/newsfirstlive-kannada/media/post_attachments/wp-content/uploads/2025/06/rcb-FANS7-1.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್ ಸಿಐಡಿ ತನಿಖೆ ಮಾಡುತ್ತಿರೋ ಬೆನ್ನಲ್ಲೇ ಕೆಎಸ್ಸಿಎ ಕಾರ್ಯದರ್ಶಿ ಎ ಶಂಕರ್ ಹಾಗೂ ಖಜಾಂಚಿ ಇ ಎಸ್ ಜಯರಾಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಗೆ RCB ಅಂದ್ರೆ ಜೀವ.. ಫ್ರಾಂಚೈಸಿ ಮಾಲೀಕರಿಗೆ ಫ್ಯಾನ್ಸ್ ಅಂದ್ರೆ ಜಸ್ಟ್ ಬ್ಯುಸಿನೆಸ್..!
ಶಂಕರ್ ಹಾಗೂ ಜಯರಾಮ್ ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸುತ್ತಿದ್ದಂತೆ KSCA ಮ್ಯಾನೇಜಿಂಗ್ ಕಮಿಟಿ ಒತ್ತಡ ಹಾಕುತ್ತಿದೆ. ಇಬ್ಬರು ರಾಜೀನಾಮೆ ಕೊಟ್ಟು ಮತ್ತೊಬ್ಬರು ಇವರ ಸ್ಥಾನಕ್ಕೆ ಬಂದರೆ ತನಿಖೆಗೆ ಸಹಕಾರ ಕಷ್ಟವಾಗಲಿದೆ. ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳಾಗುತ್ತೆ. ನೀವು ಅದೇ ಸ್ಥಾನದಲ್ಲಿದ್ದು ಪೊಲೀಸರ ತನಿಖೆಗೆ ಸಹಕರಿಸಿ ಎಂದು ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಕೆಎಸ್ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆಯನ್ನೂ ಜೂನ್ 16ಕ್ಕೆ ಮುಂದೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ