newsfirstkannada.com

ಕನಕಾಂಬರಕ್ಕೆ ಬಣ್ಣ, ಬಣ್ಣದ ಸೀರೆಗಳಿಂದ ಹೊದಿಕೆ.. ರಾಜ್ಯದೆಲ್ಲೆಡೆ ಬರಗಾಲ ಇದ್ರೂ ಈ ರೈತ ಮಾತ್ರ ಸೋಲಲಿಲ್ಲ

Share :

Published March 16, 2024 at 6:51am

Update March 16, 2024 at 6:52am

    ಬೇಸಿಗೆಯಲ್ಲಿ ರೈತ ಹೀಗೆ ಮಾಡಿರುವುದೇ ಜನರಲ್ಲಿ ಕುತೂಹಲ

    ಒಂದು ರೀತಿ ಇಡೀ ಆಕಾಶಕ್ಕೆ ಸೀರೆಗಳಿಂದ ಹೊದಿಸಿದಂತೆ ಇದೆ

    ಬೆಳೆಗೆ ನೆರಳು ಮಾಡೋದು ಅಂದ್ರೆ ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ

ದಿನೇ ದಿನೇ ಬೇಸಿಗೆ ಧಗೆ ಹೆಚ್ಚಾಗ್ತಿದ್ದು, ಸೂರ್ಯನ ಕಿರಣ ನೆತ್ತಿ ಸುಡ್ತಿದೆ. ರಾಜ್ಯದೆಲ್ಲೆಡೆ ಬರಗಾಲದ ಪರಿಸ್ಥಿತಿ ಬಂದಿದ್ದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ರೈತರು ಬರದ ಪರಿಸ್ಥಿತಿಯಲ್ಲೂ ತಮ್ಮ ಬೆಳೆ ಉಳಿಸಿಕೊಳ್ಳೋಕೆ ಹಲವು ತಂತ್ರ ಮಾಡ್ತಿದ್ದಾರೆ.

ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದ ಜಮೀನಿನಲ್ಲಿ ಕಪ್ಪು, ಬಿಳಿ, ನೀಲಿ, ಹಸಿರು, ಕೆಂಪು ಹೀಗೆ ವಿವಿಧ ಬಣ್ಣದ ಸೀರೆಗಳಿಂದ ಹೊಲೆದ ಕೌದಿಯಂತೆ ಕಾಣುವ ಹೊದಿಕೆ ಮಾಡಲಾಗಿದೆ. ಇದು ಒಂದು ರೀತಿ ಆಕಾಶಕ್ಕೆ ಸೀರೆಗಳಿಂದ ಚಪ್ಪರ ಹಾಕಿದಂತೆ ಕಾಣುತ್ತಿದೆ. ಸದ್ಯ ಇದರ ಕಥೆ ಏನು. ಬೇಸಿಗೆಯಲ್ಲಿ ರೈತ ಹೀಗೆ ಮಾಡಿರೋದು ಏಕೆ ಎಂಬುದು ಇಲ್ಲಿ ಕೊಡಲಾಗಿದೆ.

ಹೂಗಳ ಬಣ್ಣ ಮಾಸಿ ಮಾರ್ಕೆಟ್​ನಲ್ಲಿ ಒಳ್ಳೆಯ ಬೆಲೆ ಸಿಗ್ತಾಯಿಲ್ಲ

ಈತ ಚಿತ್ರದುರ್ಗದ ಮದಕರಿಪುರ ಗ್ರಾಮದ ರೈತ ಶ್ರೀಧರ್. ತನ್ನ 10 ಗುಂಟೆ ಜಮೀನಲ್ಲಿ ಕನಕಾಂಬರ ಹೂ ಬೆಳೆ ಬೆಳೆದಿದ್ದಾರೆ. ಆದ್ರೆ ರಾಜ್ಯದಲ್ಲಿ ಬರದ ಸಮಸ್ಯೆ. ಅದರ ನಡುವೆ ಬಿರು ಬಿಸಿಲು ಬೇರೆ. ಜಮೀನಲ್ಲಿ ಬೆಳೆದ ಹೂಗಳ ಬಣ್ಣ ಮಾಸಿ ಮಾರ್ಕೆಟ್​ನಲ್ಲಿ ಒಳ್ಳೆಯ ಬೆಲೆ ಸಿಗ್ತಾಯಿಲ್ಲ. ಹಾಗಾಗಿ ರೈತ ಶ್ರೀಧರ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ತಮ್ಮ ಮನೆ ಸೇರಿದಂತೆ ಅಕ್ಕಪಕ್ಕದ ಮನೆಯಿಂದ ಹಳೆಯ ಸೀರೆಗಳನ್ನು ಖರೀದಿಸಿ ಕನಕಾಂಬರ ಬೆಳೆಗೆ ಚಪ್ಪರದಂತೆ ಕಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆ‌ ಮೊದಲೇ ಬರದ ನಾಡು. ಇಲ್ಲಿ ಬೆಳೆ ಬೆಳೆಯುವುದೇ ಸವಾಲಿನ ಕೆಲಸ. ಅಂಥದ್ದರಲ್ಲಿ ಬೆಳೆಗಳಿಗೆ ನೆರಳು ಮಾಡೋದು ಅಂದ್ರೆ ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ. ಹಾಗಾಗಿ ರೈತ ತನ್ನ ಬೆಳೆ ಉಳಿಸಿಕೊಂಡು ತನ್ನ ಜೀವನ ನಡೆಸಿಕೊಂಡು ಹೋಗೋಕೆ ತಾನೇ ಹೊಸ ಮಾರ್ಗ ಹುಡುಕಿದ್ದಾರೆ. ಆದ್ರೆ, ಇಂಥ ಕಠಿಣ ಸಂದರ್ಭದಲ್ಲಿ ಸರ್ಕಾರ, ಸಂಬಂಧಪಟ್ಟ ಇಲಾಖೆ ರೈತನ ನೆರವಿಗೆ ಬರಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ.

‘ನೀರು ಕಡಿಮೆ, ತೊಂದರೆ’

ನಮ್ಮ ಹೂವಿಗೆ ರೈತ ಸರ್ಕಾರದಿಂದ ಮೆಸ್ ಕೊಡೊಕೆ ಆಗುತ್ತಾ?. ಬೇಸಿಗೆ ಇರುವುದರಿಂದ ಹೂವುಗಳೆಲ್ಲ ಬಾಡಿ ಹೋಗುತ್ತೆ. ನಮಗೆ ನೀರು ಕಡಿಮೆ, ಬಹಳ ತೊಂದರೆ ಇದೆ. ನಾವೆ ಸೀರೆಗಳನ್ನ ತಂದು ಅವುಗಳನ್ನ ಚಪ್ಪರದಂತೆ ಕಟ್ಟಿ, ಬೆಳೆ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದೇವೆ. ಸೀರೆಗಾಗಿಯೇ ಬಹಳ ಬಂಡವಾಳ ಹಾಕಿದ್ದೇವೆ. ನಾವು ಹೋಗಿ ಮೆಸ್ ಕೇಳಿದರೆ ಸಬ್ಸಿಡಿ ಕೊಡಲ್ಲ. ರೈತರಿಗೆ ಯಾವುದೇ ಅನುಕೂಲ ಇಲ್ಲ.

ಶ್ರೀಧರ್​, ಕನಕಾಂಬರ ಬೆಳೆದ ರೈತ

ತನ್ನ ಬೆಳೆ ಉಳಿಸಿಕೊಳ್ಳೋಕೆ ರೈತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾನೆ. ಆದ್ರೆ ಇಂಥ ರೈತರ ನೆರವಿಗೆ ಸರ್ಕಾರ ಸಂಬಂಧಪಟ್ಟ ಇಲಾಖೆಗಳು ಬಾರದಿದೋದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನಕಾಂಬರಕ್ಕೆ ಬಣ್ಣ, ಬಣ್ಣದ ಸೀರೆಗಳಿಂದ ಹೊದಿಕೆ.. ರಾಜ್ಯದೆಲ್ಲೆಡೆ ಬರಗಾಲ ಇದ್ರೂ ಈ ರೈತ ಮಾತ್ರ ಸೋಲಲಿಲ್ಲ

https://newsfirstlive.com/wp-content/uploads/2024/03/CTR_KANAKAMBARA.jpg

Load More