಇರುತ್ತದೆ. ಅಂಥವರಿಗೆ ಚೀನಾ ಮೆಡಿಸಿನ್​ವೊಂದನ್ನು ಕಂಡುಕೊಳ್ಳಲು ಮುಂದಾಗಿದೆ. ಇದು ಯುವಕರ ರಕ್ತದಲ್ಲಿ ಇರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಚೀನಾದ ಪೀರ್-ರಿವ್ಯೂಡ್ ಅಧ್ಯಯನದ ಪ್ರಕಾರ, ಯೌವ್ವನದ ಗಂಡು ಇಲಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಇಲಿಗಳ ರಕ್ತದಲ್ಲಿ ವಯಸ್ಸಾದ ಅಂಶವನ್ನ ಕಂಡುಕೊಂಡಿದ್ದಾರೆ. ಹೀಗಾಗಿ ಇವುಗಳಿಗೆ ವಾರಕ್ಕೆ ಒಂದರಂತೆ ಇಂಜೆಕ್ಷನ್​ ನೀಡುತ್ತಾ ಬಂದಿದ್ದಾರೆ. 840 ದಿನಗಳ ಕಾಲ ಬದುಕುವ ಇಲಿಯೊಂದು ಬರೋಬ್ಬರಿ 1031 ದಿನಗಳ ಕಾಲ ಬದುಕಿದೆ. ವಯಸ್ಸಿನಲ್ಲಿ 22.7 ರಷ್ಟು ಏರಿಕೆಯಾಗಿದ್ದು ಇದು ಮಾನವರಿಗೆ ಹೋಲಿಕೆ ಮಾಡಿದ್ರೆ, ಸುಮಾರು 120-130 ವರ್ಷಗಳವರೆಗೆ ಅದ್ಭುತ ಜೀವನ ನಡೆಸಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಭವಾನಿ ರೇವಣ್ಣಗೂ ಕಾದಿದೆಯಾ ಸಂಕಷ್ಟ.. JDS ಮುಖಂಡರ ಜೊತೆ​ ಮಹತ್ವದ ಚರ್ಚೆ

ರಕ್ತದಲ್ಲಿನ ಪ್ಲಾಸ್ಮಾ ವಿನಿಮಯದಿಂದ ಆಗಲ್ಲ

ಯುವಕರ ರಕ್ತದಲ್ಲಿನ ಅಂಶಗಳಿಂದ ವಯಸ್ಸು ಜಾಸ್ತಿ ಮಾಡಿಕೊಳ್ಳಬಹುದು. ರಕ್ತದಿಂದಲೇ ಇದನ್ನು ಮಾಡಬಹುದಾದ್ರೂ ಮುಂದಿನ ದಿನಗಳಲ್ಲಿ ಯುವಕರ ಮೇಲೆ ಭಾರೀ ಪರಿಣಾಮ ಬೀರಬಹುದು. ಹೀಗಾಗಿ ವಯಸ್ಸು ಹೆಚ್ಚಿಸುವುದನ್ನ ಔಷಧಿಗಳ ಮೂಲಕ ನೀಡಲಾಗುತ್ತದೆ. ಇದು ಪ್ಲಾಸ್ಮಾ ವಿನಿಮಯ ಮೂಲಕ ಸಾಧ್ಯವಿಲ್ಲ. ರಕ್ತದಲ್ಲಿ ಕೆಲ ಅಂಶಗಳನ್ನು ಕಂಡುಕೊಂಡು ಇದನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕಿದೆ. ಹೊಸ ರಕ್ತದಲ್ಲಿ ಕಂಡುಬರುವ ಪ್ರೋಟೀನ್ ಅಂಶಗಳ ಮೇಲೆ ಅಧ್ಯಯನ ಇನ್ನಷ್ಟು ಕೇಂದ್ರೀಕರಿಸಬೇಕಿದೆ ಎಂದು ಹೇಳಿದ್ದಾರೆ.

7 ವರ್ಷದಿಂದ ನಡೆಯುತ್ತಿರುವ ಅಧ್ಯಯನ

ಈ ಅಧ್ಯಯನವು 7 ವರ್ಷಗಳಿಂದ ನಡೆಯುತ್ತಿದ್ದು, ನೂರಾರು ಇಲಿಗಳ ಡೇಟಾ ಸಂಗ್ರಹಿಸಲಾಗಿದೆ. ಸಂಶೋಧನೆಯು ಇದುವರೆಗೂ ನಡೆಯುತ್ತಿದ್ದು ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ಮೌಲ್ಯಮಾಪನ ಮಾಡುವ ಮೊದಲು ಮತ್ತು ಔಷಧಿಯಾಗಿ ಅಭಿವೃದ್ಧಿ ಪಡಿಸುವುದಕ್ಕೆ ಇನ್ನೂ ಅನೇಕ ವೈಜ್ಞಾನಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ವಯಸ್ಸು ಜಾಸ್ತಿ ಮಾಡುವ ನಿರೀಕ್ಷಿತ ಚಿಕಿತ್ಸೆ ಅಭಿವೃದ್ಧಿ ಪಡಿಸಲು ಮಾನವರನ್ನ ಹೋಲುವ ದೊಡ್ಡ ಸಸ್ತನಿಗಳ ಮೇಲೆ ಪ್ರಯೋಗ ನಡೆಸಬೇಕು. ಇದಾದ ಬಳಿಕ ಔಷಧಿ ಲಭ್ಯವಾಗಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

120-130 ವರ್ಷ ಜೀವಿಸಬಹುದು.. ವಯಸ್ಸು ಜಾಸ್ತಿ ಮಾಡೋ ಔಷಧ ಸಂಶೋಧನೆ; ವಿಜ್ಞಾನಿಗಳು ಹೇಳಿದ್ದೇನು?

https://newsfirstlive.com/wp-content/uploads/2024/05/YOUNG.jpg

Load More