ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ; ಮೊದಲೇ ಅಪಾಯದ ಎಚ್ಚರಿಕೆ, ದೊಡ್ಡ ನಿರ್ಲಕ್ಷ್ಯ ಮಾಡಿದವರು ಯಾರು?

author-image
Bheemappa
Updated On
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ.. RCB, KSCA ವಿರುದ್ಧ ಕೇಸ್ ದಾಖಲಿಸಲು ಕ್ಯಾಬಿನೆಟ್​ನಲ್ಲಿ ಒಪ್ಪಿಗೆ
Advertisment
  • ಡಿಸಿಪಿ ಪತ್ರ ಬರೆದ ಮೇಲೆ ಹೇಗೆ ‌ನೀನು ಕಾರ್ಯಕ್ರಮ ಮಾಡಿದೆ?
  • ಏಕವಚನದಲ್ಲೇ ಸಿಎಂ ಸಿದ್ದು, ಡಿಸಿಎಂ ಡಿಕೆಶಿಗೆ ಅಶೋಕ್​ ಪ್ರಶ್ನೆ!
  • ಅಪಾರ ಸಂಖ್ಯೆ ಅಭಿಮಾನಿಗಳು ಬರುತ್ತಾರೆ ಭದ್ರತೆ ಕಷ್ಟ ಎಂದಿದ್ರು

ಸತ್ಯ ಹೊಸ್ತಿಲು ದಾಟುವ ಮುನ್ನವೆ ಸುಳ್ಳು ಊರು ತುಂಬಾ ಸುತ್ತಿ ಬಂದಿತ್ತಂತೆ. ಆದ್ರೆ, ಅದೆಷ್ಟೇ ಸುತ್ತಾಡಿ ಬಂದ್ರೂ ಸತ್ಯ ಅನ್ನೋದು ಒಂದಿಲ್ಲ ಒಂದಿನ ಹೊರಕ್ಕೆ ಬರಲೇಬೇಕು. ಈಗ ಬಯಲಾಗ್ತಾ ಇದೆ. ಆ ಕಾರ್ಯಕ್ರಮದ ಬಗ್ಗೆ ಮೊದಲೇ ಅಪಾಯದ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ಆಗಿದೆ. ಜೂನ್​ 4ರಂದೇ ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ನೀಡಿದ್ದ ಎಚ್ಚರಿಕೆ ಪತ್ರವೊಂದು ಸದ್ದು ಮಾಡುತ್ತಿದೆ.

ಎಲ್ಲರದ್ದೂ ಹದಿಹರೆಯ, ಬಾಳಿ ಬದುಕಬೇಕಿದ್ದ ಜೀವಗಳು,ಹುಟ್ಟುತ್ತಲೇ ಆರ್​​ಸಿಬಿ ಫ್ಯಾನ್ಸ್​​. ಬೆಳಿತಾ ಬೆಳಿತಾ ಆ ಅಭಿಮಾನ ಹೆಮ್ಮರವಾಗಿತ್ತು. ಹೆಮ್ಮೆಯ ತಂಡ ಕಪ್ಪು ಗೆದ್ದ ಬಳಿಕ ಸಂಭ್ರಮ ಮುಗಿಲು ಮುಟ್ಟಿ ಚಪ್ಪರ ಹೊದ್ದಿತ್ತು. ಆದ್ರೆ, ಅದಾದ ಕೆಲವೇ ಗಂಟೆಗಳಲ್ಲಿ ಗಂಟಲಿನ ಪಸೆ ಒಣಗಿತ್ತು. 11 ಜನ ಹೆಣವಾಗಿದ್ದರು. ಯಾರದ್ದೋ ನಿರ್ಲಕ್ಷ್ಯ, ಇನ್ಯಾರದ್ದೊ ಫೋಟೋಶೂಟ್​​ಗೆ ಈ ಜೀವಗಳು ಬಲಿ ಆಗಿದ್ದವು.

publive-image

ಅಪಾಯದ ಎಚ್ಚರಿಕೆ ನೀಡಿದ್ರೂ ಇದೆಂಥಾ ನಿರ್ಲಕ್ಷ್ಯ?

ಹನ್ನೊಂದು ಮನೆಗಳ ನಂದಾದೀಪಗಳೇ ಆರಿವೆ. ಆ ಹೆತ್ತವರ ಕರುಳಿನ ಕೂಗಿಗೆ ಕಣ್ಣೀರು ಸಹ ಬಿಕ್ಕುತ್ತಿದೆ. ಈ ರೋದನೆ ಶಾಶ್ವತ, ಇದು ಮದ್ದಿಲ್ಲದ ಮನೆ. ಪುತ್ರಶೋಕ ನಿರಂತರ ಅಲ್ವಾ? ಅಂದ್ಹಾಗೆ ಈ ದುರಂತದ ಬಳಿಕ ಒಂದೊಂದೆ ಸತ್ಯಗಳು ಸ್ಫೋಟ ಆಗ್ತಿವೆ. ಇದಕ್ಕೆ ಜೂನ್ 4ರಂದೆ ಅಪಾಯದ ಎಚ್ಚರಿಕೆ ನೀಡಿದ್ದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಬರೆದಿದ್ದ ಪತ್ರವೇ ಸಾಕ್ಷಿ.

ಮುನ್ನೆಚ್ಚರಿಕೆಯ ನಿರ್ಲಕ್ಷ್ಯ!

  • ಜೂನ್ 3 ರಂದು ಅನುಮತಿ ಕೇಳಿ ಡಿಪಿಆರ್​ಎಗೆ ಕೆಎಸಿಎ ಪತ್ರ
  • ವಿಧಾನಸೌಧ ಮುಂಭಾಗ ಆರ್​ಸಿಬಿ ಆಟಗಾರರಿಗೆ ಸನ್ಮಾನ ಇದೆ
  • ಕಾರ್ಯಕ್ರಮಕ್ಕೆ ಪರ್ಮಿಷನ್​​ ಕೋರಿ ಲೆಟರ್​​ ಬರೆದಿದ್ದ ಕೆಎಸಿಎ
  • ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಅಭಿಪ್ರಾಯ ಕೇಳಿದ್ದರು
  • ಭದ್ರತಾ ವಿಚಾರವಾಗಿ ಅಭಿಪ್ರಾಯ ಕೇಳಿದ್ದ ಅಧೀನ ಕಾರ್ಯದರ್ಶಿ
  • DPRA ಕಾರ್ಯದರ್ಶಿಗೆ ಡಿಸಿಪಿ ಕರಿಬಸವನ ಗೌಡ ಅಭಿಪ್ರಾಯ
  • ಅಪಾರ ಸಂಖ್ಯೆ ಅಭಿಮಾನಿಗಳು ಬರುವ ಕಾರಣ ಭದ್ರತೆ ಕಷ್ಟ
  • ಭದ್ರತಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ ಎಂದಿದ್ದರು ಡಿಸಿಪಿ
  • ಸೆಕ್ಯೂರಿಟಿ ಅರೆಂಜ್​​ಮೆಂಟ್​​​ ಕಷ್ಟ ಎಂದು ಡಿಸಿಪಿ ಅಭಿಪ್ರಾಯ
  • ಹೊರಗಡೆ ಸಿಬ್ಬಂದಿ, ಅಧಿಕಾರಿಗಳ ನಿಯೋಜನೆ ಮಾಡ್ಕೊಬೇಕು
  • ಹೀಗಾಗಿ ಕಾಲಾವಕಾಶ ಬೇಕು ಅಂತ ಪತ್ರದಲ್ಲಿ ಸ್ಪಷ್ಟ ಉಲ್ಲೇಖ

ಹಠಕ್ಕೆ ಬಿದ್ದಂತೆ ಡಿಪಿಆರ್​ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ

ಇಷ್ಟೆಲ್ಲಾ ಹೇಳಿದ ಮೇಲೂ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಎಚ್ಚರಿಸಿದರೂ ಸಹ ಡಿಪಿಆರ್​ಎ ಕಾರ್ಯದರ್ಶಿ ನಿರ್ಲಕ್ಷ್ಯ ವಹಿಸಿದರು. ಸಿಬ್ಬಂದಿ ಕೊರತೆ ಇದೆ. ಸಮಾಯವಕಾಶ ಬೇಕು ಅಂತ ತಿಳಿಸಿದ್ರೂ ಕಾರ್ಯಕ್ರಮಕ್ಕೆ ಗ್ರೀನ್​ಸಿಗ್ನಲ್​ ನೀಡಿ, ಸ್ಟೇಡಿಯಂಗೆ ಹೋಗಲು ಜೂನ್ 4ರಂದು ಪ್ರವೋಕ್​​​ ಮಾಡಿದರು.

ಈ ಪತ್ರದ ಅಂಶಗಳು ಬಹಿರಂಗ ಆಗ್ತಿದ್ದಂತೆ ವಿಪಕ್ಷ ನಾಯಕರಿಗೆ ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ. ಆರ್‌. ಅಶೋಕ್‌ ಅಂತು ಏಕವಚನದಲ್ಲೇ ವಾಗ್ದಾಳಿ ನಡೆಸಿ ಪೊಲೀಸ್ ಪರ ನಿಲ್ಲುತ್ತೇವೆ ಅಂತ ಸಾರಿದರು.

ಇದನ್ನೂ ಓದಿ:26 ಜೀವ ಹೋಯ್ತು, PM ಮೋದಿ ರಾಜೀನಾಮೆ ಕೇಳಿದ್ವಾ..? ಸಿಎಂ, ಡಿಸಿಎಂ ಪರ ಸತೀಶ್​ ಜಾರಕಿಹೊಳಿ ಬ್ಯಾಟಿಂಗ್

publive-image

ಪತ್ರ ಬರೆದ ಮೇಲೆ ಕಾರ್ಯಕ್ರಮ ಯಾಕೆ​​​ ಮಾಡಿದೆ?

ಕಾನೂನು ಪಾಲನೆ ಮಾಡುವಂತ ಒಬ್ಬ ಅಧಿಕಾರಿ ಆಗಲ್ಲ ಎಂದು ಹೇಳಿದ ಮೇಲೆ ನೀವು ಹೇಗೆ ಕಾರ್ಯಕ್ರಮ ಮಾಡಿದ್ದೀರಿ?. ಯಾವ ಕಾನೂನು ಅಡಿ ಕಾರ್ಯಕ್ರಮ ಮಾಡಿದೆ?. 11 ಜನರ ಕೊಲೆ ಇದು. ನಿಮಗೆ ಏನು ಮಾಡಬೇಕು. ನಿಮಗೆ ಯಾವ ದಾರಿ ತೋರಿಸಬೇಕು. ಯಾವ ಕಬ್ಬಿನ ಗದ್ದೆ ತೋರಿಸಬೇಕು. ಯಾವ ಇಟ್ಟಿಗೆ ಫ್ಯಾಕ್ಟರಿ ತೋರಿಸಬೇಕು.

ಆರ್​.ಅಶೋಕ್​, ವಿಪಕ್ಷ ನಾಯಕ

ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟ ಬಳಿಕವೂ ನಿರ್ಲಕ್ಷ್ಯ ಮಾಡಿದ್ಯಾಕೆ? ಕೇವಲ DPRA ಕಾರ್ಯದರ್ಶಿ ಸತ್ಯವತಿ ನೆಗ್ಲೆಟ್​​ ಅಷ್ಟೇ ಕಾರಣನಾ? ಸತ್ಯವತಿ ಒಬ್ಬರೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸತ್ಯ ಅವರಿಗೆ ಮೇಲಿನ ಆರ್ಡರ್​​​ಗಳು ಏನಾದ್ರೂ ಇದ್ವಾ? ಈ ಪ್ರಶ್ನೆಗಳು ಉತ್ತರ ಸಿಗೋದು ಕಷ್ಟ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment