ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದ A1 ಪವಿತ್ರಾ.. ಮತ್ತೊಂದು ಮಹತ್ವದ ಸಾಕ್ಷ್ಯ ಸಂಗ್ರಹ!

author-image
Veena Gangani
Updated On
ಕಾಟೇರನಿಗೆ ‘ಪವಿತ್ರಾ’ ಕಂಟಕ ಇದೇ ಮೊದಲಲ್ಲ.. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ? ಅಸಲಿ ಕಾರಣವೇನು?
Advertisment
  • ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ಮೊದಲ ಆರೋಪಿ ಪವಿತ್ರಾ
  • A1 ಆರೋಪಿ ಪವಿತ್ರಾ ಗೌಡ ರಿಮ್ಯಾಂಡ್​ ಅರ್ಜಿಯಲ್ಲಿ ಸ್ಫೋಟಕ ಅಂಶ ಬಹಿರಂಗ
  • ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ರೇಣುಕಾಸ್ವಾಮಿ ಕೊಲೆ ಕೇಸ್​

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಬ್ಬೊಬ್ಬ ಆರೋಪಿಯದ್ದು ಒಂದೊಂದು ಪಾತ್ರ. ಆದ್ರೆ ಇಷ್ಟೆಲ್ಲ ರಾದ್ಧಾಂತಕ್ಕೆ ಪ್ರಮುಖ ಕಾರಣವೇ ಪವಿತ್ರಾ ಗೌಡ ಅನ್ನೋದು ಪೊಲೀಸರ ರಿಮ್ಯಾಂಡ್​ ಅರ್ಜಿಯಲ್ಲಿ ಬಯಲಾಗಿದೆ. ಕಿಡ್ನಾಪ್‌, ಹತ್ಯೆ ಮತ್ತು ಒಳಸಂಚಿನಲ್ಲಿ ಭಾಗಿಯಾಗಿರೋದನ್ನು ಉಲ್ಲೇಖಿಸಲಾಗಿದ್ದು, ಸದ್ಯ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿದ್ದಾಳೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾಗೌಡ ಸೂತ್ರಧಾರಿಯಾದ್ರೆ, ದರ್ಶನ್​ ಪಾತ್ರಧಾರಿ.

publive-image

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ತಿದೆ. ಈಗಾಗಲೇ ಪೊಲೀಸರ ವಿಚಾರಣೆಯಲ್ಲಿ ಎ1 ಆಗಿರುವ ನಟಿ ಪವಿತ್ರಾ ಗೌಡನೇ ಇಡೀ ಪ್ರಕರಣದ ರೂವಾರಿ ಅನ್ನೋದು ತನಿಖೆಯಲ್ಲಿ ಧೃಡ ಪಟ್ಟಿದೆ. ಸದ್ಯ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇದರ ನಡುವೆ ಪೊಲೀಸರು ಕೋರ್ಟ್​ಗೆ ಸಲ್ಲಿಸಿದ ಹೊಸ ರಿಮ್ಯಾಂಡ್​ ಅರ್ಜಿಯಲ್ಲಿ ಪವಿತ್ರಾ ಗೌಡಳ ಸಂಚು ಮತ್ತು ಪಾತ್ರದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

publive-image

ಇದನ್ನೂ ಓದಿ:HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ಅಶ್ಲೀಲ ಮೆಸೇಜ್​ ಕಳಿಸಿದ್ದ ರೇಣುಕಾಸ್ವಾಮಿ ಹತ್ಯೆಗೆ A1 ಪವಿತ್ರಾ ಗೌಡಳೇ ಕಾರಣಿಕರ್ತೆ ಅನ್ನೋದು ಪೊಲೀಸ್​ ತನಿಖೆಯಲ್ಲಿ ಧೃಡಪಟ್ಟಿದೆ. ಪವಿತ್ರಾ ಗೌಡಳ ಪ್ರಚೋದನೆಯಿಂದಲೇ ಹತ್ಯೆಗೆ ಒಳಸಂಚು ರೂಪಿಸಲಾಗಿದ್ದು, ಪವಿತ್ರಾ ನೇರವಾಗಿ ಭಾಗಿಯಾಗಿರೋದು ದೃಢಪಟ್ಟಿದೆ. ಹಾಗೂ ಪವಿತ್ರಾ ಗೌಡ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಶೆಡ್​ನಲ್ಲಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದು ತನಿಖೆ ವೇಳೆ ತಿಳಿದು ಬಂದಿದ್ದು, ಸದ್ಯ ಪವಿತ್ರಾ ಗೌಡ ಮನೆಯಲ್ಲಿದ್ದ ಆಕೆಯ ಚಪ್ಪಲಿಯನ್ನು ವಶಕ್ಕೆ ಪಡೆದಿದ್ದಾರೆ.

publive-image

ಇನ್ನು, ಕೃತ್ಯದ ವೇಳೆ ಪವಿತ್ರಾಗೌಡ ಧರಿಸಿದ್ದ ಬಟ್ಟೆಯ್ನು ಸಹ ಪೊಲೀಸರ ದಸ್ತಗಿರಿ ಮಾಡಿದ್ದಾರೆ. ಕೃತ್ಯದಲ್ಲಿ ನೇರ ಭಾಗಿಯಾಗಿ ಈ ನೆಲದ ಕಾನೂನಿಗೆ ಗೌರವ ಇಲ್ಲದಂತೆ ನಡೆದುಕೊಂಡಿರೋದಾಗಿ ರಿಮ್ಯಾಂಡ್​ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 1ನೇ ಆರೋಪಿಯಾಗಿರುವ ಪವಿತ್ರಾ ಗೌಡ ಹತ್ಯೆ, ಒಳಸಂಚು, ಸಾಕ್ಷ್ಯನಾಶದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಧೃಢಪಟ್ಟಿದೆ. ಈ ಕಾರಣದಿಂದಾಗಿ, ಪವಿತ್ರಾ ಗೌಡಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕಾನೂನು ಕುಣಿಕೆ ಬಿಗಿಯಾಗಿದೆ.

ದರ್ಶನ್ ಮೇಲಿನ ಆರೋಪಗಳು

  1. ಆರೋಪ 01 - ಹಣಬಲ, ಅಭಿಮಾನಿಗಳನ್ನ ಬಳಸಿ ಕಾನೂನು ದುರುಪಯೋಗ
  2. ಆರೋಪ 02 - ದರ್ಶನ್‌ ಸೂಚನೆ ಮೇರೆಗೆ ರೇಣುಕಾಸ್ವಾಮಿ ಸ್ವಾಮಿಯ ಕಿಡ್ನಾಪ್
  3. ಆರೋಪ 03 - ಇತರೆ ಆರೋಪಿಗಳೊಂದಿಗೆ ಸೇರಿ ರೇಣುಕಾ ಮೇಲೆ ಹಲ್ಲೆ, ಕೊಲೆ
  4. ಆರೋಪ 04 - ಕ್ರಿಮಿನಲ್​ ಹಿನ್ನಲೆ ಇದ್ದು, ಕೇಸ್​ನಿಂದ ನುಣಿಚಿಕೊಳ್ಳಲು ಯತ್ನ
  5. ಆರೋಪ 05 - ಕೃತ್ಯದ ನಂತರ ಹಣ, ಪ್ರಭಾವ ಬಳಸಿ ಸಾಕ್ಷ್ಯ ನಾಶಕ್ಕೂ ಯತ್ನ
  6. ಆರೋಪ 06- ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನ ನಾಶ ಪಡಿಸಲು ಯತ್ನ
  7. ಆರೋಪ 07 - ತನ್ನ ಕೃತ್ಯ ಮರೆಮಾಚಲು ಇತರೆ ಆರೋಪಿಗಳಿಗೆ ಹಣದ ಆಮಿಷ
  8. ಆರೋಪ 08 - ಅಪಾರ ಅಭಿಮಾನಿ ಬಳಗದ ಮೂಲಕ ತನಿಖೆಗೆ ನಿರಂತರ ಅಡ್ಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment