newsfirstkannada.com

ದರ್ಶನ್​ ಗ್ಯಾಂಗ್​ಗೆ ರೇಣುಕಾಸ್ವಾಮಿ ಸಿಕ್ಕಿಬಿದ್ದಿದ್ದು ಹೇಗೆ? ಪವಿತ್ರಾ ಗೌಡಗೆ ಏನ್​ ಮೆಸೇಜ್​ ಕಳಿಸಿದ್ರು?

Share :

Published June 18, 2024 at 6:17am

  ಫೆಬ್ರವರಿಯಲ್ಲಿ ಪವಿತ್ರಾಗೆ ಮೆಸೇಜ್​ ಮಾಡಿದ್ದ ರೇಣುಕಾಸ್ವಾಮಿ

  ಪವನ್​ಗೆ ವಿಷಯ ತಿಳಿಯುತ್ತಿದ್ದಂತೆ ರೇಣುಕಾಗೆ ಬಲೆಗೆ ಸಿಕ್ಕಿದ್ದೇಗೆ

  ಯುವಕ ರೇಣುಕಾಸ್ವಾಮಿಯ ಮರ್ಡರ್​ಗೆ ಹೆಣೆಯಲಾಗಿದ್ದ ಬಲೆ

ಅಮಾಯಕ ರೇಣುಕಾಸ್ವಾಮಿ ಕಟುಕರ ಕೈಗೆ ಕುರಿ ಸಿಕ್ಕ ಹಾಗೇ ಈ ಡೆವಿಲ್​ ಗ್ಯಾಂಗ್​ ಬಲೆಗೆ ಬಿದ್ದಿದ್ದು ಹೇಗೆ ಗೊತ್ತಾ? ಇದು ಒಂದೆರೆಡು ದಿನದ ಪ್ಲಾನ್​ ಅಂತೂ ಅಲ್ಲವೇ ಅಲ್ಲ, ಪಕ್ಕಾ ಪ್ಲಾನ್​ ಮಾಡಿ ಎಕ್ಸಿಕ್ಯೂಟ್​ ಮಾಡಲಾಗಿದೆ. ಇನ್ಸ್​ಸ್ಟಾದಿಂದ ಶುರುವಾಗಿ ಕೊಲೆಯಲ್ಲಿ ಅಂತ್ಯವಾದ ರೇಣುಕಾಸ್ವಾಮಿಯ ಮರ್ಡರ್​ಗೆ ಹೆಣೆಯಲಾಗಿದ್ದ ಬಲೆ ಹೇಗಿತ್ತು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ರೇಣುಕಾಸ್ವಾಮಿ ಕೊಲೆ ಕಹಾನಿ ಶುರುವಾಗೋದು ಮೊದಲು ಇನ್​​ಸ್ಟಾಗ್ರಾಮ್​​ನಿಂದ. ಆ ಮೇಲೆ ಸಮಯ ಕಳೆದಂತೆ ವಾಟ್ಸಾಪ್​ಗೆ ಶಿಫ್ಟ್​ ಆಗುತ್ತೆ. ನಂತರ ಕಿಡ್ನಾಪ್​ ಮಾಡುವ ಘಟಕ್ಕೂ ತಲುಪುತ್ತೆ. ಅಲ್ಲಿಗೆ ನಿಲ್ಲದ ಸ್ಟೋರಿ, ಕೊನೆಗೆ ಆತನ ಕೊಲೆಯಾಗಿ ಸಿನಿಮಾದಂತೆ ದುರಂತ ಅಂತ್ಯ ಕಾಣುತ್ತೆ. ಆದ್ರೆ, ಇದಿಷ್ಟು ನಡೆದಿದ್ದು, ಹಾಗೇ ಸುಮ್ನೆ ಅಂತೂ ಅಲ್ಲ, ಪಕ್ಕಾ ಪ್ಲಾನ್​ ಪ್ರಕಾರ ಇದೆಲ್ಲಾ ನಡೆದಿದೆ ಅನ್ನೋದಕ್ಕೆ ಇಲ್ಲಿದೆ ನೋಡಿ ಕೆಲವು ಇಂಟ್ರೆಸ್ಟಿಂಗ್​ ಮಾಹಿತಿ. ​ರೇಣುಕಾಸ್ವಾಮಿ ಗ್ರಹಚಾರ ಕೆಟ್ಟಿತ್ತೋ ಏನೋ ಪವಿತ್ರಾ ಗೌಡಗೆ ಮೆಸೇಜ್​ ಮಾಡಿ ತಾನಾಗಿಯೇ ಖೆಡ್ಡಾ ತೋಡಿಕೊಂಡಿದ್ದ. ಯಾವಾಗ ಬಿಡದೇ ಪವಿತ್ರಾಗೆ ರೇಣುಕಾಸ್ವಾಮಿ ಮೆಸೇಜ್ ಮಾಡೋಕೆ ಶುರು ಮಾಡಿದ್ನೋ ಅವನ ಪತ್ತೆಗೆ ಇನ್ಸ್​ಸ್ಟಾ ಮತ್ತು ವಾಟ್ಸ್ ಆ್ಯಪ್​ನಲ್ಲಿ ಬಲೆ ಬೀಸಲಾಗುತ್ತೆ. ನಂತರ ನಡೆದಿದ್ದು ದುರಂತ ಘಟನೆ.

ಇದನ್ನೂ ಓದಿ: ತಗಡು ಎಂದಿದ್ದ ದರ್ಶನ್​ಗೆ ಟಾಂಗ್ ಕೊಟ್ಟ ರಾಬರ್ಟ್​ ನಿರ್ಮಾಪಕ​.. ಉಮಾಪತಿ ಗೌಡ ಏನಂದ್ರು?

ಅಂದ್ಹಾಗೆ ರೇಣುಕಾಸ್ವಾಮಿ ಫೆಬ್ರವರಿಯಲ್ಲಿ ಪವಿತ್ರಾ ಗೌಡಗೆ ಫಸ್ಟ್ ಮೆಸೇಜ್ ಮಾಡಿದ್ದ. ಅದು ಕೂಡ ರೆಡ್ಡಿ ಅನ್ನೋ ಹೆಸರಿನ ಅಕೌಂಟ್​ನಿಂದ ಇನ್​ಸ್ಟಾಗ್ರಾಂನಲ್ಲಿ ಚಾಟ್ ಮಾಡ್ತಿದ್ದ. ಬಳಿಕ ಅದೇ ಚಾಟಿಂಗ್​ನಲ್ಲೇ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಬೈಯುತ್ತಿದ್ದನಂತೆ. ಬಳಿಕ ಈ ವಿಚಾರವನ್ನು ಪವಿತ್ರಾ, ದರ್ಶನ್​ ಮನೆಯಲ್ಲಿದ್ದ ಪವನ್​ಗೆ ತಿಳಿಸುತ್ತಾಳೆ. ನಂತರ ಪವನ್ ಜೊತೆ ಮಾತನಾಡಿ ಇಬ್ಬರೂ ಒಂದು ಪ್ಲಾನ್ ಮಾಡಿಕೊಳ್ತಾರೆ. ಅದರಂತೆ ರೇಣುಕಾಗೆ ಇನ್​ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡ್ಬೇಡ ಎಂದಿದ್ದ ಪವಿತ್ರಾ, ನನಗೂ ನಿನ್ನ ಜೊತೆ ಮಾತನಾಡಬೇಕು ಎನ್ನಿಸ್ತಿದೆ ಅಂತ ಹೇಳಿ ರೇಣುಕಾಗೆ ಪವನ್ ವಾಟ್ಸ್​ಆ್ಯಪ್ ನಂಬರ್ ಕೊಟ್ಟಿದ್ದಳಂತೆ. ಬಳಿಕ ರೇಣುಕಾ ಜೂನ್ ಆರಂಭದಿಂದ ಚಾಟ್ ಮಾಡೋಕೆ ಶುರು ಮಾಡಿಕೊಂಡಿದ್ದನಂತೆ. ಇಲ್ಲಿಂದ ಶುರುವಾಯ್ತು ನೋಡಿ ರೇಣುಕಾ ಜೊತೆ ಪವನ್​ ಚಾಟಿಂಗ್. ಚಾಟ್​ ಮಾಡುತ್ತಲ್ಲೇ ಪವನ್​ ರೇಣುಕಾಗೆ ಖೆಡ್ಡಾ ತೋಡಿ​ ಎಲ್ಲಾ ಮಾಹಿತಿ ಕಲೆ ಹಾಕಿಕೊಂಡಿದ್ದ.

ರೇಣುಕಾಸ್ವಾಮಿ ಪವಿತ್ರಾಳ ಮೆಸೇಜ್​ ಮಾಡ್ತಿರೋದು ಅಂದ್ಕೊಂಡು ಪವನ್​ಗೆ ಮೆಸೇಜ್​ ಮಾಡೋಕೆ ಶುರು ಮಾಡಿಕೊಂಡಿದ್ದ. ಈ ವೇಳೆ ಚಾಲಕಿ ಪವನ್​, ನಿನ್ನ ಊರು ಯಾವುದು? ನೀನು ಎಲ್ಲಿ ಕೆಲಸ ಮಾಡೋದು? ಅಂತ ರೇಣುಕಾಸ್ವಾಮಿಯಿಂದಲೇ ಆತನ ಮಾಹಿತಿ ಕಲೆ ಹಾಕಿಕೊಳ್ಳೋಕೆ ಶುರು ಮಾಡಿದ್ದ. ಈ ರೇಣುಕಾಸ್ವಾಮಿ ಕೂಡ ಪವಿತ್ರಾ ಕೇಳ್ತಿದ್ದಾಳೆ ಅಂತ ತಾನು ಕೆಲಸ ಮಾಡ್ತಿದ್ದ ಫಾರ್ಮಸಿ ಫೋಟೋ ಹಾಗೂ ಲೊಕೇಶನ್ ಕಳುಹಿಸಿದ್ದ. ಈ ಮಧ್ಯೆ ರೇಣುಕಾಸ್ವಾಮಿ ಮರ್ಮಾಂಗದ ಫೋಟೋ ಕಳಿಸಿ ಯಡವಟ್ಟು ಮಾಡ್ಕೊಂಡಿದ್ದ. ಬಳಿಕ ಪವನ್​ ಪವಿತ್ರಕ್ಕಾಗೆ ಈ ವ್ಯಕ್ತಿ ಹೀಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದಾನೆ ಎಂದು ಜೂನ್.5 ರಂದು ದರ್ಶನ್​ಗೆ ಮಾಹಿತಿ ನೀಡಿದ್ದ. ಇಷ್ಟೆಲ್ಲದರ ನಡುವೆ ಇಡೀ ಘಟನೆ ದರ್ಶನ್​ಗೆ ಗೊತ್ತಾದ್ಮೇಲೆ ನೋಡಿ ಅಸಲಿ ಕಿಲ್ಲಿಂಗ್​ ಕಹಾನಿ ಶುರುವಾಗೋದು.

ಪ್ಲಾನ್ ಪ್ರಕಾರ ಕಿಡ್ನಾಪ್ 

ಪವನ್ ಮಾಹಿತಿ ನೀಡ್ತಿದ್ದಂತೆ ದರ್ಶನ್​ ಸ್ವಲ್ಪವೂ ತಡಮಾಡದೆ ಚಿತ್ರದುರ್ಗದ ರಘುಗೆ ಕರೆ ಮಾಡಿ, ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡ್ಕೊಂಡು ಬರಲು ಸೂಚನೆ ನೀಡಿದ್ದನಂತೆ. ದರ್ಶನ್ ಸೂಚನೆ ನೀಡ್ತಿದ್ದಂತೆ ಸಹಚರರನ್ನು ರೆಡಿ ಮಾಡಿದ್ದ ರಘು, ಜೂನ್.8ರಂದು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡ್ಕೊಂಡು ಬಂದಿದ್ದ. ಅದರಂತೆ ಗ್ಯಾಂಗ್ ರೇಣುಕಾ ಕಿಡ್ನ್ಯಾಪ್ ಮಾಡಿ ಬೆಂಗಳೂರು ಕಡೆಗೆ ಹೊರಟಿತ್ತು. ಈ ವೇಳೆ ಪವನ್​, ರಾಘವೇಂದ್ರಗೆ ಪಟ್ಟಣಗೆರೆಯ ಶೆಡ್​ ಲೊಕೇಶನ್ ಕಳಿಸಿದ್ದ. ಅದರಂತೆ ರಘು ಟೀಂ ಪಟ್ಟಣಗೆರೆ ಶೆಡ್​ಗೆ ರೇಣುಕಾಸ್ವಾಮಿಯನ್ನ ಕರೆತಂದಿದ್ದರು. ಬಳಿಕ ಪವನ್​ ರೇಣುಕಾ ಕರೆತಂದಿರೋ ಬಗ್ಗೆ ದರ್ಶನ್​ಗೆ ತಿಳಿಸಿದ್ದಾನೆ. ಕೂಡಲೇ ದರ್ಶನ್​, ಪವಿತ್ರಾಳನ್ನ ಕರೆದುಕೊಂಡು ಶೆಡ್​ಗೆ ತೆರಳಿದ್ದ. ಎಲ್ಲಾ ಪಕ್ಕಾ ಪ್ಲಾನ್​ ಪ್ರಕಾರ ಮಾಡಿದ್ದಾರೆ. ತನ್ನ ಜೊತೆ ಏನಾಗ್ತಿದೆ? ಎಲ್ಲಿಗೆ ಬಂದೆ ಎಂದು ತಿಳಿದುಕೊಳ್ಳುವ ಹೊತ್ತಲ್ಲೇ ರೇಣುಕಾಸ್ವಾಮಿ ಮೇಲೆ ಡಿವಿಲ್​ ಅಟ್ಯಾಕ್​ ನಡೆದು ಹೋಗಿತ್ತು. ಕಾಲು ಹಿಡಿದ್ರೂ, ಬಿಡದೇ ಕೈ ಹಿಡಿದು ಸುಮ್ಮನಾಗದೇ ಅಟ್ಟಹಾಸ ಮೆರೆದಿದ್ರು. ಆ ಮೇಲೆ ಅಲ್ಲಿ ನಡೆದಿದ್ದು, ಯಾರು ಊಹಿಸದಂತ ಘನಘೋರ ಹತ್ಯೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಗ್ಯಾಂಗ್​ಗೆ ರೇಣುಕಾಸ್ವಾಮಿ ಸಿಕ್ಕಿಬಿದ್ದಿದ್ದು ಹೇಗೆ? ಪವಿತ್ರಾ ಗೌಡಗೆ ಏನ್​ ಮೆಸೇಜ್​ ಕಳಿಸಿದ್ರು?

https://newsfirstlive.com/wp-content/uploads/2024/06/dboss23.jpg

Load More