‘ವ್ಯಕ್ತಿತ್ವ ನೋಡದೆ ಹಾಳು ಮಾಡೋದು ದೊಡ್ಡ ತಪ್ಪು’ -ಬಿಗ್​ಬಾಸ್​ನಲ್ಲಿ ಅವಕಾಶ ಸಿಗದಿದ್ಕೆ ಚಿತ್ರಾಲ್​ ಆಕ್ರೋಶ

author-image
AS Harshith
Updated On
‘ವ್ಯಕ್ತಿತ್ವ ನೋಡದೆ ಹಾಳು ಮಾಡೋದು ದೊಡ್ಡ ತಪ್ಪು’ -ಬಿಗ್​ಬಾಸ್​ನಲ್ಲಿ ಅವಕಾಶ ಸಿಗದಿದ್ಕೆ ಚಿತ್ರಾಲ್​ ಆಕ್ರೋಶ
Advertisment
  • ಬಿಗ್​ ಬಾಸ್​ ಸೀಸನ್​ 9ರಲ್ಲಿ ಚಾನೆಲ್​ನಿಂದ ಆಹ್ವಾನ ಬಂದಿತ್ತು
  • ಕೇಳಿದಾಗ ನೆಕ್ಸ್ಟ್​​ ಸೀಸನ್​ಗೆ ಹೋಲ್ಡ್​​ ಮಾಡಿದ್ದಾಗಿ ಹೇಳಿದ್ದರು
  • ಬೆಳಗ್ಗಿನ ಜಾವ 4 ಗಂಟೆವರೆಗೆ ವಿಟಿ ಶೂಟ್​ ಮಾಡಿದ್ದಾರೆ

ಬಿಗ್​ ಬಾಸ್​ ಸೀಸನ್​ 10 ಕುರಿತಾಗಿ ಸೀರಿಯಲ್​ ನಟಿ ಚಿತ್ರಾಲ್​ ರಂಗಸ್ವಾಮಿ ಮಾತನಾಡಿದ್ದಾರೆ. ದೊಡ್ಮನೆಗೆ ಹೋಗುವ ಕುತೂಹಲತೆಯಲ್ಲಿದ್ದ ನಟಿ ವೇದಿಕೆಯಿಂದಲೇ ಕಡಿಮೆ ಓಟ್​ನಿಂದ ಹೊರನಡೆದಿದ್ದಾರೆ. ಈ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ.

ಬಿಗ್​ ಬಾಸ್​ ಸೀಸನ್​ 9ರಲ್ಲಿ ಚಾನೆಲ್​ನಿಂದ ಆಹ್ವಾನ ಬಂದಿತ್ತು. ಪವರ್​ ಘಳಿಗೆಯಲ್ಲಿ ಪವರ್​ ಕೊಡೋಣ ಎಂದು ಹೇಳಿದ್ದರು. ಆ ವಾರ ಎರಡು ರೌಂಡ್​ ಆಡೀಷನ್​ ನಡೆದಿತ್ತು. ಮುಂಬರುವ ಸೀಸನ್​ಗಾಗಿ ನನ್ನ ಹೋಲ್ಡ್​ ಮಾಡಿದ್ದರು. ಈ ಸೀಸನ್​ಗೂ ಕೇಳಿದಾಗ ನೆಕ್ಸ್ಟ್​​ ಸೀಸನ್​ಗೆ ಹೋಲ್ಡ್​​ ಮಾಡಿದ್ದಾಗಿ ಹೇಳಿದ್ದರು. ಇವೆಲ್ಲ ವಿಚಾರವನ್ನು ತಲೆಯಿಂದ ತೆಗೆದುಹಾಕಿ ನನ್ನ ಪಾಡಿಗೆ ಟ್ರಿಪ್​ ಹೋಗಿದ್ದೆ. 6ನೇ ತಾರೀಖು ಸಂಜೆ ವಾಟ್ಸ್​ಆ್ಯಪ್​ಗೊಂದು ಮೆಸೇಜ್​ ಬರುತ್ತೆ. ಆ ನಂಬರ್​ಗೆ ಕರೆ ಮಾಡಿ ಎಂದು ಹೇಳುತ್ತಾರೆ. ಕರೆ ಮಾಡಿದಾಗ ಕೊನೆಯ ಸ್ಪರ್ಧಿಗಾಗಿ ಹುಡುಕಾಡುತ್ತಿದ್ದೇವೆ. ಆದರೆ ಒಂದು ಟ್ವಿಸ್ಟ್​ ಇದೆ ಓಟಿಂಗ್​ ಇರುತ್ತೆ ಎಂದು ಹೇಳಿದ್ದರು.

publive-image

ಆಡಿಯನ್ಸ್​ ಓಟಿಂಗ್​ಗೂ ನಾನು ಒಪ್ಪಿಕೊಂಡೆ. ಯಾಕಂದ್ರೆ 200-300 ಜನ ರಿಯಲ್​ ಆಡಿಯನ್ಸ್​ ಕೂತುಕೊಂಡಿರುತ್ತಾರೆ. ಎಲ್ಲರಿಗೂ ನನ್ನ ಪರಿಚಯವಿರುತ್ತೆ. ಖಂಡಿತಾ ನನಗೆ ಓಟ್​ ಬರುತ್ತೆ ಅನ್ನೋ ಕಾನ್ಫಿಡೆನ್ಸ್​. ಆದರೆ ಅಲ್ಲಿ ಹೋದ ಮೇಲೆ ನನಗೆ ತಿಳಿಯಿತು 20-25 ಜನ ಯಾರೋ ಕುಳಿತುಕೊಂಡಿದ್ದಾರೆ. ಹಾಗೆ ಮಾಡುವ ಬದಲು ಜ್ಯೂಡಿಸ್​ ಇಡಬೇಕಾಗಿತ್ತು. ಮೀಡಿಯಾದಿಂದ, ಫಿಟ್ನೆಸ್​ನಿಂದ ಒಬ್ಬೊಬ್ಬರು ಇರಬೇಕಾಗಿತ್ತು. ಆವಾಗ ಅವ್ರು ರಿಜೆಕ್ಟ್​​ ಮಾಡಿದ್ರೆ ಅರ್ಥ ಇರ್ತಾ ಇತ್ತು ಎಂದು ನಟಿ ಚಿತ್ರಾಲ್​ ರಂಗಸ್ವಾಮಿ ಹೇಳಿದ್ದಾರೆ.

6ನೇ ತಾರೀಖು ರಾತ್ರಿ 12:30ಕ್ಕೆ ಕಲರ್ಸ್​ ಕನ್ನಡ ಟೀಂ ಬಂದಿದ್ದಾರೆ. ಬೆಳಗ್ಗಿನ ಜಾವ 4 ಗಂಟೆವರೆಗೆ ವಿಟಿ ಶೂಟ್​ ಮಾಡಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ನನಗೆ ಜ್ವರ ಬಂತು. ಅದಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡೆ. ಅದಕ್ಕೆ 13 ಸಾವಿರ ಖರ್ಚು ಆಯ್ತು. ಆಮೇಲೆ ಶಾಪಿಂಗ್​ ಮತ್ತು ಪೆಟ್​ ನೋಡಿಕೊಳ್ಳಲು, ಇನ್​ಸ್ಟಾ ಖಾತೆ ನೋಡಲು ಮತ್ತು 4 ವಾರಕ್ಕಾಗುವ ಲಗೇಜ್​ ಪ್ಯಾಕ್​ ಮಾಡಿದ್ದೆ. ಆಮೇಲೆ 8:30ಕ್ಕೆ ಮನೆಗೆ ಬಂದು ಕರ್ಕೊಂಡು ಹೋಗುತ್ತಾರೆ. ಕಾಸ್ಟ್ಯೂಮ್​ ಯಾವುದು ಎಂದು ಕೇಳಿದಾಗ ನಿಮ್ಮದೇ ಯಾವುದಾದರು ಇದ್ರೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಆವಾಗ ನನಗೆ ಡೌಟ್​ ಬರುತ್ತೆ ಎಂದರು.


">October 16, 2023

ಹೀಗೆ ಮಾತನಾಡುತ್ತಾ ಬೇಸರ ವ್ಯಕ್ತ ಪಡಿಸಿದ ನಟಿ ಚಿತ್ರಾಲ್​, ವ್ಯಕ್ತಿತ್ವದ ಚೇಂಜ್​ ಮಾಡಿಕೊಳ್ಳಲು ಇದೊಂದು ವೇದಿಕೆ ಆಗಬೇಕಿತ್ತು ಎಂದು ಸುದೀಪ್​ ಸರ್​ ಯಾವುದೋ ಒಂದು ವಿಡಿಯೋದಲ್ಲಿ ಹೇಳಿದ್ದಾರೆ. ತಪ್ಪು ಮಾಡಿದವರಿಗೆ ಅವಕಾಶ ಕೊಡಬೇಕು ಅಂತ. ಆದ್ರೆ ನೀವು ವ್ಯಕ್ತಿತ್ವ ನೋಡದೇನೆ ನಂದು ವ್ಯಕ್ತಿತ್ವನ ಹಾಳು ಮಾಡೋದು ಇದೆ ಅಲ್ವ ಅದು ತುಂಬಾನೆ ತಪ್ಪಾಗುತ್ತೆ. ಎಷ್ಟೇ ದೊಡ್ಡ ಟೀಮ್ ಆಗಿರಲಿ ಮನುಷತ್ವದ ರೀತಿಯಲ್ಲಿ ಯೋಚನೆ ಮಾಡಬೇಕಾಗುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment