/newsfirstlive-kannada/media/post_attachments/wp-content/uploads/2025/05/megastar-chiranjeevi.jpg)
ಮೆಗಾಸ್ಟಾರ್ ಚಿರಂಜೀವಿ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಟಾಲಿವುಡ್ ನಿರ್ದೇಶಕ ಬಾಬಿರಿಗೆ ಅಚ್ಚರಿಯ ಗಿಫ್ಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ತಂದೆಯ ‘ಸುಪಾರಿ’ ಆರೋಪಕ್ಕೆ ಸಖತ್ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ.. ಏನಂದ್ರು?
/newsfirstlive-kannada/media/post_attachments/wp-content/uploads/2025/05/megastar-chiranjeevi1.jpg)
ಹೌದು, ಮೆಗಾಸ್ಟಾರ್ ಚಿರಂಜೀವಿ ಅವರಿಂದ ಪಡೆದ ಗಿಫ್ಟ್​ ನೋಡಿ ನಿರ್ದೇಶಕ ಫುಲ್​ ಖುಷಿಯಾಗಿದ್ದಾರೆ. ಇನ್ನೂ ಮೆಗಾಸ್ಟಾರ್ ಚಿರಂಜೀವಿ, ನಿರ್ದೇಶಕ ಬಾಬಿರಿಗೆ ಕೊಟ್ಟ ಈ ವಾಚಿನ ಬೆಲೆ ಸುಮಾರು 6 ರಿಂದ 10 ಲಕ್ಷ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ.
ಒಮೆಗಾ ಸೀಮಾಸ್ಟರ್ ವಾಚ್ ಇದಾಗಿದ್ದು, ಈ ವಿಚಾರವನ್ನ ನಿರ್ದೇಶಕ ಬಾಬಿಯವರೇ ತನ್ನ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಶೇರ್ ಮಾಡಿಕೊಂಡಿರೋ ಫೋಸ್ಟ್‌ನಲ್ಲಿ, ಚಿರಂಜೀವಿ ಅವರಿಂದ ಒಂದು ಅಚ್ಚರಿಯ ಉಡುಗೊರೆ ಸಿಕ್ಕಿದೆ. ಈ ಉಡುಗೊರೆಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ. ಧನ್ಯವಾದಗಳು.. ಈ ಕ್ಷಣವನ್ನ ನಾನು ಸದಾ ನೆನಪಲ್ಲಿಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಕೈಯಲ್ಲಿ ವಾಚ್ ಧರಿಸಿರುವ ಫೋಟೋಗಳನ್ನು ಸಹ ಬಾಬಿ ಹಂಚಿಕೊಂಡಿದ್ದಾರೆ. ಇದೇ ಪೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, ದುಬಾರಿ ಬೆಲೆಯ ವಾಚ್​ ನೋಡಿದ ಅಭಿಮಾನಿಗಳು ಶಾಕ್​ ಅಂಡ್​ ಸರ್​ಪ್ರೈಸ್​ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us