ಕೋಟೆನಾಡಿನ ಹನಿಟ್ರ್ಯಾಪ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್.. ಹಣ, ಚಿನ್ನ ಕಳೆದುಕೊಂಡವರು ಯಾರು?​

author-image
Bheemappa
Updated On
ಕೋಟೆನಾಡಿನ ಹನಿಟ್ರ್ಯಾಪ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್.. ಹಣ, ಚಿನ್ನ ಕಳೆದುಕೊಂಡವರು ಯಾರು?​
Advertisment
  • ಗ್ರಾಮ ಪಂಚಾಯತಿ ಸದಸ್ಯ ‘ಹನಿ’ ಬಲೆಯಲ್ಲಿ ಬಿದ್ದ ಸ್ಟೋರಿ ಸುಳ್ಳಾ?
  • ಮಂಜುನಾಥನ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಮಹಿಳೆ
  • ಅಸಲಿಗೆ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದು ಯಾರು, ಲಕ್ಷಾಂತರ ಹಣ ಎಲ್ಲಿ?

ಕೋಟೆನಾಡಿನ ಹನಿಟ್ರ್ಯಾಪ್​ಗೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ಅಂದ-ಚಂದದಿಂದ ಮರುಳು ಮಾಡಿ ಮಂಕುಬೂದಿ ಎರಚಿದ್ದಾರೆ ಅಂತಾ ಆರೋಪ ಮಾಡಿದ್ದ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಕೇಸ್​ ದಾಖಲಾಗಿದೆ. ಮೋಹದ ಬಲೆ ಬೀಸಿದ್ದಳು ಎಂಬ ಆರೋಪ ಹೊತ್ತಿದ್ದ ಮಾಯಾಂಗನೆ ಪ್ರತ್ಯಕ್ಷವಾಗಿ ಮಂಜುನಾಥ್​ ಕಾಮ ಕಾಂಡ ಬಿಚ್ಚಿಟ್ಟಿದ್ದಾಳೆ.

ಲಿವಿಂಗ್ ರಿಲೇಶನ್‌ಶಿಫ್ ಹೆಸರಲ್ಲಿ ಕಿಲಾಡಿ ಲೇಡಿ ನಾಮ ಹಾಕಿದ್ದಳು. ಮಂಜುನಾಥ ತಾಳಿ ಕಟ್ಟದೇ 8 ವರ್ಷದಿಂದ ಬಳಕೆ ಮಾಡಿಕೊಂಡ ಎನ್ನುವ ಹನಿಟ್ರ್ಯಾಪ್‌ ಎಂಬ ಮೋಹಕ ಬಲೆ ಬೀಸಿ ಮೋಸ ಮಾಡಿದ ಮಾಯಾಂಗನೆಯ ಕಥನಕ್ಕೆ ಹೊಸ ಟ್ವಸ್ಟ್​ ಸಿಕ್ಕಿದೆ. ವರ್ಷಾನುಗಟ್ಟಲೇ ಜೊತೆಗಿದ್ದು ಲಕ್ಷಾಂತರ ರೂಪಾಯಿ ಪೀಕಿ ಪಂಗನಾಮ ಹಾಕಿದ್ದ ಸ್ಟೋರಿಯ ಮತ್ತೋಂದು ಆರೋಪ ಹೊರ ಬಿದ್ದಿದೆ.

publive-image

ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ಎಫ್​ಐಆರ್ ದಾಖಲು

ಗ್ರಾಮ ಪಂಚಾಯತಿ ಸದಸ್ಯನ ಹನಿಟ್ರ್ಯಾಪ್ ಕೇಸ್​ ಮತ್ತೊಂದು ತಿರುವು ಪಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಸದಸ್ಯನಿಗೆ 35 ಲಕ್ಷ ರೂಪಾಯಿ ಪಂಗನಾಮ ಹಾಕಿ, ಮೋಸ ಮಾಡಿದಳು. ಜೊತೆಗೆ ತಲೆ ಮರೆಸಿಕೊಂಡಿದ್ದಳು ಅಂತಾ ಸಾಲು ಸಾಲು ಆರೋಪಗಳಿಗೆ ತೆರೆ ಬಿದ್ದಿದೆ. ಯಾಕಂದ್ರೆ ಆರೋಪಿ ಮಹಿಳೆ ನಾನೇ ಸಂತ್ರಸ್ತೆ ಅಂತಾ ಪೊಲೀಸ್​ ಠಾಣೆ ಮುಂದೆ ಪ್ರತ್ಯಕ್ಷವಾಗಿದ್ದಾಳೆ. ಮೊನ್ನೆ ಮಹಿಳೆಯಿಂದ ಮುಕ್ತಿ ಬೇಕು ಅಂತ ಮಂಜುನಾಥ್ ಗೋಗರೆದ ಎರಡೇ ದಿನಕ್ಕೆ ಹನಿಟ್ರ್ಯಾಪ್ ಕೇಸ್ ಸಂಬಂಧ ಆತನ ವಿರುದ್ಧವೇ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಹೀಗೆ ಪ್ರತ್ಯಕ್ಷವಾದ ಮಹಿಳೆ ಮಂಜುನಾಥನ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾಳೆ. ಘಟನೆ ಸಂಬಂಧ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಮಹಿಳೆ, ಮಂಜುನಾಥ ನನಗೆ ತಾಳಿ ಕಟ್ಟದೇ 8 ವರ್ಷಷದಿಂದ ಬಳಕೆ ಮಾಡಿಕೊಂಡ. ನನ್ನನ್ನ ಸಿಗರೇಟ್​ನಲ್ಲಿ ಸುಡುತ್ತಿದ್ದ ವಿಕೃತ ಕಾಮಿ, ಅವನ ಹತ್ರ ಹಣ ಇದಿದ್ರೆ ತಾಳಿ ತಂದು ಕಟ್ಟುತ್ತಿದ್ದ. ಮಂಜುನಾಥ್​ಗೆ ನಾನೇ 30 ಲಕ್ಷ ಹಣ, ಬಂಗಾರ ಕೊಟ್ಟಿದೀನಿ ಅಂತಾ ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟಿದ್ದಾರೆ.

publive-image

ಇದನ್ನೂ ಓದಿ:ಅಮೆರಿಕದ ಗಲ್ಲಿ ಗಲ್ಲಿಯಲ್ಲಿ ಅಕ್ರಮ ವಲಸಿಗರಿಗಾಗಿ ಟ್ರಂಪ್ ಸರ್ಕಾರ ಹುಡುಕಾಟ.. ಭಾರತೀಯರಿಗೂ ಗೇಟ್ ಪಾಸ್

ಕಟ್ಕೊಂಡೋಳು ಕಡೇ ತನಕ.. ಪರಸ್ತ್ರೀ ಸಹವಾಸ ಜೇಬಲ್ಲಿ ದುಡ್ಡು ಇರೋ ತನಕ ಅಂತಾ ಮಂಜುನಾಥ್ ಮೊನ್ನೆ ಇಲ್ದೆ ಇರೋ ಡೌವ್​ ಮಾಡಿದ್ದ. ಇದೀಗ ಲೇಡಿ ಪ್ರತ್ಯಕ್ಷ ಆಗಿ ಮಂಜುನಾಥನ ವಿಕೃತ ಕಾಮದಾಟದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದರಲ್ಲಿ ಯಾವುದು ಸತ್ಯ ಅನ್ನೋದು ಪೊಲೀಸರ ತನಿಖೆ ಬಳಕವಷ್ಟೇ ಹೊರಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment