ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಮುಖ್ಯವಾದ 6 ಕಾರಣಗಳು..!

author-image
Bheemappa
Updated On
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಮುಖ್ಯವಾದ 6 ಕಾರಣಗಳು..!
Advertisment
  • ಆರ್​ಸಿಬಿ ಸಂಭ್ರಮಾಚರಣೆಯಲ್ಲಿ ನೂಕುನುಗ್ಗಲು ಕಾಲ್ತುಳಿತ ಆಗಿದ್ದೇಗೆ?
  • ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಮರಗಳ ಮೇಲೆ ಹತ್ತಿದ್ದ ಅಭಿಮಾನಿಗಳು
  • ಲಕ್ಷ ಲಕ್ಷ ಅಭಿಮಾನಿಗಳು, 5 ಸಾವಿರ ಪೊಲೀಸರು ಸರಿ ಹೋಗ್ತಾರಾ..?

17 ವರ್ಷಗಳ ಕಪ್​ ಕೊರಗು ನೀಗಿದ ಸಂಭ್ರಮವನ್ನ ಸೂತಕದ ಛಾಯೆ ಆವರಿಸಿದೆ. ಬೆಂಗಳೂರಿನಲ್ಲಿ ಲಾಯಲ್​ ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಮಾಡಿದ ಪ್ಲ್ಯಾನ್​ ಸಾವುಗಳೊಂದಿಗೆ ಅಂತ್ಯಕಂಡಿದೆ. ಭೀಕರ ಕಾಲ್ತುಳಿತಕ್ಕೆ ಸಿಕ್ಕು ಅಮಾಯಕ ಅಭಿಮಾನಿಗಳು ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಈ ಕಾಲ್ತುಳಿತ ನಡೆದಿದ್ದೇಕೆ, ಇದಕ್ಕೆ ಕಾರಣ ಏನು, ಕಾರ್ಯಕ್ರಮದ ಆಯೋಜನೆಯಲ್ಲಿ ಯಡವಟ್ಟಾಗಿದ್ದು ಎಲ್ಲಿ?.

ಸುದೀರ್ಘ ವನವಾಸದ ಬಳಿಕ ಕನಸು ನನಸಾದ ಅವಿಸ್ಮರಣೀಯ ಕ್ಷಣವನ್ನ ಸಂಭ್ರಮಿಸಲು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ದೌಡಾಯಿಸಿದ್ದರು. ಸಂಭ್ರಮಿಸಲು ಬಂದ ಆ ಅಭಿಮಾನಿಗಳ ಪೈಕಿ ಕೆಲವರು ಸೇರಿದ್ದು ಮಸಣಕ್ಕೆ. ಇನ್ನು ಕೆಲವರು ಆಸ್ಪತ್ರೆಯಲ್ಲಿ ನೋವಿನಲ್ಲಿ ನರಳಾಡ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೀತಿರೋರು ಇದ್ದಾರೆ. ಸಂಭ್ರಮ ಸೂತಕಕ್ಕೆ ದಾರಿ ಮಾಡಿಕೊಟ್ಟಿದ್ದೆಲ್ಲಿ?.

publive-image

ಕಾರಣ- 1 ಟಿಕೆಟ್​ ವಿಚಾರದಲ್ಲಿ ಗೊಂದಲ

ಭೀಕರ ಕಾಲ್ತುಳಿತಕ್ಕೆ ಇದೇ ಬಹುಮುಖ್ಯವಾದ ಕಾರಣ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಇವೆಂಟ್​​ ಟಿಕೆಟ್​ ಇರುತ್ತಾ, ಇಲ್ವಾ ಫ್ರಿ ಎಂಟ್ರಿ ಇರುತ್ತಾ ಎಂಬ ಬಗ್ಗೆಯೇ ಗೊಂದಲ ಇತ್ತು. ಆದ್ರೂ ಅಭಿಮಾನಿಗಳು ಸ್ಟೇಡಿಯಂನತ್ತ ದೌಡಾಯಿಸಿದ್ರು. ಮಧ್ಯಾಹ್ನ 3.14ಕ್ಕೆ ಈ ಬಗ್ಗೆ ಟ್ವೀಟ್​ ಮಾಡಿದ ಆರ್​​ಸಿಬಿ ಫ್ರಾಂಚೈಸಿ ಫ್ರಿ ಎಂಟ್ರಿ ಎಂದು ತಿಳಿಸಿತು. ಆದ್ರೆ, ಲಿಮಿಟಿಡ್​ ಎಂಟ್ರಿ ಎಂದೂ ಸ್ಪಷ್ಟಪಡಿಸಿತ್ತು. ಫ್ರಾಂಚೈಸಿ ಲಿಮಿಟೆಡ್​ ಎಂಟ್ರಿ ಎಂದು ಹೇಳಿದ್ದೇ ಹೇಳಿದ್ದು ಅಭಿಮಾನಿಗಳು ಸ್ಟೇಡಿಯಂ ಒಳಗೆ ನುಗ್ಗಲು ಆರಂಭಿಸಿದರು. ಈ ವೇಳೆ ಉಂಟಾದ ನೂಕು ನುಗ್ಗಲು ದುರ್ಘಟನೆಗೆ ಕಾರಣವಾಯ್ತು.

ಕಾರಣ- 2 ತುರಾತುರಿಯಲ್ಲಿ ಕಾರ್ಯಕ್ರಮಕ್ಕೆ ಪ್ಲಾನ್​

17 ವರ್ಷಗಳ ಕನಸು ನನಸಾದ ಸಂಭ್ರಮವನ್ನ ಲಾಯಲ್​ ಅಭಿಮಾನಿಗಳ ಎದುರು ಸಂಭ್ರಮಿಸಬೇಕು ಅನ್ನೋದು ಇಡೀ ಆರ್​​ಸಿಬಿ ತಂಡದ ತುಡಿತವಾಗಿತ್ತು. ಹೀಗಾಗಿ ನಿನ್ನೆ ಪಂದ್ಯ ಮುಗಿದ ಬೆನ್ನಲ್ಲೇ, ವಿಜಯಯಾತ್ರೆಗೆ ಮ್ಯಾನೇಜ್​ಮೆಂಟ್​​ ಪ್ಲಾನ್​ ಮಾಡ್ತು. ಸರ್ಕಾರ ಕೂಡ ಹಿಂದೆ ಮುಂದೆ ಯೋಚಿಸದೇ ಗ್ರೀನ್​ಸಿಗ್ನಲ್​ ಕೊಟ್​ ಬಿಡ್ತು. ತುರಾತುರಿಯಲ್ಲಿ ಮುಂದಾಲೋಚನೆ ಇಲ್ಲದೆ, ಸರಿಯಾದ ಪ್ಲಾನ್​​ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದೇ ಸಂಭ್ರಮದ ಕಾರ್ಯಕ್ರಮಕ್ಕೆ ಸೂತಕವನ್ನ ಆಹ್ವಾನಿಸಿದಂತಾಯ್ತು.

publive-image

ಕಾರಣ- 3 ಸಾಗರದಂತೆ ಹರಿದು ಬಂದ ಅಭಿಮಾನಿಗಳು

17 ವರ್ಷಗಳಿಂದ ಆರ್​​ಸಿಬಿ ಅಭಿಮಾನಿಗಳು ಅನುಭವಿಸಿದ್ದು ಒಂದಾ? ಎರಡಾ.? ನೋವು, ಯಾತನೆ, ಟೀಕೆ, ನಿಂದನೆ.. ಈ ಎಲ್ಲವೂ ದೂರಾಗಿ ನಿನ್ನೆ ಕಪ್​ ಅನ್ನೋ ಗಗನಕುಸುಮ ಕೊನೆಗೂ ಕೈಗೆಟುಕಿಬಿಡ್ತು. 17 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಸಿಕ್ಕ ಕಪ್​​ ಅಭಿಮಾನಿಗಳ ಎಕ್ಸೈಟ್​ಮೆಂಟ್​​ ಅನ್ನ ಸಹಜವಾಗಿಯೇ ಹೆಚ್ಚಿಸಿತ್ತು. ಈ ಎಕ್ಸೈಟ್​ಮೆಂಟ್​ನಲ್ಲಿ ನೆಚ್ಚಿನ ಆಟಗಾರರು, ಚೊಚ್ಚಲ ಐಪಿಎಲ್​ ಟ್ರೋಫಿಯನ್ನ ಕಣ್ತುಂಬಿಕೊಳ್ಳಲು ಸಾಗರದಂತೆ ಅಭಿಮಾನಿಗಳು ಹರಿದು ಬಂದರು. 32 ಸಾವಿರ ಆಸನ ಸಾಮರ್ಥ್ಯದ ಸ್ಟೇಡಿಯಂ ಆದ್ರೆ, ಅಲ್ಲಿ ಬಂದಿದ್ದು 2 ರಿಂದ 3 ಲಕ್ಷ ಜನ ಅಭಿಮಾನಿಗಳು. ಇಷ್ಟೆಲ್ಲಾ ಅಭಿಮಾನಿಗಳು ಬರ್ತಾರೆ ಎಂಬ ಗೆಸ್​​ ಫ್ರಾಂಚೈಸಿ ಮತ್ತು ಗೌರ್ಮೆಂಟ್​ ಇಬ್ಬರಿಗೂ ಇರಲೇ ಇಲ್ಲ ಅನ್ಸುತ್ತೆ. ನಿಯಂತ್ರಿಸೋಕೆ ಆಗಲೇ ಇಲ್ಲ.

ಕಾರಣ- 4 ಆಟಗಾರರನ್ನ ಹತ್ತಿರದಿಂದ ನೋಡೋ ಧಾವಂತ

ಆರ್​​​ಸಿಬಿ ಆಟಗಾರರನ್ನ ಹತ್ತಿರದಿಂದ ನೋಡಬೇಕು ಅನ್ನೋದು ಪ್ರತಿಯೊಬ್ಬ ಅಭಿಮಾನಿಯಲ್ಲೂ ಇರೋ ಆಸೆ. ಮ್ಯಾಚ್​​ ಟೈಮ್​ನಲ್ಲಾದ್ರೆ ಹತ್ತಿರದಿಂದ ಕುಳಿತೂ ನೋಡೋ ಅವಕಾಶ ಎಲ್ಲರಿಗೂ ಸಿಗಲ್ಲ. ಟಿಕೆಟ್​ ಪ್ರೈಸ್​ ಜಾಸ್ತಿ ಒಂದಾದ್ರೆ, ದುಡ್ಡಿಕೊಡ್ತಿನಿ ಅಂದ್ರೂ ಆ ಟಿಕೆಟ್​ ಸಿಗಲ್ಲ. ಆದ್ರೆ, ನಿನ್ನೆ ಫ್ರಿ ಎಂಟ್ರಿ ಇದ್ದಿದ್ದರಿಂದ ಅಭಿಮಾನಿಗಳು ಹತ್ತಿರದಿಂದ ಆಟಗಾರರನ್ನ ಕಣ್ತುಂಬಿಕೊಳ್ಳೋ ಧಾವಂತಕ್ಕೆ ಬಿದ್ರು. ತಮ್ಮ ಕನಸನ್ನ ನನಸು ಮಾಡಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಡೆಗೋಡೆಗಳ ಮೇಲೆ ಎಗರಿದರು. ಈ ಪ್ರಕ್ರಿಯೆ ಇಲ್ಲ ಮುಳ್ಳು ತಂತಿಗಳನ್ನೂ ಕೇರ್​ ಮಾಡಲಿಲ್ಲ. ಅಭಿಮಾನಿಗಳ ಈ ಧಾವಂತ ದುರ್ಘಟನೆಗೆ ದಾರಿ ಮಾಡಿಕೊಡ್ತು.

ಇದನ್ನೂ ಓದಿ: ಮಗ ಕ್ರಿಕೆಟ್ ಆಡ್ತಿರಲಿಲ್ಲ​, ಮ್ಯಾಚ್, RCB ಅಂತ ಎಲ್ಲಿಗೂ ಹೋಗ್ತಿರಲಿಲ್ಲ.. ತಂದೆ ಮಾತು ಕರುಳು ಹಿಂಡುತ್ತೆ

publive-image

ಕಾರಣ- 5 ಭದ್ರತಾ ವ್ಯವಸ್ಥೆ ವೈಫಲ್ಯ

ಭದ್ರತಾ ವ್ಯವಸ್ಥೆ ನಿನ್ನೆ ಸಂಪೂರ್ಣ ವೈಫಲ್ಯ ಕಂಡಿತ್ತು. 5 ಸಾವಿರ ಪೋಲಿಸರನ್ನ ನಿಯೋಜನೆ ಮಾಡಿದ್ದಾಗಿ ಡಿಸಿಎಂ ಡಿಕೆ ಶಿವಕುಮಾರ್​​​ ಹೇಳಿದರು. ಆದ್ರೆ, ವಿಧಾನಸೌದದ ಮುಂಭಾಗ ಹಾಗೂ ಚಿನ್ನಸ್ವಾಮಿ ಮೈದಾನ ಎರಡೂ ಕಡೆ ಸೇರಿ ಅಲ್ಲಿ ನೆರೆದಿದ್ದು ಲಕ್ಷಕ್ಕೂ ಅಧಿಕ ಜನ. ಇಷ್ಟೊಂದು ಅಭಿಮಾನಿಗಳನ್ನ 5 ಸಾವಿರ ಮಂದಿ ಫೋಲಿಸರು ಹೇಗೆ ನಿಯಂತ್ರಿಸೋಕೆ ಸಾಧ್ಯ. ಇದನ್ನ ಭದ್ರತಾ ವೈಫಲ್ಯ ಅನ್ನದೇ ಮತ್ತೇನು ಅನ್ನೋಕಾಗುತ್ತೆ.?

ಕಾರಣ- 6 ಕೆಲ ಅಭಿಮಾನಿಗಳ ಅತಿರೇಕದ ನಡೆ

ನಿನ್ನೆ ಸಂಭ್ರಮಾಚರಣೆ ವೇಳೆ ಕೆಲ ಅಭಿಮಾನಿಗಳು ಅತಿರೇಕದಲ್ಲಿ ವರ್ತಿಸಿದರು. ಅಪಾಯಕಾರಿ ಅನ್ನೋದನ್ನೂ ಲೆಕ್ಕಿಸದೇ ಮಿತಿಮೀರಿದ ವರ್ತನೆ ಮಾಡಿದರು. ಪೋಲಿಸರು ಮಾತು, ಎಚ್ಚರಿಕೆಗೂ ಕೆಲ ಫ್ಯಾನ್ಸ್​ಗಳು ಡೋಂಟ್​​ಕೇರ್​ ಅಂದರು. ವಿಧಾನಸೌದದ ಎದುರು ಕೆಲ ಅಭಿಮಾನಿಗಳು ಪ್ರಾಣವನ್ನೂ ಲೆಕ್ಕಿಸದೇ ಮರಗಳ ಮೇಲೆ ಹತ್ತಿದ್ದು, ಮೊದಲು ಸ್ಟೇಡಿಯಂ ಒಳಗೆ ಪ್ರವೇಶಿಸಬೇಕು ಅನ್ನೋ ದಾವಂತದಲ್ಲಿ ಅಕ್ಕಪಕ್ಕ ಇದ್ದವರನ್ನ ಲೆಕ್ಕಸದೇ ನುಗ್ಗಿದ್ದು ಕಂಡು ಬಂತು. ಇದೇ ರೀತಿ ಕೆಲ ಫ್ಯಾನ್ಸ್​ ಮೆರೆದ ಹುಚ್ಚಾಟಗಳು ಒಂದು ರೀತಿಯಲ್ಲಿ ಸಾವು, ನೋವಿಗೆ ಕಾರಣವಾದವು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment