ಕಾಲೇಜಿಗೆ ಬಂದು 3ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ; ಕಾರಣವೇನು?

author-image
admin
Updated On
ಕಾಲೇಜಿಗೆ ಬಂದು 3ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ; ಕಾರಣವೇನು?
Advertisment
  • ಕಾಲೇಜಿನ 3ನೇ ಮಹಡಿಯಿಂದ ಕೆಳಗೆ ಹಾರಿದ ವಿದ್ಯಾರ್ಥಿನಿ
  • ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಪ್ರಥಮ BSC ವ್ಯಾಸಂಗ
  • ಆಸ್ಪತ್ರೆಗೆ ಆಗಮಿಸಿದ ವಿದ್ಯಾರ್ಥಿನಿ ಪ್ರೇಮಾ ಪೋಷಕರು ಹೇಳಿದ್ದೇನು?

ಚಿತ್ರದುರ್ಗ: ಇಂದು ಬೆಳಗ್ಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿ ಇದ್ದಕ್ಕಿದ್ದಂತೆ ಕಟ್ಟಡದ ಮೇಲಿಂದ ಜಿಗಿದ ಘಟನೆ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ನಡೆದಿದೆ. 3ನೇ ಮಹಡಿಯಿಂದ ಕೆಳಗೆ ಹಾರಿದ ವಿದ್ಯಾರ್ಥಿನಿಯನ್ನು 18 ವರ್ಷದ ಪ್ರೇಮಾ ಎಂದು ಗುರುತಿಸಲಾಗಿದೆ.

ಪ್ರೇಮಾ, ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಪ್ರಥಮ BSC ಓದುತ್ತಿದ್ದಳು. ಇಂದು ಕಾಲೇಜಿಗೆ ಬಂದ ಪ್ರೇಮಾ ಕಾಲೇಜು ಕಟ್ಟಡದ ಮೇಲಿಂದ ಜಿಗಿದು ತೀವ್ರ ಗಾಯಗೊಂಡಿದ್ದಳು. ಕೂಡಲೇ ಕಾಲೇಜಿನವರು ಪ್ರೇಮಾಳನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಿದರು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರೇಮಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಪ್ರೇಮಾ ಅವರು ಬೆಳಗ್ಗೆ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದಿದ್ದಾಳೆ ಎಂದು ಕಾಲೇಜಿನವರು ತಿಳಿಸಿದ್ದಾರೆ. ಕಾಲೇಜಿಗೆ ಬಡಾವಣೆ ಪೊಲೀಸ್ ಠಾಣೆ PSI ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Big breaking: ಬಿಗ್​ಬಾಸ್ ಶೋಗೆ ಸಂಕಷ್ಟ; ತುರ್ತು ನೋಟಿಸ್​ ಕೊಟ್ಟ ಕೋರ್ಟ್​ 

ವಿದ್ಯಾರ್ಥಿನಿ ಸಾವಿಗೆ ಕಾರಣವೇನು?
ಕಾಲೇಜು ಕಟ್ಟಡದ ಮೇಲಿಂದ ಬಿದ್ದ ವಿದ್ಯಾರ್ಥಿನಿ ಸಾವಿನ ಸುದ್ದಿಯನ್ನ ಕಾಲೇಜು ಆಡಳಿತ ಮಂಡಳಿ ಪೋಷಕರಿಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಪ್ರೇಮಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯಾರ್ಥಿನಿಗೆ ಪ್ರೀತಿ‌ ಮಾಡುವಂತೆ ಓರ್ವ ಯುವಕ ಪೀಡುಸುತ್ತಿದ್ದನಂತೆ. ವಿದ್ಯಾರ್ಥಿನಿಗೆ ಪ್ರತಿನಿತ್ಯವು ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದನಂತೆ. ಯುವಕನ ಟಾರ್ಚರ್‌ಗೆ ಬೇಸತ್ತು ಪ್ರೇಮಾ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಕಾಲೇಜು ವಿದ್ಯಾರ್ಥಿನಿಗೆ ಟಾರ್ಚರ್ ನೀಡಿದ ತರುಣ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಬಡಾವಣೆ ಪೊಲೀಸರಿಂದ ಈ ಕುರಿತು ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment