/newsfirstlive-kannada/media/post_attachments/wp-content/uploads/2025/06/RCB-Parade-DCP-Letter-4.jpg)
ಬೆಂಗಳೂರು: ಕಳೆದ ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದು ಭೀಕರ ಕಾಲ್ತುಳಿತ. ಸ್ಟೇಡಿಯಂ ಸುತ್ತಾ ಜಮಾಯಿಸಿದ್ದ ಲಕ್ಷಾಂತರ RCB ಅಭಿಮಾನಿಗಳಲ್ಲಿ 11 ಮಂದಿ ಉಸಿರಾಡಲು ಆಗದೇ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲು ಅಂಗಲಾಚಿದ್ದು ಅಂದಿನ ದುರಂತದ ಮತ್ತಷ್ಟು ಘೋರ ದೃಶ್ಯಗಳು ಇಂದಿಗೂ ವೈರಲ್ ಆಗುತ್ತಿದೆ.
/newsfirstlive-kannada/media/post_attachments/wp-content/uploads/2025/06/RCB-stampede.jpg)
ಮೊದಲೇ ಅಪಾಯದ ಎಚ್ಚರಿಕೆ!
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ ಪ್ರಕರಣಕ್ಕೆ ಮೊದಲೇ ಅಪಾಯದ ಎಚ್ಚರಿಕೆ ನೀಡಿದ್ರೂ ನಿರ್ಲಕ್ಷ್ಯ ಮಾಡಿದ್ರಾ? ಅನ್ನೋ ಪ್ರಶ್ನೆ ಎದುರಾಗಿದೆ. ಜೂನ್ 4ರಂದೇ ವಿಧಾನಸೌಧ ಭದ್ರತಾ ವಿಭಾಗ DCP ಕರಿಬಸವನಗೌಡ ಅವರು DPAR ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
/newsfirstlive-kannada/media/post_attachments/wp-content/uploads/2025/06/RCB-Parade-DCP-Letter.jpg)
ಡಿಸಿಪಿ ಕರಿಬಸವನ ಗೌಡ ಅವರು RCBಗೆ ಅಪಾರ ಸಂಖ್ಯೆ ಅಭಿಮಾನಿಗಳು ಇದ್ದಾರೆ. ಲಕ್ಷಾಂತರ ಅಭಿಮಾನಿಗಳು ಬರುವ ಕಾರಣ ಭದ್ರತೆಗೆ ಸಿಬ್ಬಂದಿಯ ಕೊರತೆ ಎದುರಾಗಲಿದೆ. ಇದಕ್ಕಾಗಿ ಕಾಲಾವಕಾಶ ಬೇಕು ಅಂತ ಡಿಸಿಪಿ ಅವರು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣ.. ಕೆಎಸ್​ಸಿಎ ತುರ್ತು ಸಭೆಯಲ್ಲಿ ನಡೆದಿದ್ದು ಏನು..? Video
/newsfirstlive-kannada/media/post_attachments/wp-content/uploads/2025/06/RCB-Parade-DCP-Letter-3.jpg)
DCP ಪತ್ರದ 10 ಪ್ರಮುಖ ಅಂಶಗಳು!
1. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ, ಕರ್ತವ್ಯಕ್ಕೆ ತೊಂದರೆ ಸಾಧ್ಯತೆ
2. ಕಾರ್ಯಕ್ರಮ ವಿಧಾನಸೌಧದ ಮೆಟ್ಟಿಲ ಮೇಲೆ ಆಯೋಜಿಸಿದ್ದು ಪಾಸ್​ಗಳ ನಿರ್ಬಂಧ
3. ಅಧಿಕಾರಿಗಳು, ಸಿಬ್ಬಂದಿ ಕುಟುಂಬದವರನ್ನ ಕರೆ ತರದಂತೆ ಆದೇಶಿಸಲು ಉಲ್ಲೇಖ
4. ಭದ್ರತೆ ದೃಷ್ಟಿಯಿಂದ ವಿಧಾನಸೌಧದಲ್ಲಿ CCTV ಅಳವಡಿಸಲು ಅವಶ್ಯಕತೆ ಇರುತ್ತದೆ
5. ವೇದಿಕೆ ಪರೀಕ್ಷಿಸಬೇಕು, ಕನಿಷ್ಠ 2 ಗಂಟೆ ಆಯೋಜಕರಿಗೆ ಬಿಟ್ಟು ಕೊಡಲು ತಿಳಿಸಬೇಕು
6. ವಿದ್ಯುತ್ ಉಪಕರಣ ಬಳಕೆ, ವಿದ್ಯುತ್ ವಿಭಾಗದ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ
7. 2 ಗಂಟೆ ಮೊದಲು ವೇದಿಕೆಯನ್ನು ಌಂಟಿ ಸಾಬೋಟೇಜ್ ಚೆಕ್ ಸಂಬಂಧ ಬಿಟ್ಟು ಕೊಡಬೇಕು
8. ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಇದ್ದು, ಬಂದೋಬಸ್ತ್​ಗೆ ಸಮಯ ಬೇಕು
9. ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಅಧಿಕಾರಿಗಳ ಜೊತೆ ಕೋ-ಆರ್​ಡಿನೇಷನ್​ಗೆ ಸಮಯಬೇಕು
10. ಹೊರಗಿನ ಡ್ರೋನ್ ಬಳಸುವ ಸಾಧ್ಯತೆ, ಌಂಟಿ ಡ್ರೋನ್ ಸಿಸ್ಟಮ್ ಅಳವಡಿಸಲು ಅವಕಾಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us