ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ.. ಜಿಲ್ಲಾಧಿಕಾರಿಗಳಿಂದ ಮಹತ್ವದ ಸೂಚನೆ..!

author-image
Veena Gangani
Updated On
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ.. ಜಿಲ್ಲಾಧಿಕಾರಿಗಳಿಂದ ಮಹತ್ವದ ಸೂಚನೆ..!
Advertisment
  • ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಬಲಿಯಾಗಿದ್ದ 11 RCB ಅಭಿಮಾನಿಗಳು
  • ವಿಜಯೋತ್ಸವದ ಅಭಿನಂದನಾ ಸಮಾರಂಭದಲ್ಲಿ ಏನೆಲ್ಲಾ ಆಯ್ತು..?
  • ಕಾಲ್ತುಳಿತದ ವೇಳೆ ನೀವು ಇದ್ರಾ..? ಹಾಗಾದ್ರೆ ಹೇಳಿಕೆ ನೀಡಲು ಅವಕಾಶ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4ರಂದು ಆರ್.ಸಿ.ಬಿ ಕ್ರಿಕೆಟ್ ತಂಡದ ವಿಜಯೋತ್ಸವದಲ್ಲಿ 11 ಮಂದಿ ಅಭಿಮಾನಿಗಳು ಬಲಿಯಾಗಿದ್ದರು. ಈ ಬೆನ್ನಲ್ಲೇ ಅಂದು ನಡೆದ ಅಹಿತಕರ ಘಟನೆಯ ಕುರಿತು ಸರ್ಕಾರದ ಆದೇಶದ ಮೇರೆಗೆ ವಿಚಾರಣಾಧಿಕಾರಿಗಳಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಗದೀಶ.ಜಿ ಅವರು ಸಮಗ್ರವಾದ ವಿಚಾರಣೆಯನ್ನು ನಡೆಸುತ್ತಿರುತ್ತಾರೆ.

ಇದನ್ನೂ ಓದಿ:ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO

publive-image

ಈ ಘಟನೆಗೆ ಸಂಬಂಧಿಸಿದ ಮಾಹಿತಿ ಅಥವಾ ಪ್ರತ್ಯಕ್ಷವಾಗಿ ನೋಡಿದ ಸಾರ್ವಜನಿಕರು/ಮಾಧ್ಯಮದವರು ವಿಚಾರಣಾಧಿಕಾರಿಗಳ ಸಮಕ್ಷಮದಲ್ಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

publive-image

ತಮ್ಮ ಹೇಳಿಕೆಯನ್ನು ದಾಖಲಿಸಲು ಇಚ್ಛಿಸುವವರು ಜೂನ್ 27, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣ, ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಕೆ.ಜಿ.ರಸ್ತೆ, ಬೆಂಗಳೂರು-09 ಇಲ್ಲಿ ತಮ್ಮ ಲಿಖಿತ ರೂಪದ ಪ್ರಮಾಣಿತ ಅಫಿಡವಿಟ್ ನ ಎರಡು ಪ್ರತಿಗಳೊಂದಿಗೆ ಖುದ್ದು ಹಾಜರಾಗಿ ಹೇಳಿಕೆಯನ್ನು ದಾಖಲಿಸಬಹುದಾಗಿದೆ ಎಂದು ವಿಚಾರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment