/newsfirstlive-kannada/media/post_attachments/wp-content/uploads/2025/06/DK_SHIVAKUMAR_3.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ ಈಗಾಗಲೇ 11 ಜನರು ಪ್ರಾಣ ಬಿಟ್ಟಿದ್ದು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇದು ರಾಜುಕೀಯ ಸ್ವರೂಪ ಪಡೆಯುತ್ತಿದ್ದು, ಡರ್ಟಿ ಪಾಲಿಟಿಕ್ಸ್. ಬಿಜೆಪಿ, ಜೆಡಿಎಸ್ ಯಾವತ್ತಿದ್ರೂ ಡೆಡ್ ಬಾಡಿ ಮೇಲೆ ರಾಜಕೀಯ ಮಾಡ್ತಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಕೆಎಸ್ಸಿಎಗೆ ಹೋಗೋ ಪ್ಲಾನ್ ನನಗಿರಲಿಲ್ಲ. ಅವರು ಆಹ್ವಾನ ನೀಡಿದರೂ ಹೋಗೋಕೆ ಇಷ್ಟ ಇರಲಿಲ್ಲ. ಮ್ಯಾನೇಜ್ಮೆಂಟ್ ಅವರನ್ನು ನನ್ನ ಗಾಡಿಯಲ್ಲಿ ಕೂರಿಸಿಕೊಂಡು ಹೋಗಬೇಕಿತ್ತು. ತಕ್ಷಣ ಅವರ ಹತ್ತಿರ ಮಾತನಾಡಿ, ಅವರಿಗೆ ಹೇಳಿ ತಕ್ಷಣ 10 ನಿಮಿಷದಲ್ಲಿ ಕಾರ್ಯಕ್ರಮ ನಿಲ್ಲಿಸೋಕೆ ಹೇಳಿದೆ. ಇದಕ್ಕೆಲ್ಲಾ ಅವರು ಒಪ್ಪಿಕೊಂಡರು. ಸ್ಟೇಡಿಯಂ ಹೋಗೋವರೆಗೆ ಹಿಂಗಾಗಿರುವುದು ನನಗೆ ಗೊತ್ತೇ ಇಲ್ಲ. ಫೋನ್ಗಳು ಜಾಮ್ ಆಗಿದ್ದವು, ಮಾಧ್ಯಮದವರೇ ಘಟನೆ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.
ಯಾವ ರಾಜಕೀಯದವರು ಏನು ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಲೆಕ್ಕನೇ ಇಲ್ಲ. ಎಲ್ಲರದ್ದೂ ಬರೀ ಚೇಷ್ಟೇನೇ. ಅವನು ಸಿಟಿ ರವಿ ಮಾತನಾಡಲಿ, ಕುಮಾರಸ್ವಾಮಿ ಮಾತನಾಡಲಿ. ಅಶೋಕ್ ಮಾತನಾಡಲಿ. ಇವರೆದ್ದೇಲ್ಲಾ ಬರೀ ರಾಜಕಾರಣ. ಅವರದ್ದೇಲ್ಲಾ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ. ಕಲಾಪದಲ್ಲಿ ಅವರು ಅವರು ಏನೇನು ಮಾಡಿದ್ದರು ಎನ್ನುವುದು ಚರ್ಚೆ ಬರುತ್ತದೆ. ಅವಾಗ ನಾನು ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: RCB ಸಂಭ್ರಮದಲ್ಲಿ 11 ಜನ ಬಲಿ.. ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್
ಆಗಿರುವ ಘಟನೆ ಕುರಿತು ಈಗ ರಾಜಕಾರಣ ಮಾತನಾಡುವುದು ಬೇಡ. ಕುಮಾರಸ್ವಾಮಿ ಹೇಳಿದಂಗೆ ಅದಕ್ಕೆ ಉತ್ತರ ಆಮೇಲೆ ಕೊಡ್ತಿನಿ. ನನ್ನ ಮನೆ ಮುಂದೆ ರಾಜಕುಮಾರ್ದ್ದು ಆಗಿದ್ದಾಗ ಆವತ್ತು ಏನಾಯಿತು?. ಡೆಲ್ಲಿ ಏನಾಗಿತ್ತು?. ಇದರ ಬಗ್ಗೆ ರಾಜಕೀಯ ಮಾತನಾಡೋಕೆ ನಾನು ಹೋಗಲ್ಲ. ಕೆಟ್ಟ ರಾಜಕೀಯ. ಬಿಜೆಪಿ, ಜೆಡಿಎಸ್ ಯಾವಾಗಲೂ ಡೆಡ್ ಬಾಡಿ ಮೇಲೆ ರಾಜಕೀಯ ಮಾಡ್ತಾರೆ. ಇದು ಅವರ ರಾಜಕೀಯ ಅಜೆಂಡಾ ಆಗಿದೆ.
ಕರ್ನಾಟಕ, ಬೆಂಗಳೂರಿನ ಇಮೇಜ್ ನಾವು ಉಳಿಸುತ್ತೇವೆ. ನಾವು ಯಾರನ್ನೂ ದೂರುತ್ತಿಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದು ಹೋಗಿದೆ. ಯಾರೂ ಇದನ್ನೂ ಊಹೆ ಮಾಡಿರಲಿಲ್ಲ. ನಡೆದು ಹೋಗಿದೆ. 18 ವರ್ಷಗಳ ನಂತರ ಟ್ರೋಫಿ ಗೆದ್ದಾಗ ಈ ರೀತಿ ಆಗುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ