newsfirstkannada.com

ಭಾರತದ ಮೇಲೂ ಬೇಹುಗಾರಿಕೆಯ ಬಲೂನ್ ಹಾರಾಟ; ಚೀನಾದ ಮಹಾ ಮಸಲತ್ತು ಬಹಿರಂಗ

Share :

25-02-2023

    ಅಮೆರಿಕ ಮೇಲೆ ಸ್ಪೈ ಬಲೂನ್​ ಹಾರಿಸಿಬಿಟ್ಟಿದ್ದ ಚೀನಾ

    ಭಾರತ, ಜಪಾನ್ ಮೇಲೂ ಕುತಂತ್ರಿ ಮಸಲತ್ತು ನಡೆಸಿದ್ದು ಬೆಳಕಿಗೆ

    ಸೇನಾ ಗೌಪ್ಯತೆ, ಮಿಲಿಟರಿ ಕಾರ್ಯತಂತ್ರ ಕದಿಯೋ ಉದ್ದೇಶ

ಅಮೆರಿಕಾ ವಾಯುನೆಲೆಯ ಮೇಲೆ ಚೀನಾ ಬೇಹುಗಾರಿಕೆಯ ಬಲೂನ್ ಸದ್ದಿಲ್ಲದೇ ಹಾರಾಟ ನಡೆಸಿತ್ತು. ಚೀನಾದ ಕಳ್ಳಾಟ ಕಂಡು ನಿಗಿ ನಿಗಿ ಕೆಂಡವಾದ ಅಮೆರಿಕಾ ಸೇನೆ ಒಂದೇ ಏಟಿಗೆ ಬಲೂನ್ ಅನ್ನ ಹೊಡೆದುರುಳಿಸಿತ್ತು. ಡ್ರ್ಯಾಗನ್ ದೇಶದ ಈ ಕಳ್ಳಗಣ್ಣಿನ ಮಸಲತ್ತು ಬರೀ ಅಮೆರಿಕಾದ ಮೇಲೆ ಮಾತ್ರವಲ್ಲ. ಭಾರತ, ಜಪಾನ್ ಮೇಲೂ ನಡೆದಿತ್ತು ಅನ್ನೋ ಸ್ಫೋಟಕ ಅಂಶ ಇದೀಗ ಬಯಲಾಗಿದೆ.

ಇದನ್ನೂ ಓದಿ: BREAKING: ಅಮೆರಿಕಾಗೆ ನಡುಕ ಹುಟ್ಟಿಸಿದ್ದ ಚೀನಾದ ‘ಸ್ಪೈ ಬಲೂನ್’ ಢಮಾರ್..!​ VIDEO

ಚೀನಾ ಬೇಹುಗಾರಿಕೆಯ ಬಲೂನ್ ಕೇವಲ ಅಮೆರಿಕಾವನ್ನಷ್ಟೇ ಅಲ್ಲ ಹಲವು ದೇಶಗಳನ್ನ ಗುರಿಯಾಗಿಸಿದೆ. ಚೀನಾ ಕರಾವಳಿಯಿಂದ ಗಗನಕ್ಕೆ ಚಿಮ್ಮುವ ಸ್ಪೈ ಬಲೂನ್ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಬೇರೆ ದೇಶದ ಸೇನಾ ಗೌಪ್ಯತೆ ಮತ್ತು ಮಿಲಿಟರಿ ಕಾರ್ಯತಂತ್ರಗಳನ್ನ ಕದಿಯೋ ಉದ್ದೇಶವನ್ನು ಹೊಂದಿದೆ. ಈ ಬಲೂನ್ ಅನ್ನ ಚೀನಾ ಏರ್‌ಫೋರ್ಸ್‌ ನಿಯಂತ್ರಿಸುತ್ತದೆ.

ಇದನ್ನೂ ಓದಿ: ಅಮೆರಿಕಾ-ಚೀನಾ ಯುದ್ಧಕ್ಕೆ ನಾಂದಿ ಹಾಡುತ್ತಾ ‘ಬಲೂನ್’..? ಏನಿದು ವಾರ್ ಪ್ಲಾನ್?

ಅಮೆರಿಕಾದ ಜೊತೆಗೆ ಚೀನಾ ಬೇಹುಗಾರಿಕೆಯ ಬಲೂನ್ ಜಪಾನ್, ಭಾರತ, ವಿಯಟ್ನಾಂ, ಥೈವಾನ್ ಮತ್ತು ಫಿಲಿಫೈನ್ಸ್‌ ದೇಶದ ಮೇಲೂ ಕಣ್ಣಿಟ್ಟಿದೆ ಅನ್ನೋ ವರದಿಯಾಗಿದೆ. ಒಂದು ದೇಶದ ಭೌಗೋಳಿಕ ವಾಯುನೆಲೆಯ ಮೇಲೆ ಅನಧಿಕೃತವಾಗಿ ಪ್ರವೇಶಿಸುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಚೀನಾದ ಮಸಲತ್ತಿಗೆ ಸೊಪ್ಪು ಹಾಕದ ಅಮೆರಿಕಾ ಬಲೂನ್ ಅನ್ನ ಪೀಸ್, ಪೀಸ್ ಮಾಡಿದ್ದು, ಅದರ ಅವಶೇಷಗಳನ್ನು ಪರಿಶೀಲಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಮೇಲೂ ಬೇಹುಗಾರಿಕೆಯ ಬಲೂನ್ ಹಾರಾಟ; ಚೀನಾದ ಮಹಾ ಮಸಲತ್ತು ಬಹಿರಂಗ

https://newsfirstlive.com/wp-content/uploads/2023/02/New-Project-2-7.jpg

Load More