/newsfirstlive-kannada/media/post_attachments/wp-content/uploads/2025/01/TIGER-URINE.jpg)
ಇತ್ತೀಚೆಗೆ ಹುಲಿಯ ಮೂತ್ರಕ್ಕೆ ಜಾಗತಿಕವಾಗಿ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದನ್ನೆ ಬಂಡವಾಳವಾಗಿ ಮಾಡಿಕೊಂಡ ಚೀನಾದವರು ತಮ್ಮ ಪ್ರಾಣಿ ಸಂಗ್ರಾಯಲದಲ್ಲಿರುವ ಹುಲಿಗಳಿಂದ ಮೂತ್ರ ಸಂಗ್ರಹಿಸಿ ಜಾಗತಿಕವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಹುಲಿ ಮೂತ್ರದಿಂದ ಸಂಧಿವಾತ, ಸ್ನಾಯುಸೆಳೆತ ಹಾಗೂ ಉಳುಕು ನೋವುಗಳು ಬೇಗ ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಇದರಿಂದಾಗಿ ಈಗ ಹುಲಿಯ ಮೂತ್ರಕ್ಕೆ ಭಾರೀ ಬೇಡಿಕೆ ಉಂಟಾಗಿದ್ದರಿಂದ ಚೀನಾದವರು ಒಂದು ಬಾಟಲ್ ಹುಲಿ ಮೂತ್ರವನ್ನು ಸುಮಾರು 596 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಆದರೆ ಹುಲಿ ಮೂತ್ರದಿಂದ ಈ ರೀತಿಯಾದ ಸಮಸ್ಯೆಗಳು ದೂರವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಯಾವುದೇ ರೀತಿಯಲ್ಲಿ ಸಾಬೀತಾಗಿಲ್ಲ. ಹೀಗಾಗಿ ತಜ್ಞರು ಈ ಒಂದು ಹುಲಿ ಮೂತ್ರ ಮಾರುವ ರೂಢಿಯನ್ನು ವಿರೋಧಧಿಸುತ್ತಿದ್ದಾರೆ. ಇದು ಅನೈತಿಕ ಹಾಗೂ ತುಂಬಾ ಅಪಾಯಕಾರಿ ಎಂದು ಕೂಡ ಎಚ್ಚರಿಸಿದ್ದಾರೆ.
ಚೀನಾದ ಸಿಚೌನ್​ ಪ್ರದೇಶದ ಯಾನ್ ಬಿಫಿಂಗ್ಸಿಜಾ ವನ್ಯಜೀವಿಗಳ ಧಾಮದಲ್ಲಿ ಹುಲಿ ಮೂತ್ರವನ್ನು ಸಂಗ್ರಹಿಸಿ ಅದನ್ನು ಭಾರೀ ಮಟ್ಟದಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ಸಂಧಿವಾತ, ಸ್ನಾಯುಸೆಳೆತ ಹಾಗೂ ಉಳುಕುಗಳು ನಿವಾರಣೆಯಾಗುತ್ತವೆ ಎಂದು ನಂಬಿಸಿ ವ್ಯಾಪಾರ ಮಾಡಲಾಗುತ್ತಿದೆ. ಈ ವಿಚಿತ್ರ ಮದ್ದು ಮಾರಾಟ ಆಗುತ್ತಿರುವ ಬಗ್ಗೆ ಸೌತ್ ಚೀನಾ ಮಾರ್ನಿಂಗ್​ ಪೋಸ್ಟ್ ವರದಿ ಮಾಡಿದೆ.
ಚೀನಾಗೆ ಬಂದ ಪ್ರವಾಸಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕುವ ಮೂಲಕ ಹಾಗೂ ಬ್ಯಾನರ್​​ಗಳನ್ನು ಕಟ್ಟುವ ಮೂಲಕ ಅವರನ್ನು ಸೆಳೆಯಲಾಗುತ್ತಿದೆ. 250ಗ್ರಾಂ ಹುಲಿ ಮೂತ್ರಕ್ಕೆ ಸುಮಾರು 50 ಯೌನ್​ ಅಂದ್ರೆ ಭಾರತೀಯ ರೂಪಾಯಿಯಲ್ಲಿ ಸುಮಾರು 596 ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ.
ಇದನ್ನೂ ಓದಿ:ಜೀವಬಿಟ್ಟ ನರಭಕ್ಷಕನ ಹೊಟ್ಟೆಯಲ್ಲಿ ಬೆಲೆ ಬಾಳುವ ವಸ್ತುಗಳು.. ಅರಣ್ಯ ಸಿಬ್ಬಂದಿ ಶಾಕ್..!
ಇನ್ನು ಈ ಹುಲಿ ಮೂತ್ರವನ್ನು ಉಪಯೋಗಿಸುವವರಿಗೆ ವೈಟ್ ವೈನ್ ಜೊತೆ ಈ ಮೂತ್ರವನ್ನು ಮಿಕ್ಸ್ ಮಾಡಿ ದೇಹಕ್ಕೆ ಮಾಲಿಶ್ ಮಾಡುವಂತೆ ಹೇಳಲಾಗುತ್ತಿದೆ. ಅದು ಅಲ್ಲದೇ ಅದರಲ್ಲಿ ಚಿಕ್ಕದಾಗಿ ಸ್ಲೈಸ್ ಮಾಡಿರುವ ಹಸಿಶುಂಠಿಯನ್ನು ಕೂಡ ಸೇರಿಸಿ ಎಂದು ಹೇಳಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ಒಂದು ಶಾಕಿಂಗ್ ನ್ಯೂಸ್ ಎಂದರೆ ಇದನ್ನು ನೀವು ಬಾಯಿಯ ಮೂಲಕವೂ ಡೈರಕ್ಟಾಗಿ ಸೇವನೆ ಮಾಡಬಹುದು ಆದ್ರೆ ಇದರಿಂದ ಅಲರ್ಜಿ ಸಂಭಂವಿಸುವ ಸಾಧ್ಯತೆ ಇದೆ ಎಂದು ಹೇಳಿಯೂ ಮಾರಾಟ ಮಾಡಲಾಗುತ್ತಿದೆ .
ಇದನ್ನೂ ಓದಿ:GSLV-F15: ಸಾಧನೆಯಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು.. ಉಡಾವಣೆಗೆ ಈಗ ಶತಕದ ಸಂಭ್ರಮ
ಮೃಗಾಲಯದ ಸಿಬ್ಬಂದಿಗಳು ಹೇಳುವ ಪ್ರಕಾರ ಹುಲಿಗಳು ಸಾಮಾನ್ಯವಾಗಿ ಮೂತ್ರ ಮಾಡಿದ ಬೇಸಿನ್​ ಮೂಲಕ ಅವುಗಳ ಮೂತ್ರವನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ಯಾವುದೇ ರೀತಿಯ ಸೋಂಕು ಹರಡುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಆದ್ರೆ, ಮೃಗಾಲಯದ ಈ ಒಂದು ವ್ಯಾಪಾರವನ್ನು ವೈದ್ಯಕೀಯ ತಜ್ಞರು ವಿರೋಧಿಸುತ್ತಿದ್ದಾರೆ. ಹುಲಿಯ ಮೂತ್ರದಲ್ಲಿ ಔಷಧೀಯ ಗುಣವಿದೆ ಎಂದು ಚೀನಾದ ಸಾಂಪ್ರಾದಾಯಿಕ ಚಿಕಿತ್ಸೆಯಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಇದೊಂದು ಸುಳ್ಳು ಸೃಷ್ಟಿ ಕೂಡಲೇ ಇದನ್ನು ನಿಲ್ಲಿಸಬೇಕು. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us