newsfirstkannada.com

ದುಡ್ಡು ಡಬಲ್ ಮಾಡಿಕೊಡೋದಾಗಿ 106 ರೈಲ್ವೆ ನೌಕರರಿಗೆ ವಂಚನೆ.. ಕೋಟಿ, ಕೋಟಿ ಹಣ ಸಮೇತ ವಿದೇಶಕ್ಕೆ ಆಸಾಮಿ ಜಂಪ್

Share :

Published February 14, 2024 at 3:49pm

    ಹಣ ದ್ವಿಗುಣ ಮಾಡಿಕೊಡುವ ಆಸೆ ತೋರಿಸಿ ರೈಲ್ವೆ ನೌಕರರಿಗೆ ಪಂಗನಾಮ

    ಒಂದೇ ಜಂಕ್ಷನ್​​ನಲ್ಲಿ ಕೆಲಸ ಮಾಡುವ ನೌಕರರಿಗೆ ಮಹಾಮೋಸ ಮಾಡಿದ

    ಕೇವಲ 60 ದಿನಗಳಲ್ಲಿ ಹಣ ಡಬಲ್ ಮಾಡಿಕೊಡುತ್ತೇನೆಂದು ಹೇಳಿದ್ದ ವ್ಯಕ್ತಿ

ಚಿತ್ರದುರ್ಗ: ಕೇವಲ 60 ದಿನಗಳಲ್ಲಿ ಹಣ ಡಬಲ್ ಮಾಡಿಕೊಡುತ್ತೇನೆಂದು ರೈಲ್ವೆ ಇಲಾಖೆಯ 106 ನೌಕರರಿಗೆ 4.79 ಕೋಟಿ ರೂಪಾಯಿ ಪಂಗನಾಮ ಹಾಕಿ ಆಸಾಮಿಯೊಬ್ಬ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನ ರೈಲ್ವೇ ಜಂಕ್ಷನ್​ನಲ್ಲಿ ಕೆಲಸ ಮಾಡುವ ನೌಕರರು ವಂಚನೆಗೆ ಒಳಗಾಗಿದ್ದಾರೆ.

ಆಂಧ್ರ ಪ್ರದೇಶದ ಕರ್ನೂಲ್​ ಮೂಲದ ಕೋಡೆ ರಮಣಯ್ಯ ಹಣ ತೆಗೆದುಕೊಂಡು ವಿದೇಶಕ್ಕೆ ಹಾರಿದ ಆರೋಪಿ. ಕೇವಲ 60 ದಿನಗಳಲ್ಲಿ ಕ್ರೌಡ್ ಕ್ಲಬ್ ಇಂಟರನ್ಯಾಶನಲ್‌ ಪ್ರೈ.ಲಿ ಹೆಸರಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ದೋಖಾ ಎಸಗಿದ್ದಾನೆ. ಚಿಕ್ಕಜಾಜೂರಿನ ರೈಲ್ವೇ ಜಂಕ್ಷನ್​ನಲ್ಲಿ ಕೆಲಸ ಮಾಡುವ 106 ರೈಲ್ವೆ ನೌಕರರಿಂದ ಒಟ್ಟು 4 ಕೋಟಿ 79 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ವಿದೇಶಕ್ಕೆ ಹೋಗಿದ್ದಾನೆ.

ಸದ್ಯ ರೈಲ್ವೆ ಇಲಾಖೆಯ ಹೊರಗುತ್ತಿಗೆ ನೌಕರ ಪರಮೇಶ್ವರಪ್ಪ ಚಿಕ್ಕಜಾಜೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಕೇಸ್ ಅನ್ನು ಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಆರೋಪಿಯು ಕರ್ನಾಟಕ, ರಾಜಸ್ಥಾನ ಸೇರಿದಂತೆ ಕೆಲವಡೆ ಇದೇ ರೀತಿ ವಂಚಿಸಿದ್ದಾನೆ ಎಂಬುದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡ್ಡು ಡಬಲ್ ಮಾಡಿಕೊಡೋದಾಗಿ 106 ರೈಲ್ವೆ ನೌಕರರಿಗೆ ವಂಚನೆ.. ಕೋಟಿ, ಕೋಟಿ ಹಣ ಸಮೇತ ವಿದೇಶಕ್ಕೆ ಆಸಾಮಿ ಜಂಪ್

https://newsfirstlive.com/wp-content/uploads/2024/02/CTR_4_CR_VANCHANE.jpg

Load More