/newsfirstlive-kannada/media/post_attachments/wp-content/uploads/2025/06/TMK-MANOJ.jpg)
ತುಮಕೂರು: ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ತುಮಕೂರಿನ ನಾಗಸಂದ್ರ ಗ್ರಾಮದ ಯುವಕ ಮನೋಜ್ ಕೂಡ ಸೇರಿದ್ದಾರೆ.
ಇದನ್ನೂ ಓದಿ: ಜಸ್ಟ್ 5 ನಿಮಿಷ ತಬ್ಬಿಕೊಳ್ಳಲು 600 ರೂಪಾಯಿ ಚಾರ್ಜ್; ಏನಿದು ‘man mum’ ಟ್ರೆಂಡ್?
ಇದೇ ಮನೋಜ್ ಮನೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಮೊಮ್ಮಗನ ಅಗಲಿಕೆಯಿಂದ ನೊಂದಿದ್ದ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ದೇವಿರಮ್ಮ (70) ಮೃತ ದುರ್ದೈವಿ. ಇವರು ವಯೋಸಹಜ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು..
ಇದನ್ನೂ ಓದಿ: ಹನಿಮೂನ್ಗೆ ಬಂದ ಜೋಡಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.. ಭಾರೀ ಸಂಚಲನ ಸೃಷ್ಟಿಸಿದ್ದ ಕೇಸ್ಗೆ ಪತ್ನಿಯೇ ವಿಲನ್..!
ಜೂನ್ 4 ರಂದು ನಡೆದ ದುರಂತ ಪ್ರಕರಣದಿಂದ ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಮೊಮ್ಮಗನ ಚಿಂತೆಯಲ್ಲಿದ್ದ ಅಜ್ಜಿ, ದೇವಿರಮ್ಮ ನೋವಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಗ್ರಾಮಸ್ಥರು, ಸಂಬಂಧಿಕರು ಅಜ್ಜಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ನಿನ್ನೆಯಷ್ಟೇ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಮನೋಜ್ ಕುಟುಂಬ ಪಡೆದಿತ್ತು. ಇದೀಗ ಮನೆಯ ಹಿರಿಯ ಜೀವವನ್ನೂ ಕಳೆದುಕೊಂಡು ಕುಟುಂಬ ಮತ್ತಷ್ಟು ಆಘಾತಕ್ಕೆ ಒಳಗಾಗಿದೆ.
ಇದನ್ನೂ ಓದಿ: ಕೊಹ್ಲಿ ಸ್ಥಾನ ತುಂಬೋದೇ ಚಿಂತೆ.. ನಾಲ್ವರು ಸ್ಟಾರ್ಗಳ ಶಾರ್ಟ್ಲಿಸ್ಟ್ ಮಾಡಿದ ಮ್ಯಾನೇಜ್ಮೆಂಟ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ