/newsfirstlive-kannada/media/post_attachments/wp-content/uploads/2025/06/MND_RCB_FAN.jpg)
ಮಂಡ್ಯ: 18 ವರ್ಷಗಳ ಬಳಿಕ ಆರ್ಸಿಬಿ ಟ್ರೋಫಿ ಗೆದ್ದಿರುವುದು ಕಾಲ್ತುಳಿತದಿಂದ ದುರಂತದಿಂದ ಸೂತಕದಲ್ಲಿ ಮರೆಯಾಗಿದೆ. ಮೃತಪಟ್ಟವರ ಮನೆಯ ಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಯಲ್ಲಿ ಒಟ್ಟು 11 ಅಭಿಮಾನಿಗಳು ಜೀವ ಬಿಟ್ಟಿದ್ದಾರೆ. ಇದರಲ್ಲಿ ಮಂಡ್ಯದ ಪೂರ್ಣಚಂದ್ರ ಎನ್ನುವರು ಕೂಡ ಒಬ್ಬರಾಗಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ (25) ಮೃತ ದುರ್ದೈವಿ. ಇವರು ಮೈಸೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಂಭ್ರಮ ಕಣ್ತುಂಬಿಕೊಳ್ಳಲು ಮೈಸೂರಿಂದ ಬೆಂಗಳೂರಿಗೆ ಬಂದಿದ್ದನು. ಈ ವೇಳೆ ಕಾಲ್ತುಳಿತ ಸಂಭವಿಸಿ ಅಸುನೀಗಿದಾನೆ.
ಸದ್ಯ ಮೃತ ಪೂರ್ಣಚಂದ್ರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗ್ಗೆಯಷ್ಟೇ ಮದುವೆ ಮಾಡಲು ಹುಡುಗಿಯನ್ನ ನೋಡಿದ್ವಿ. ಸಂಜೆ ಪೂರ್ಣಚಂದ್ರ ಸಾವಿನ ಸುದ್ದಿಯನ್ನ ಟಿವಿಯಲ್ಲಿ ಕೇಳಿದೇವು. ಅವರು ಬೆಂಗಳೂರಿಗೆ ಹೋಗಿರುವುದು ಗೊತ್ತಿಲ್ಲ. ಸಾಯಂಕಾಲ ಫೋನ್ ಮಾಡ್ತೀನಿ ಅಮ್ಮ ಎಂದಿದ್ದ. ಪೂರ್ಣಚಂದ್ರ ಸಾವನ್ನಪ್ಪಿರುವ ಬಗ್ಗೆ ಟಿವಿ ನೋಡಿದಾಗ್ಲೇ ಗೊತ್ತಾಗಿದ್ದು. ನಮಗೆ ಈಗ ಯಾರು ದಿಕ್ಕು ಅಂತ ಮೃತನ ತಾಯಿ ಆಕ್ರಂದನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: RCB ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ.. ಕಣ್ಮುಚ್ಚಿದ ಇಂಜಿನಿಯರ್ ಯುವತಿ
ನನ್ನ ಮಗನನ್ನು ಮನೆಗೆ ಕರೆದುಕೊಂಡು ಬರಬೇಡಿ. ಅಲ್ಲೇ ಪೂಜೆ ಮಾಡಿ ರಾಜ್ಕುಮಾರ್ ಮಗನ ಮಡಿಕೊಂಡ ಹಾಗೇ ನನ್ನ ಮಗನನ್ನು ಮಡಿಕೊಂಡು ಬಿಡಿ. ಅವನಿಗೆ ಮದುವೆ ಮಾಡಬೇಕು ಎಂದು ಹೆಣ್ಣು ಹುಡುಕಿದ್ದೇವು. ಹುಡುಗಿ ಕಪ್ಪುಗೆ ಇದಾಳೆ ಎಂದಿದ್ದೇ. ಇದಕ್ಕೆ ಆ ಮೇಲೆ ಹೇಳ್ತಿನಿ ಅಮ್ಮ ಅಂದ. ಮಗ ದೇವರಂತ ಮನುಷ್ಯ. ಡ್ಯೂಟಿಗೆ ಹೋಗ್ತೀನಿ ಅಂತ ಹೇಳಿರಲಿಲ್ಲ ಎಂದು ತಾಯಿ ಕಣ್ಣೀರು ಹಾಕಿದರು.
ಕ್ರಿಕೆಟ್ ಹುಚ್ಚುಗೆ ನಿನ್ನೆ ರಾತ್ರಿ (ಜೂ.3) ಕೂಡ ಕ್ರಿಕೆಟ್ ನೋಡಿದ್ದ. ನಾನು ಯಾವಾತ್ತೂ ನೋಡದವಳು ಟಿವಿ ನೋಡುತ್ತಿದ್ದೇ. ಏನು ಇವೆಲ್ಲಾ ಹಿಂಗೆ ಕುಣಿತವಲ್ಲಾ, ಏನಾದರೂ ಆದರೆ ಏನು ಗತಿ. ಗೆದ್ದವರು ಅವರು, ಇವರದೇನು ಅಲ್ಲಿ. 18 ವರ್ಷದ ಮೇಲೆ ಗೆದ್ದರಲ್ಲ ಎಂದು ಮನೆಯಲ್ಲಿ ಮೊಮ್ಮಗನಿಗಾಗಿ ಜಾಮೂನು ಮಾಡಿದ್ದೆ. ಗಂಡನೂ ಮನೆಯಲ್ಲಿ ಸಿಹಿ ಮಾಡು ಅಂದಿದ್ದರು. ಕಾಲ್ ಕೆ.ಜಿ ಮೈಸೂರುಪಾಕ ತರುತ್ತೇನೆ ಎಲ್ಲರೂ ತಿನ್ನೋಣ ಎಂದು ಗಂಡ ಹೇಳಿದ್ದ. ಅವನು ಹೋಗಿದ್ದು ಗೊತ್ತಿಲ್ಲ, ಡ್ಯೂಟಿಗೆ ಹೋಗಿದ್ದಾನೆ ಅಂತ ಅಂದುಕೊಂಡಿದ್ದೇವು ಎಂದು ತಾಯಿ ಗಳ ಗಳನೇ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ