/newsfirstlive-kannada/media/post_attachments/wp-content/uploads/2024/04/KL_RAHUL_RCB.jpg)
ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಕೆ.ಎಲ್ ರಾಹುಲ್. ಇವರು ಸದ್ಯ ದುಲೀಪ್ ಟ್ರೋಫಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ಕೆ.ಎಲ್ ರಾಹುಲ್ ಹೋಮ್ ಗ್ರೌಂಡ್ ಪ್ರವೇಶಿಸಿದ್ರು. ಎಂ ಚಿನ್ನಸ್ವಾಮಿ ಸ್ಟೇಡಿಯಮ್ ಪ್ರವೇಶಿಸುತ್ತಿದ್ದಂತೆ ರಾಹುಲ್‌ಗೆ ಫ್ಯಾನ್ಸ್ ಭರ್ಜರಿ ವೆಲ್‌ಕಮ್ ಮಾಡಿದ್ದಾರೆ.
ಮೊಳಗಿದ ಆರ್ಸಿಬಿ ಕ್ಯಾಪ್ಟನ್ ರಾಹುಲ್ ಘೋಷಣೆ!
ಕನ್ನಡಿಗ ಕೆ.ಎಲ್ ರಾಹುಲ್ ಭಾರತ ಎ ತಂಡದ ಪರ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದಾಗ ಕನ್ನಡಿಗರು ಘೋಷಣೆಗಳನ್ನು ಕೂಗಿದರು. ಕೆಎಲ್ ರಾಹುಲ್ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಸೇರಿಸಿ ಹೇಳಿದ್ರು. ಆರ್ಸಿಬಿ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅನ್ನೋ ಘೋಷಣೆ ಮೊಳಗಿಸಿದ್ರು.
ಕೆ.ಎಲ್ ರಾಹುಲ್ ವಿಡಿಯೋ ವೈರಲ್!
ಇನ್ನು, ಈ ಸಂಬಂಧ ಕೆ.ಎಲ್ ರಾಹುಲ್ ಅಭಿಮಾನಿ ಒಬ್ಬರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಕೆ.ಎಲ್ ರಾಹುಲ್ ಅವರನ್ನು ಕಂಡು ಫ್ಯಾನ್ಸ್ ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆರ್ಸಿಬಿ ಕ್ಯಾಪ್ಟನ್ ಕೆ.ಎಲ್ ರಾಹುಲ್ ಆಗಲೇಬೇಕು ಎಂದು ಘೋಷಣೆ ಕೂಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
"RCB Captain, KL Rahul" chants going on at Chinnaswamy pic.twitter.com/Ni6Y7yXWn0
— Guru Gulab (@madaddie24)
"RCB Captain, KL Rahul" chants going on at Chinnaswamy pic.twitter.com/Ni6Y7yXWn0
— Guru Gulab (@madaddie24) September 7, 2024
">September 7, 2024
ಕಳೆದ ಐಪಿಎಲ್ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು ಕೆ.ಎಲ್ ರಾಹುಲ್. ಆದರೆ ಈ ಬಾರಿ ಅವರು ಎಲ್‌ಎಸ್‌ಜಿ ಪರ ಕಾಣಿಸಿಕೊಳ್ಳುವುದು ಡೌಟ್ ಎನ್ನಲಾಗಿದ್ದು, ಆರ್ಸಿಬಿ ತಂಡ ಸೇರಬಹುದು ಎಂದು ಸುದ್ದಿಯಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್ನ ಸ್ಟಾರ್ ಆಟಗಾರನ ಮೇಲೆ ಕಣ್ಣಿಟ್ಟ ಆರ್ಸಿಬಿ; ಇವರು ಬಂದರೆ ಒಂದೇ ಕಲ್ಲಲ್ಲಿ 2 ಹಕ್ಕಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ