VIDEO: ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಹರಿದ ಲಾರಿ.. ಕ್ಷಣಾರ್ಧದಲ್ಲೇ ಸಾವು

author-image
AS Harshith
Updated On
VIDEO: ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಹರಿದ ಲಾರಿ.. ಕ್ಷಣಾರ್ಧದಲ್ಲೇ ಸಾವು
Advertisment
  • ವೇಗವಾಗಿ ಬಂದ ಲಾರಿ.. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ
  • ಅಪಘಾತದ ಭೀಕರ ದೃಶ್ಯ CCTVಯಲ್ಲಿ ಸೆರೆ.. ಕ್ಷಣಾರ್ಧದಲ್ಲೇ ವ್ಯಕ್ತಿ ಸಾವು
  • ನಿಧಾನವಾಗಿ ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ.. ಅಷ್ಟರಲ್ಲಿ ಜೀವ ಬಳಿ ಪಡೆದ ಲಾರಿ

ಚಿತ್ರದುರ್ಗ: ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಲಾರಿ ಹರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಗೇಟ್ ಬಳಿ ನಡೆದಿದೆ. ಪರಿಣಾಮ ವ್ಯಕ್ತಿ ಕ್ಷಣಾರ್ಧದಲ್ಲೇ ಸಾವನ್ನಪ್ಪಿದ್ದಾನೆ.

ಮಲ್ಲಿಕಾರ್ಜುನ್ (52) ಸಾವನ್ನಪ್ಪಿದ ವ್ಯಕ್ತಿ. ಈತ ತಿರುಮಲಾಪುರ ಗ್ರಾಮದ ನಿವಾಸಿಯಾಗಿದ್ದು, ರಸ್ತೆ ದಾಟುವ ವೇಳೆ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ವಯನಾಡು ದುರಂತ; ಅನಾಥ ನವಜಾತ ಶಿಶುಗಳಿಗೆ ಎದೆಹಾಲು ನೀಡಲು ಮುಂದೆ ಬಂದ ತಾಯಿ!


">August 3, 2024

ಅಪಘಾತದ ಭೀಕರ ದೃಶ್ಯ CCTV ಯಲ್ಲಿ ಸೆರೆಯಾಗಿದೆ. ಲಾರಿ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಲಾರಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ವಯನಾಡು ಭೂಕುಸಿತದಲ್ಲಿ ಕಂದಮ್ಮ ಅನಾಥ.. ಮಗುವನ್ನು ದತ್ತು ಸ್ವೀಕರಿಸಲು ಮುಂದಾದ ದಂಪತಿ

ಸ್ಥಳಕ್ಕೆ ಚಿತ್ರಹಳ್ಳಿ PSI ಕಾಂತರಾಜ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಿತ್ರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment