/newsfirstlive-kannada/media/post_attachments/wp-content/uploads/2025/04/RAJATH_CATCH_MISS.jpg)
ಆರ್​ಸಿಬಿ ಸೋಲಿಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ ಮೂರರಲ್ಲಿ ಯಾವುದು ಕಾರಣ?. ಬಲಿಷ್ಠ ತಂಡ ಇದ್ದರೂ ಆರ್​ಸಿಬಿ ಚಿನ್ನಸ್ವಾಮಿಯಲ್ಲಿ ಎಡವಿದ್ಯಾಕೆ?. ಎಲ್ಲಿ ಆರ್​ಸಿಬಿ ಪ್ಲಾನ್ ಕೈಕೊಟ್ಟಿತ್ತು?. ಕ್ಯಾಪ್ಟನ್ ಪಾಟಿದಾರ್​​​​​​ ಪ್ಲಾನ್- ಬಿ ಮಾಡಿರಲಿಲ್ವಾ ಅಥವಾ ತವರಿನಲ್ಲಿ ಒತ್ತಡದಿಂದ ಆರ್​ಸಿಬಿ ಸೋಲು ಅನುಭವಿಸಿತಾ?. ಹೀಗೆ ಸಾಕಷ್ಟು ಪ್ರಶ್ನೆಗಳು ಕಾಡ್ತಿವೆ. ಆದ್ರೆ ಬೆಂಗಳೂರೇ ಆರ್​ಸಿಬಿಗೆ ಅನ್​ಲಕ್ಕಿ ಆದಂತಿದೆ.
/newsfirstlive-kannada/media/post_attachments/wp-content/uploads/2025/04/RCB_SALT.jpg)
ತವರಿನಲ್ಲೇ ಆರ್​ಸಿಬಿಗೆ ಅತಿ ಹೆಚ್ಚು ಸೋಲು..!
ನಿಜ ಹೇಳಬೇಕಂದ್ರೆ, ಆರ್​ಸಿಬಿಗೆ ಚಿನ್ನಸ್ವಾಮಿಯೇ ಅನ್​ಲಕ್ಕಿ ಪಿಚ್. ಎಲ್ಲಾ ತಂಡಗಳಿಗೆ ಹೋಂ ಪಿಚ್ ಅಡ್ವಾಂಟೇಜ್ ಆದ್ರೆ, ಪಾಟಿದಾರ್ ಪಡೆಗೆ ಇದೇ ಮುಳುವಾಗ್ತಿದೆ. ದಿನೇಶ್ ಕಾರ್ತಿಕ್ ಏನೇ ಆರೋಪ ಮಾಡಿರಲಿ, ಆದ್ರೆ ಆರ್​ಸಿಬಿ ತವರಿನಲ್ಲಿ ಸೋಲ್ತಿರೋದು, ಇಂದು ನೆನ್ನೆಯ ಕಥೆಯಲ್ಲ. ಐಪಿಎಲ್ ಸೀಸನ್​​​ ಒಂದರಿಂದಲೂ ಆರ್​ಸಿಬಿಯದ್ದು ಇದೇ ಕಥೆ.
ಇದುವರೆಗೂ ಆರ್​ಸಿಬಿ ತವರಿನಲ್ಲಿ ಗೆಲುವಿಗಿಂತ ಹೆಚ್ಚು ಸೋಲು ಅನ್ನೇ ಅನುಭವಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ 93 ಪಂದ್ಯಗಳಲ್ಲಿ 45 ಪಂದ್ಯ ಸೋತಿರುವ ಆರ್​ಸಿಬಿ ಸೋಲಿನ ದಾಖಲೆ ಬರೆದಿದೆ.
/newsfirstlive-kannada/media/post_attachments/wp-content/uploads/2025/04/RCB_VS_DC.jpg)
ಆಗಿದ್ದು ಆಯಿತು, ತವರಿನಲ್ಲಿ 2 ಪಂದ್ಯಗಳನ್ನ ಸೋತಿರುವ ಆರ್​ಸಿಬಿ, ಕಳೆದುಕೊಂಡಿದ್ದು ಏನೂ ಇಲ್ಲ. ಇನ್ನು 5 ಪಂದ್ಯಗಳನ್ನ, ಚಿನ್ನಸ್ವಾಮಿಯಲ್ಲಿ ಆಡಲಿದೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ, ತಪ್ಪುಗಳನ್ನ ತಿದ್ದಿಕೊಂಡು ಗೆಲ್ಲೋದಕ್ಕೆ ನೋಡಬೇಕಷ್ಟೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us