ಅಪ್ಪು ಅಪ್ಪಟ ಅಭಿಮಾನಿ ಆಗಿದ್ದ.. ಕಾಲ್ತುಳಿತದಲ್ಲಿ ಡ್ಯಾನ್ಸರ್ ಪ್ರಜ್ವಲ್ ದುರಂತ ಅಂತ್ಯ

author-image
Veena Gangani
Updated On
ಅಪ್ಪು ಅಪ್ಪಟ ಅಭಿಮಾನಿ ಆಗಿದ್ದ.. ಕಾಲ್ತುಳಿತದಲ್ಲಿ ಡ್ಯಾನ್ಸರ್ ಪ್ರಜ್ವಲ್ ದುರಂತ ಅಂತ್ಯ
Advertisment
  • ಕಾಲೇಜ್ ಡೇಸ್​​ನಿಂದಲೂ ಕನ್ನಡದ ಬಗ್ಗೆ ಅಭಿಮಾನ ಹೊಂದಿದ್ದ
  • ಡ್ಯಾನ್ಸ್ ಮೇಲೆ ತುಂಬಾ ಪ್ರೀತಿ ಹೊಂದಿದ್ದ ಆರ್​ಸಿಬಿ ಅಭಿಮಾನಿ
  • ಬೇರೆ ಬೇರೆ ಊರುಗಳಿಗೆ ಹೋಗಿ ಪ್ರೋಗ್ರಾಂ ನೀಡುತ್ತಿದ್ದ ಪ್ರಜ್ವಲ್

ಆರ್​ಸಿಬಿ.. ಆರ್​ಸಿಬಿ.. ಗೆದ್ದರು ಆರ್​ಸಿಬಿ.. ಸೋತರು ಆರ್​ಸಿಬಿ ಅಂತ ಅಭಿಮಾನಿಗಳು ಆರ್​ಸಿಬಿ ತಂಡದ ಮೇಲೆ ಪ್ರೀತಿ ಇಟ್ಟುಕೊಂಡಿದ್ದರು. ಅದರಂತೆ ಬರೋಬ್ಬರಿ 18 ವರ್ಷಗಳ ಬಳಿಕ ಕೊನೆಗೂ ಆರ್​ಸಿಬಿ ಕಪ್​ ಗೆದ್ದಿತ್ತು. ಅದರಂತೆ ಅಭಿಮಾನಿಗಳು ತಂಡದ ನಾಯಕರನ್ನು ಭೇಟಿಯಾಗೋದಕ್ಕೆ ನಾ ಮುಂದು ತಾ ಮುಂದು ಅಂತ ಖುಷಿ ಖುಷಿಯಿಂದ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ಓಡಿ ಹೋಗಿದ್ದಾರೆ. ಇದೇ ವೇಳೆ ಲಕ್ಷಾಂತರ ಅಭಿಮಾನಿಗಳ ಮಧ್ಯೆ ನೂಕು ನುಗ್ಗಲು ಉಂಟಾಗಿ 11 ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

publive-image

ಅದರಲ್ಲಿ ಭೂಮಿಕ್, ಸಹನಾ, ಪೂರ್ಣಚಂದ್ರ, ಚಿನ್ಮಯಿ, ದಿವಾನ್ಷಿ, ಶ್ರವಣ್, ದೇವಿ, ಶಿವಲಿಂಗ್, ಮನೋಜ್, ಅಕ್ಷತಾ, ಪ್ರಜ್ವಲ್​ ಮೃತಪಟ್ಟಿದ್ದಾರೆ. ಇನ್ನೂ ಇವರಲ್ಲಿ ಚಿಕ್ಕಬಳ್ಳಾಪುರದ ಪ್ರಜ್ವಲ್ ನಿಧನರಾಗಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ನಿನ್ನೆ ಒಂದು ಖಾಸಗಿ ಕಂಪನಿಯಲ್ಲಿ ಇಂಟರ್​ ವ್ಯೂ ಮುಗಿಸಿದ್ದರು.

ಇದನ್ನೂ ಓದಿ: RCB ವಿಜಯೋತ್ಸವ, ಪ್ರಾಣ ಬಿಟ್ಟ ಅಭಿಮಾನಿಗಳು.. ಮಾತೇ ಬರ್ತಿಲ್ಲ, ವಿರಾಟ್ ಕೊಹ್ಲಿ ಸಂತಾಪ!

publive-image

ಪ್ರಜ್ವಲ್ ವಿಜಯೋತ್ಸವಕ್ಕೆ ಹೋಗಿದ್ದು ಮನೆಯವರಿಗೆ ಗೊತ್ತಿರಲಿಲ್ಲ. ಟಿವಿ ನೋಡಿ ಮನೆಯವರೇ ಅಭಿಮಾನಿಗಳಿಗೆ ಬೈಯ್ತಿದ್ರಂತೆ. ಸುಮ್ಮನೆ ಜನ ಇಲ್ಲಿಗೆ ಎಲ್ಲಾ ಹೋಗಿದ್ದಾರೆ ಅಂತ. ಆದ್ರೆ ತಮ್ಮ ಮಗ ಕೂಡ ಸ್ಟೇಡಿಯಂಗೆ ಹೋಗಿದ್ದ ಅನ್ನೋದು ಪ್ರಜ್ವಲ್ ಸಾವಿನ ಸುದ್ದಿ ತಿಳಿದ ತಕ್ಷಣವೇ ಶಾಕ್​ ಆಗಿದ್ದಾರೆ.

[caption id="attachment_126570" align="alignnone" width="800"]ಪ್ರಜ್ವಲ್ ಪ್ರಜ್ವಲ್[/caption]

ಇನ್ನೂ, ಕಾಲ್ತುಳಿತದಲ್ಲಿ ಜೀವಬಿಟ್ಟ ಪ್ರಜ್ವಲ್​ ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ. ಕಾಲೇಜ್ ಡೇಸ್​ಗಳಿಂದಲೇ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ. ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಟೀಮ್​ಗೆ ಗಂಧದಗುಡಿ ಅಂತ ಹೆಸರಿಟ್ಟಿದ್ದ. ಅಲ್ಲದೇ ಪ್ರಜ್ವಲ್​ಗೆ ಡ್ಯಾನ್ಸ್ ಮೇಲೆ ತುಂಬಾ ಪ್ರೀತಿ ಇತ್ತು. ಪ್ರಜ್ವಲ್ ಡ್ಯಾನ್ಸರ್ ಕೂಡ ಆಗಿದ್ದ. ಬೇರೆ ಬೇರೆ ಊರುಗಳಿಗೆ ಹೋಗಿ ಕಾರ್ಯಕ್ರಮ ಕೊಡುತ್ತಿದ್ದ.

publive-image

ಮಗನ ನಿಧನದ ಬಗ್ಗೆ ಮಾತಾಡಿದ ಪ್ರಜ್ವಲ್ ತಂದೆ ಗಣೇಶ್ ಅವರು, ಚಿನ್ನಸ್ವಾಮಿ ಸ್ಟೇಡಿಯಂಗೆ ಮಗ ಹೋಗುವುದು ನಮಗೆ ಗೊತ್ತೇ ಇರಲಿಲ್ಲ. ಫ್ರೆಂಡ್ಸ್​ ಜೊತೆ ಹೋಗಿದ್ದಾನೆ. ಅವನಿಗೆ ಕ್ರಿಕೆಟ್​ ಬಗ್ಗೆ ಆಸಕ್ತಿ ಇರಲಿಲ್ಲ. ಯಾವಾಗಲಾದರೂ ಬೆಂಗಳೂರಿನಿಂದ ಮನೆಗೆ ಬಂದರೆ ಎಲ್ಲಿಗೂ ಹೋಗುತ್ತಿರಲಿಲ್ಲ. ಮನೆಯಲ್ಲೇ ಕೆಲಸ ಮಾಡಿಕೊಂಡು ಇರುತ್ತಿದ್ದನು. ಏನೋ ದುರದೃಷ್ಟ ಮಗ ಅಲ್ಲಿಗೆ ಹೋಗಿದ್ದಾಗ ನಡೆದು ಹೋಗಿದೆ ಎಂದು ತಂದೆ ಹೇಳುತ್ತ ಭಾವುಕರಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment