/newsfirstlive-kannada/media/post_attachments/wp-content/uploads/2024/11/DNA-TEST-REVEALED-TRUTH.jpg)
ಬದುಕು ಎಂಬುದೇ ಅನಿರೀಕ್ಷತೆಗಳ ಆಗರ, ನೂರಾರು ತಿರುವುಗಳು ನಮ್ಮನ್ನು ಎಲ್ಲಿಂದಲೋ ಇನ್ನೆಲ್ಲಿಗೋ ಕರೆದುಕೊಂಡು ಹೋಗಿ ತಲುಪಿಸುತ್ತವೆ. ನಂಬಲಾಗದ ಸತ್ಯಗಳನ್ನು ಬಿಚ್ಚಿ ಮುಂದಿಡುತ್ತದೆ. ಇಲ್ಲಿ ಒಬ್ಬ ಯುವತಿಯ ಬಾಳಲ್ಲಿಯೂ ಕೂಡ ಇಂತಹುದೇ ಒಂದು ವಿಚಿತ್ರ ಘಟನೆ ನಡೆದು ಹೋಗಿದೆ. ಈ ಯುವತಿಯ ಬಾಳಿನಲ್ಲಿ ನಡೆದ ವಿಚಿತ್ರ ಸನ್ನಿವೇಶ ಈಗ ಜಾಗತಿಕ ಸುದ್ದಿಯಾಗಿ, ಹೀಗೂ ಆಗುತ್ತಾ ಅನ್ನೋ ಅಚ್ಚರಿಯನ್ನು ಸೃಷ್ಟಿಸಿದೆ.
ಮೂಲತಃ ಉತ್ತರ ಚೀನಾದ ಯುವತಿಯ ಬದುಕಿನಲ್ಲಿ ನಡೆದ ಅನಿರೀಕ್ಷಿತ ಹಾಗೂ ವಿಚಿತ್ರ ತಿರುವಿನ ಕಥೆ ಇದು. ಯಾರದೋ ಲೇವಡಿಗೆ ಬೇಸತ್ತ ಯುವತಿ ತನ್ನ ಹುಟ್ಟಿನ ಗುಟ್ಟನ್ನು ಹುಡುಕಿಕೊಂಡು ಹೋದಾಗ ಖುದ್ದು ಅವಳಿಗೆ ಒಂದು ಶಾಕ್ ಕಾದಿತ್ತು. ತಾನು ಯಾರು ಮಗಳು ಎಂದು ನಂಬಿಕೊಂಡು ಇಷ್ಟು ವರ್ಷ ಅವಳು ಬದುಕಿದ್ದಳೋ ಅದೇ ಸುಳ್ಳಾಗಿ ಹೋಗಿತ್ತು.
ಇದನ್ನೂ ಓದಿ:ಕ್ಯಾನ್ಸರ್ನಿಂದ ನರಳಾಟ; ನೋವು ತಾಳಲಾರದೆ ವಿಡಿಯೋ ಮಾಡಿ ಸತ್ತಿದ್ದೇನೆ ಎಂದ ಟಿಕ್ಟಾಕ್ ಸ್ಟಾರ್
ಸದ್ಯ ಆ ಯುವತಿಯನ್ನು ಕೇವಲ ಅವಳ ಮನೆ ಹೆಸರಿನಿಂದ ಗುರುತಿಸಲಾಗುತ್ತಿದೆ. ಹೆನಾನ್ ಪ್ರದೇಶದ ಕ್ಸಿಜಿಯಾಂಗ್ ಎಂಬ ಊರಿನ ಡೊಂಗ್ ಎಂಬ ಮನೆ ಹೆಸರಿನ ಯುವತಿಯ ಬಾಳಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಆಕೆ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಆಕೆಯ ಸಹೋದ್ಯೋಗಿಗಳು ಆಕೆಯ ಮುಖ ಲಕ್ಷಣ ಕುರಿತುಕೊಂಡು ಆಗಾಗ ಲೇವಡಿ ಮಾಡುತ್ತಿದ್ದರು. ಕಾರಣ ಯುವತಿಯ ಮುಖಲಕ್ಷಣ ಸ್ಥಳೀಯರನ್ನು ಹೋಲುತ್ತಿರಲಿಲ್ಲ. ಹೀಗಾಗಿ ಆಕೆಯ ಸ್ನೇಹಿತರು ನೀನು ಈ ದೇಶಕ್ಕೆ ಈ ಊರಿಗೆ ಸಂಬಂಧಿಸಿದವಳ ಎನ್ನುವ ರೀತಿಯಲ್ಲಿ ಆಕೆಯ ಹುಟ್ಟಿನ ಬಗ್ಗೆ ಅನುಮಾನ ವ್ಯಕ್ತಪಡಿಸುವ ರೀತಿಯಲ್ಲಿ ಆಕೆಯನ್ನು ರೇಗಿಸುತ್ತಿದ್ದರು. ಇದರಿಂದ ಕುಪಿತಗೊಂಡ ಡೊಂಗ್, ಲೇವಡಿ ಮಾಡುವವರ ಮುಖಕ್ಕೆ ಹೊಡೆದಂತೆ ಉತ್ತರ ನೀಡಲು ನಿರ್ಧರಿಸಿದ್ದಳು ಅಲ್ಲಿ ಆಕೆಗೆ ಮತ್ತೊಂದು ಶಾಕ್ ಕಾದಿತ್ತು.
ಸ್ನೇಹಿತರ ಟೀಕೆಗೆ ಉತ್ತರ ಕೊಡಲು ಸಜ್ಜಾಗಿದ್ದ ಯುವತಿ ಮೊದಲು ತನ್ನ ಪೋಷಕರೊಂದಿಗೆ ಮಾತನಾಡುತ್ತಾಳೆ. ಚರ್ಚೆಯ ವೇಳೆ ಅಸ್ಪಷ್ಟವಾದ, ವಿರೋಧಭಾಸವಾದ ಪ್ರತಿಕ್ರಿಯೆಗಳೇ ಯುವತಿಯ ಪೋಷಕರಿಂದ ಬರುತ್ತದೆ. ಅವಳ ಹುಟ್ಟಿದ ದಿನಾಂಕದ ಬಗ್ಗೆಯೂ ಹಲವು ಗೊಂದಲಗಳ ಹೇಳಿಕೆ ಅವರು ಹೇಳುತ್ತಾರೆ. ಇದರಿಂದ ಬೇಸತ್ತ ಯುವತಿ ಕೊನೆಗೆ ಡಿಎನ್ಎ ಟೆಸ್ಟ್ಗೆ ಹೋಗುತ್ತಾಳೆ. ಅಲ್ಲಿಯೇ ಡಾಂಗ್ಗೆ ಅಸಲಿ ಸತ್ಯದ ದರ್ಶನವಾಗಿ ಒಂದು ಕ್ಷಣ ಬೆಚ್ಚಿ ಬೀಳುತ್ತಾಳೆ.
ಇದನ್ನೂ ಓದಿ:ಅಬ್ಬಾ.. ಗಂಟೆಗೆ 5 ಸಾವಿರ ಕಿಲೋಮೀಟರ್ ಸ್ಪೀಡ್ನಲ್ಲಿ ಓಡುತ್ತೆ ಈ ಏರ್ಕ್ರಾಫ್ಟ್; ಇದರ ವಿಶೇಷತೆ ಏನು ಗೊತ್ತಾ?
ಡಿಎನ್ಎ ಟೆಸ್ಟ್ನಲ್ಲಿ ಅತ್ಯಂತ ಅನುಮಾನದಾಯಕ ಫಲಿತಾಂಶವೊಂದು ಆಚೆ ಬರುತ್ತದೆ. ಆವಳು ಅವಳ ತಂದೆ ತಾಯಿಗಳ ಅಸಲಿ ಪುತ್ರಿಯೇ ಅಲ್ಲ. ಅವಳು ಅವರಿಗೆ ಜೈವಿಕ ಪುತ್ರಿ ಎಂಬುದು ಕನ್ಫರ್ಮ್ ಆಗಿ ಬಿಡುತ್ತದೆ. ಯುವತಿಗೆ ತಿಳುವಳಿಕೆ ಬಂದಾಗಿನಿಂದ ಆಕೆ ಕ್ಸಿಜಿಯಾಂಗ್ನಿಂದ ಆಚೆ ಬೇರೆ ಜಗತ್ತು ನೋಡಿಲ್ಲ. ಆದ್ರೆ ಆಕೆಯ ಸಹೋದ್ಯೋಗಿಗಳು ಮಾತ್ರ ಆಕೆಯನ್ನು ನೀನು ನಮ್ಮೆಲ್ಲರ ರೀತಿ ಇಲ್ಲ. ನಿಮ್ಮ ಮೂಗು ಚಪ್ಪಟೆಯಾಗಿದೆ. ನಿನ್ನ ತುಟಿಗಳು ಇಲ್ಲಿಯವರಿಗಿಂತ ದಪ್ಪವಿದೆ, ನಿನ್ನ ಕಣ್ಣುಗಳು ಚೀನಿಯರ ರೀತಿ ಚಿಕ್ಕದಾಗಿ ಇಲ್ಲ, ನೀನು ಹೆನಾನ್ನಲ್ಲಿ ಹುಟ್ಟಿದವರಂತೆ ಕಾಣುತ್ತಲೇ ಇಲ್ಲ ಎಂದು ರೇಗಿಸುತ್ತಿರುತ್ತಾರೆ. ಇದರಿಂದ ಬೇಸತ್ತ ಯುವತಿ ಡಿಎನ್ಎ ಟೆಸ್ಟ್ಗೆ ಹೋದಾಗ ಮತ್ತೊಂದು ಸತ್ಯ ದರ್ಶನ ಆಗುತ್ತದೆ. ಸದ್ಯ ಯುವತಿ ತನ್ನ ಬದುಕಿನ ಸತ್ಯವನ್ನು ಚೀನಾದ ಒಂದು ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾಳೆ. ಅದು ಈಗ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಜಾಗತಿಕವಾಗಿ ಒಂದು ಕುತೂಹಲವನ್ನು ಸೃಷ್ಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ