/newsfirstlive-kannada/media/post_attachments/wp-content/uploads/2025/01/CTR_KIDNAP.jpg)
ಆ ಇಬ್ಬರು ವಿದ್ಯಾರ್ಥಿಗಳು ಟ್ಯೂಷನ್ಗೆ ಹೋಗಿದ್ದರು. ಆದರೆ ಇದೇ ಸಮಯದಲ್ಲಿ ನಾಲ್ವರು ದುಷ್ಕರ್ಮಿಗಳು ಆ ಬಾಲಕರನ್ನು ಕಿಡ್ನಾಪ್ ಮಾಡಲು ಹೊಂಚು ಹಾಕಿ ಕುಳಿತ್ತಿದ್ದರು. ಎಲ್ಲಾ ಅಂದುಕೊಂಡಂತೆ ಅಪಹರಣ ಕೂಡ ಮಾಡಿ ಎಸ್ಕೇಪ್ ಆಗಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾರೆ. ಅಷ್ಟಕ್ಕೂ ಮಕ್ಕಳನ್ನ ದಾರಿ ಮಧ್ಯೆ ಬಿಟ್ಟು ಹೋಗಿದ್ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್.
ಕಿಡ್ನಾಪ್ ಹೇಳಿದ ಬಾಲಕ ಏನು..?
ನಾವು ಶೌಚಕ್ಕೆ ಎಂದು ಹೊರಗಡೆ ಬಂದಿದ್ದು. ವ್ಯಾನ್ ನಿಂತಿದ್ದು ನೋಡಿ ಓಡಿ ಹೋಗೋಣ ಬಾ ಎಂದು ಸ್ನೇಹಿತನಿಗೆ ಹೇಳಿದೆ. ಅದಕ್ಕೆ ಸ್ನೇಹಿತ ಬೇಡ ಮೆಲ್ಲಗೆ ಹೋಗೋಣ ಏನು ಆಗಲ್ಲ ಎಂದ. ಅಷ್ಟರಲ್ಲೇ ಒಂದು ಹೆಜ್ಜೆ ಇಟ್ಟೆ ಅಷ್ಟೇ. ಅಷ್ಟರಲ್ಲೇ ಬಂದು ನಮ್ಮನ್ನು ಹಿಡಿದುಕೊಂಡು ಬಿಟ್ಟರು. ಇವನು ಹಿಂದಕ್ಕೆ ತಿರುಗಿ ನೋಡಿದ್ದಕ್ಕೆ ಮುಖಕ್ಕೆ ಸ್ಪ್ರೇ ಹೊಡೆದು ಬಿಟ್ಟರು. ಮೂರ್ಛೆ ತಪ್ಪೋಗಿ ಬಿದ್ದಿದ್ದ.
ಕಿಡ್ನಾಪ್ ಆಗಿದ್ದ ಬಾಲಕ
ಇಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿದ ಅಪಹರಣಕಾರರು!
ಇಬ್ಬರು ಬಾಲಕರು ಚಿತ್ರದುರ್ಗದ ಹಿರಿಯೂರು ತಾಲೂಕಿನ ಗ್ರಾಮದವರು. ನವೋದಯ ಪರೀಕ್ಷೆಗೆ ಟ್ಯೂಷನ್ ಹೇಳಿಕೊಡಲಾಗುತ್ತದೆ. ಆದರೆ ಡಿಸೆಂಬರ್ 31ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಟ್ಯೂಷನ್ ಕೇಂದ್ರದ ಸಮೀಪ ಆತಂಕಕಾರಿ ಘಟನೆ ನಡೆದಿತ್ತು. ಟ್ಯೂಷನ್ಗೆಂದು ಬಂದಿದ್ದ ಈ ಇಬ್ಬರು ಶೌಚಾಲಯಕ್ಕೆಂದು ಹೊರಬಂದಾಗ ಏಕಾಏಕಿ ನಾಲ್ವರು ಮುಸುಕುಧಾರಿಗಳು ಬಾಲಕರ ಮುಖಕ್ಕೆ ರಾಸಾಯನಿಕ ಸ್ಪ್ರೈ ಮಾಡಿಬಿಟ್ಟಿದ್ರು. ಮೂರ್ಛೆ ಹೋದವರನ್ನು ಕೂಡಲೇ ಒಮ್ನಿಯಲ್ಲಿ ಎತ್ತಾಕಿಕೊಂಡು ಕಿಡ್ನಾಪ್ ಮಾಡಿ PD ಕೋಟೆ ಕಡೆ ಕರೆದೊಯ್ದಿದ್ದರು.
ಆದರೆ ಅಪಹರಣಕಾರರು ಇಲ್ಲೇ ಯಡವಟ್ಟು ಮಾಡಿಕೊಂಡಿದ್ರು. ಸುಮಾರು 10 ಕಿಲೋ ಮೀಟರ್ ದೂರ ಹೋಗುತ್ತಿದ್ದಂತೆ ನಾವು ಅಪಹರಿಸಿದ್ದು ಬೇರೆ ಬಾಲಕರನ್ನು ಅನ್ನೋದು ಇವರು ಕಳಿಸಿದ ಪೋಟೋದಿಂದ ಗೊತ್ತಾಗಿತ್ತು. ಕಿಂಗ್ ಪಿನ್ ಕೊಟ್ಟಿದ್ದ ಸುಪಾರಿ ಮಿಸ್ಸಾಗಿದ್ದು ಪಕ್ಕಾ ಆಗ್ತಿದ್ದಂತೆ ನಡು ರಸ್ತೆಯಲ್ಲಿ ಬಾಲಕರನ್ನ ತಳ್ಳಿ ಕಾಲ್ಕಿತ್ತಿದ್ದಾರೆ.
ಹಳ್ಳಿತ್ತೆ ಕ್ರಾಸ್ನಲ್ಲಿ ಗಾಡಿ ನಿಲ್ಲಿಸಿ ಫೋನ್ನಲ್ಲಿ ಮಾತನಾಡುತ್ತಿದ್ದರು. ಹಿಂದಿಯಲ್ಲಿ ಮಾತನಾಡಿ, ಆ ಕಡೆಯಿಂದ ಫೋನ್ನಲ್ಲಿ ಸಾಲೇ ಕುತ್ತ ಹೋ ನಯಿ ದುಷ್ರಾ ಕಾ ಪಕ್ಡಾನ್. ಕ್ಯಾ ಪಕಡ್ ಲಿಯಾ ಅಂದ್ರು. ಅದಕ್ಕೆ ಸರಿ ಅಂದು. ನಮ್ಮನ್ನು ಅಲ್ಲೇ ರಸ್ತೆ ನೂಕಿ ಹೋಗಿ ಬಿಟ್ಟರು. ಹೋಗುವಾಗ ನಮ್ಮ ಕಣ್ಣಿಗೆ ಸ್ಪ್ರೇ ಹೊಡೆದು ಹೋದರು.
ಕಿಡ್ನಾಪ್ ಆಗಿದ್ದ ಬಾಲಕ
ಇದನ್ನೂ ಓದಿ: ಹೆಂಡತಿಗೆ ಫ್ರೀ, ಗಂಡನಿಗೆ ಡಬಲ್ ರೇಟ್.. ಬಸ್ ದರ ಹೆಚ್ಚಳಕ್ಕೆ ಭಾರೀ ಆಕ್ರೋಶ
ನಿರ್ಜನ ಪ್ರದೇಶದಲ್ಲಿ ಟ್ಯೂಷನ್ಗೆ ಬಂದಿದ್ದ ಬಾಲಕರ ಕಿಡ್ನಾಪ್ ಯತ್ನ ವಿಫಲವಾಗಿದೆ. ಆದರೆ ವಿಚಾರ ಸ್ಟೋರಿ ಬೆಳಕಿಗೆ ಬರ್ತಿದ್ದಂತೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಅಲ್ಲದೆ ಟ್ಯೂಷನ್ಗೆ ಬರುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲೂ ಆತಂಕ ಮೂಡಿದೆ. ಆದರೆ ಕಿಡ್ನಾಪ್ ಯಾರನ್ನ ಮಾಡಲು ಬಂದಿದ್ರು ಅನ್ನೋ ಪ್ರಶ್ನೇ ಕಾಡ್ತಿದೆ. ಸ್ಥಳಕ್ಕೆ ಅಬ್ಬಿನಹೊಳೆ PSI ಬಾಹುಬಲಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕಿಡ್ನಾಪರ್ಸ್ ಪತ್ತೆಗೆ ಬಲೆ ಬೀಸಿದ್ದಾರೆ.
ಯಾರನ್ನೋ ಕಿಡ್ನಾಪ್ ಮಾಡಲು ಬಂದ ದುಷ್ಕರ್ಮಿಗಳ ಟಾರ್ಗೆಟ್ ಜಸ್ಟ್ ಮಿಸ್ ಆಗಿದೆ. ಸದ್ಯ ಈ ಪ್ರಕರಣದ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆರೋಪಿಗಳ ಬಂಧನದ ಬಳಿಕವಷ್ಠೆ ಸಂಪೂರ್ಣ ಸತ್ಯಾಸತ್ಯತೆ ಹೊರಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ