40 ವರ್ಷಗಳಿಂದ ಬಸ್ಸೇ ಬಂದಿಲ್ಲ.. ನಮ್ಮೂರಿಗೂ ಬಸ್ ಬಿಡಿ, ನಾವೂ ಫ್ರೀಯಾಗಿ ಓಡಾಡ್ಬೇಕು ಎಂದು ಗ್ರಾಮಸ್ಥರ ಆಕ್ರೋಶ

author-image
Harshith AS
Updated On
40 ವರ್ಷಗಳಿಂದ ಬಸ್ಸೇ ಬಂದಿಲ್ಲ.. ನಮ್ಮೂರಿಗೂ ಬಸ್ ಬಿಡಿ, ನಾವೂ ಫ್ರೀಯಾಗಿ ಓಡಾಡ್ಬೇಕು ಎಂದು ಗ್ರಾಮಸ್ಥರ ಆಕ್ರೋಶ 
Advertisment
  • ಖಾಸಗಿ ವಾಹನದಲ್ಲೇ ಓಡಾಡ್ತಾರೆ ಇಲ್ಲಿನ ಜನರು
  • ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ ಇಲ್ಲಿನ ಮಹಿಳೆಯರು
  • ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರು ಊರಿಗೆ ಬಸ್ ಬಂದಿಲ್ಲ

ಚಿತ್ರದುರ್ಗ: ಬಸ್ಸಲ್ಲಿ ಓಡಾಡೋಕೆ ಫ್ರೀ ಅಂತ ಹೇಳಿದ್ರಿ. ಆದರೆ ನಮ್ಮೂರಿಗೆ ಸರಕಾರಿ ಬಸ್ಸೇ ಬರಲ್ಲಾರೀ. ನಮ್ಮೂರಿಗೆ 40 ವರ್ಷಗಳಿಂದ ಸರಕಾರಿ ಬಸ್ ಬಂದಿಲ್ಲ. ನಾವೂ ಕಾಂಗ್ರೆಸ್ ಸರಕಾರಕ್ಕೆ ಓಟು ಹಾಕಿದೀವಿ, ನಮ್ಮೂರಿಗೂ ಬಸ್ ಬಿಡಿ. ನಾವೂ ಫ್ರೀಯಾಗಿ ಓಡಾಡ್ಬೇಕು ಎಂದು ಕಾಕಬಾಳ, ಗೊಲ್ಲರಹಟ್ಟಿ, ಚೌಲಿಹಳ್ಳಿ, ಕೋಡಿರಂಗವ್ವನಹಳ್ಳಿ ಗ್ರಾಮಗಳ ಜನರು ಆಕ್ರೋಶ ಹೊರಹಾಕಿದ್ದಾರೆ.

ನಾವೂ ಫ್ರೀಯಾಗಿ ಓಡಾಡ್ಬೇಕು

ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣದ ಅವಕಾಶ ಕಲ್ಪಸಿದೆ. ಆದರೆ ಚಿತ್ರದುರ್ಗ ತಾಲೂಕಿನ ಕಾಕಬಾಳ, ಗೊಲ್ಲರಹಟ್ಟಿ, ಚೌಲಿಹಳ್ಳಿ, ಕೋಡಿರಂಗವ್ವನಹಳ್ಳಿ ಗ್ರಾಮಗಳು ಬಸ್​ ವ್ಯವಸ್ಥೆ ಇಲ್ಲದೆ ರೋಸಿ ಹೋಗಿದ್ದಾರೆ. ಸುಮಾರು 40 ವರ್ಷಗಳಿಂದ ಸರಕಾರಿ ಬಸ್ ಬಾರದೆ ಇರೋದ ವಿಚಾರವಾಗಿ ಬೇಸರ ಹೊರಹಾಕಿದ್ದಾರೆ.

publive-image

ಖಾಸಗಿ ವಾಹನದಲ್ಲಿ ಸಂಚಾರ

ಗ್ರಾಮದ ಮಹಿಳೆಯರು ಬಸ್ ಬಾರದ್ದರಿಂದ ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ. ಇನ್ನು ಅಲ್ಲಿನ ಗ್ರಾಮಸ್ಥರು ಪ್ರತಿನಿತ್ಯ ಪ್ರೈವೇಟ್ ಬಸ್, ಆಟೋರಿಕ್ಷಾಗಳಲ್ಲೇ ಓಡಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಗೆ ಹೋಗುವ ಜನರಿಗೆ, ಶಾಲಾ ಕಾಲೇಜಿನ ಮಕ್ಕಳಿಗೆ, ವೃದ್ಧರಿಗೆ ತೊಂದರೆ ಉಂಟಾಗಿದೆ. ಸರ್ಕಾರಿ ಬಸ್​ ವ್ಯವಸ್ಥೆ ಇಲ್ಲದೆ ಅಲ್ಲಿನ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೋಗಲು ಪರದಾಡುತ್ತಿದ್ದಾರೆ.

ನಮ್ಮೂರಿಗೆ ಬಸ್​ ಬರ್ತಿಲ್ಲ

ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯಲ್ಲಿ ಫ್ರೀ ಪ್ರವಾಸ ಅಂದಿದೆ. ಆದ್ರೆ ನಮ್ಮೂರಿಗೆ ಬಸ್​ ಬರ್ತಿಲ್ಲ ಅಂದ್ರೆ ಹೇಗೆ. ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರು ಊರಿಗೆ ಬಸ್ ಬಂದಿಲ್ಲ. ಬಸ್ ಬಿಡದಿದ್ರೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment