newsfirstkannada.com

×

‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ

Share :

Published July 28, 2024 at 11:19am

    ಎಸ್​ಪಿ, ಡಿಸಿಯಿಂದ ನನಗೆ ನ್ಯಾಯ ಸಿಗದಿದ್ದರೆ ಶಿವಾ ಅನಿಸ್ತೀನಿ

    DRDO, ISRO, ಆರ್ಮಿ ಕ್ಯಾಂಪ್​ಗೆ ಪವರ್ ಬರೋದೆಲ್ಲ ಗೊತ್ತು

    ಜೈಲ್​ಗೆ ನನ್ನ ಹಾಕಿದ್ರೆ ಡಿ-ಬಾಸ್​ ದರ್ಶನ್​ ಪಕ್ಕದ ಸೆಲ್​ ಅನ್ನೇ ಕೊಡಿ

ಚಿತ್ರದುರ್ಗ: ಪೊಲೀಸರು ಹೊಡೆದಿದ್ದಾರೆಂದು ಯುವಕನೊಬ್ಬ ಇನ್​ಸ್ಟಾದಲ್ಲಿ ಹುಚ್ಚಾಟ ಮಾಡಿದ್ದು, ನನಗೆ ನ್ಯಾಯ ಸಿಗದಿದ್ರೆ ಸ್ಫೋಟ ಮಾಡುವುದಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇಡೀ ಬೆಂಗಳೂರು ಮ್ಯಾಪ್​ ನನ್ನ ಬಳಿ ಇದೆ. ಎಲ್ಲಿ ಪಿನ್ ಇಟ್ಟರೆ ಎಲ್ಲಿ ಸ್ಫೋಟ ಆಗುತ್ತೆಂದು ಗೊತ್ತು ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: KRS ಡ್ಯಾಂನ ಒಳ ಹರಿವು, ಹೊರ ಹರಿವು ಹೇಗಿದೆ.. ಎಷ್ಟು ಟಿಎಂಸಿ ನೀರು ಸಂಗ್ರಹ ಆಗಿದೆ ಗೊತ್ತಾ?

ತನ್ನ ತಾಯಿಯ ಕಂಪ್ಲೇಟ್​​ ಪೊಲೀಸರು ತಗೊಂಡಿಲ್ಲ ಎಂದು ಚಳ್ಳಕೆರೆ ಪಟ್ಟಣದ ಗಾಂಧಿನಗರದ ನಿವಾಸಿ ಪೃಥ್ವಿರಾಜ್ ಎನ್ನುವ ಯುವಕ ಇನ್​ಸ್ಟಾದಲ್ಲಿ ವೀಡಿಯೋ ಶೇರ್ ಮಾಡಿದ್ದಾನೆ. ವಿಡಿಯೋದಲ್ಲಿ ನ್ಯಾಯ ಕೇಳೋಕೆ ಪೊಲೀಸರು ಬಳಿಗೆ ಹೋದರೆ ಫೋನ್​ ಕಿತ್ತುಕೊಂಡು ನಾಯಿಗೆ ಹೊಡೆದಂಗೆ ಹೊಡೆದಿದ್ದಾರೆ. ಕಾಲಲ್ಲಿ ಹಾಕಿ ತುಳಿದಿದ್ದಾರೆ. ಅಪ್ ​ಮಾಡಿರುವ ಲೈವ್​ ವಿಡಿಯೋಗಳನ್ನೆಲ್ಲ ಡಿಲೀಟ್ ಮಾಡಿ, ಅವರಿಗೆ ಇಷ್ಟ ಬಂದಾಗೆ ಹೊಡೆದು, ನಮ್ಮ ಅಮ್ಮನ ಮುಂದೆಯೇ ನಿಂದಿಸಿದ್ದಾರೆ. ಖಾಕಿ ಹಾಕಿಕೊಂಡಿದ್ದಾರೆಂದು ಅವರು ಇಷ್ಟ ಬಂದ ಹಾಗೆ ಮಾತನಾಡಬಹುದಾ? ಡಿಲೀಟ್ ಮಾಡಿರೋ ವಿಡಿಯೋಗಳು ಬೇರೆ ಎಲ್ಲೋ ಸೇವ್ ಆಗಿರುತ್ತವೆ ಎಂಬುವುದು ನಿಮ್ಮ (ಪೊಲೀಸರ) ತಲೆಯಲ್ಲಿ ಇರಲಿ ಎಂದಿದ್ದಾನೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್​ವುಡ್​ ನಟ..!

ಡಿಲೀಟ್​ ಮಾಡಿದ ಆ ವಿಡಿಯೋಗಳನ್ನೆಲ್ಲ ಮತ್ತೆ ಅಪ್​ಲೋಡ್ ಮಾಡುತ್ತೇನೆ. ಎಸ್​ಪಿ ಆಫೀಸ್​ಗೆ ಹೋಗ್ತೀನಿ ಅಲ್ಲಿಯೂ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲವೆಂದರೆ ಡಿಸಿ ಕಚೇರಿಗೆ ಹೋಗುತ್ತೇನೆ. ಡಿಸಿನೂ ನ್ಯಾಯ ಕೊಡದಿದ್ದರೆ ಇಡೀ ಬೆಂಗಳೂರು ಮ್ಯಾಪ್​ ನನ್ನ ಹತ್ರ ಇದೆ. ಇಂಡಿಯನ್ ಇನ್​​ಸ್ಟಿಟ್ಯೂಟ್​ ಆಫ್ ಸೈನ್ಸ್, ಬೆಂಗಳೂರು ಮೆಟ್ರೋದಲ್ಲಿ ಸೇರಿ 9 ವರ್ಷ ಎಲೆಕ್ಟ್ರಿಕಲ್​​ನಲ್ಲಿ ಕೆಲಸ‌ ಮಾಡಿದ್ದೀನಿ. DRDO, ISRO, ಆರ್ಮಿ ಕ್ಯಾಂಪ್​ಗೆ ಪವರ್ ಎಲ್ಲಿಂದ ಹೋಗತ್ತೆ ಅಂತಾ ಗೊತ್ತು. ಎಲ್ಲಿ ಪಿನ್ ಇಟ್ಟರೆ, ಎಲ್ಲಿ ಬ್ಲಾಸ್ಟ್ ಮಾಡಬಹುದೆಂದು ಗೊತ್ತು. ಎಲ್ಲಿ ಏನ್ ಬೇಕಾದ್ರೂ ಬ್ಲಾಸ್ಟ ಮಾಡಿ ಶಿವಾ ಅನಸ್ತೀನಿ. ಎಸ್​ಪಿ, ಡಿಸಿ ಬಳಿಗೆ ಹೋಗುತ್ತೇನೆ. ನ್ಯಾಯ ಕೊಡದಿದ್ದರೆ, ಮಾಡಿದ್ರೆ ಇನ್ನೊಂದು ವಿಡಿಯೋ ಮಾಡ್ತೀನಿ. ಇಲ್ಲಂದ್ರೆ ಶಿವಾ ಅನಿಸ್ತೀನಿ ಎಂದು ಯುವಕ ಇನ್​ಸ್ಟಾ ಪೋಸ್ಟ್​ನಲ್ಲಿ ಹೇಳಿದ್ದಾನೆ.

ಇದನ್ನೂ ಓದಿ: Breaking: ಮೇಘಾಲಯದ ರಾಜ್ಯಪಾಲರಾಗಿ ಸಿ.ಹೆಚ್ ವಿಜಯಶಂಕರ್ ನೇಮಕ.. ರಾಜಕೀಯ ಹಿನ್ನೆಲೆ ಏನು..? 

ಕ್ರಿಮಿನಲ್ ಕೇಸ್ ಹಾಕ್ತಿದ್ದೀರಾ? ಹಾಕಿಕೊಳ್ಳಿ. ವಿಧಾನಸೌಧಕ್ಕೆ, ರಾಜಭವನಕ್ಕೆ ಎಲ್ಲಿಂದ ಪವರ್ ಬರುತ್ತೆ, ಅಷ್ಟೇ ಯಾಕೆ ಬೆಂಗಳೂರಿಗೆ ಪವರ್ ಎಲ್ಲಿಂದ ಬರುತ್ತೆಂದು ನನಗೆ ಗೊತ್ತು. ಎಲ್ಲಿ ಬ್ಲಾಸ್ಟ್ ಮಾಡಿದ್ರೆ ಏನು ಬ್ಲಾಸ್ಟ್ ಆಗುತ್ತೆ ಎಂಬುವುದು ಗೊತ್ತು. ಕ್ರೈಂ ಮಾಡೋತರ ಮಾಡಿದೀರಾ, ಅದನ್ನು ನೀವೆ ಅನುಭವಿಸಿಕೊಳ್ಳಿ. ಮಹಾ ಅಂದರೆ ಗಲ್ಲಿಗೆ ಹಾಕ್ತೀರಿ, ಹಾಕ್ರಿ. ಗಲ್ಲಿಗೆ ಹಾಕೋಕೆ ಇನ್ನು 10- 15 ವರ್ಷ ಬೇಕು. ಇಷ್ಟೆಲ್ಲ ದೊಡ್ಡದಾಗಿ ಮಾಡಿದ ಮೇಲೆ ವಿಐಪಿ ತರನೇ ಜೈಲಲ್ಲಿ ಟ್ರೀಟ್ ಕೊಡ್ತೀರಿ. ಕೊಡೋದು, ಕೊಡ್ತೀರಾ ಡಿ-ಬಾಸ್​ ಪಕ್ಕದ ಸೆಲ್​​ ಅನ್ನೇ ಕೊಡಿ. ಆವಾಗ ದರ್ಶನ್​ರನ್ನ ನೋಡಿಕೊಂಡು ಸ್ವಲ್ಪ ದಿನ ಇರುತ್ತೇನೆ. ನನ್ನಮ್ಮ ಕೆಟ್ಟದಾಗಿ ಏನು ಮಾಡಬೇಡ ಎಂಉದು ಹೇಳೋರು. ಆದರೆ ಈ ವಿಡಿಯೋ ಮಾಡ್ತಿದ್ದರು ಮನೆಯಲ್ಲಿ ಸುಮ್ಮನಿದ್ದಾರೆ. ಯಾಕೆಂದರೆ ನನಗೆ ಪೊಲೀಸರು ಆ ರೀತಿ ಹೊಡೆದಿದ್ದಾರೆ ಎಂದು ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ

https://newsfirstlive.com/wp-content/uploads/2024/07/CTR_INSTA_VIDEO.jpg

Load More