ಯಾವ ಕಾರ್ಯಕ್ರಮಗಳಿಗೆ ಯಾವ ರೀತಿಯ ಶೂ ಹಾಕಿಕೊಂಡು ಹೋಗಬೇಕು? ಇಲ್ಲಿದೆ ನಿಮಗೆ ಇಷ್ಟವಾಗುವ ಟಿಪ್ಸ್‌!

author-image
Gopal Kulkarni
Updated On
ಯಾವ ಕಾರ್ಯಕ್ರಮಗಳಿಗೆ ಯಾವ ರೀತಿಯ ಶೂ ಹಾಕಿಕೊಂಡು ಹೋಗಬೇಕು? ಇಲ್ಲಿದೆ ನಿಮಗೆ ಇಷ್ಟವಾಗುವ ಟಿಪ್ಸ್‌!
Advertisment
  • ನಿಮಗೆ ಶೂಗಳ ಆಯ್ಕೆ ಮಾಡುವುದರಲ್ಲಿ ಕಾಡುತ್ತಿದೆಯಾ ಗೊಂದಲ?
  • ಯಾವ ವಿನ್ಯಾಸ, ಯಾವ ಕಲರ್ ಶೂ, ಯಾವ ಸ್ಟೈಲ್​ನಲ್ಲಿದ್ರೆ ಚೆಂದ?
  • ನೀವು ಹೋಗುವ ಕಾರ್ಯಕ್ರಮದ ಮೇಲೆ ನಿಮ್ಮ ಶೂ ಆಯ್ಕೆ ಇರಲಿ

ಸರಿಯಾದ ಬಟ್ಟೆಗೆ ಸರಿಯಾದ ಬೂಟುಗಳನ್ನು ಆಯ್ಕೆ ಮಾಡುವುದೇ ಒಂದು ಚಾಲೆಂಜ್​. ಅದರಲ್ಲೂ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗಬೇಕಾದಾಗ ಮನಸ್ಸು ಗೊಂದಲಕ್ಕೆ ಬೀಳುತ್ತದೆ. ಯಾವ ವಿನ್ಯಾಸ, ಯಾವ ಕಲರ್ ಶೂ, ಯಾವ ಸ್ಟೈಲ್​ನಲ್ಲಿದ್ರೆ ಚೆಂದ ಎಂಬ ಗೊಂದಲಗಳು ಮೂಡುವುದು ಸಹಜ. ಹೀಗಾಗಿ ಇಲ್ಲಿ ನಿಮಗೆ ಕೆಲವು ಶೂಗಳ ಪಟ್ಟಿಯಿವೆ. ಯಾವ ಸಂದರ್ಭಕ್ಕೆ ಯಾವ ಶೂಗಳನ್ನು ಹಾಕಿಕೊಂಡು ಹೋಗುವುದು ಚೆನ್ನಾಗಿ ಕಾಣುತ್ತೆ ಅನ್ನೋದರ ವಿವರವೂ ಇದೆ.

ಇದನ್ನೂ ಓದಿ: ನವರಾತ್ರಿ ಉಪವಾಸ ಮತ್ತು ಗರ್ಭಿಣಿಯರು.. ಪಾಲಿಸಲೇಬೇಕಾದ ಸೂತ್ರಗಳು..! 

publive-image

ಲಿಬರ್ಟಿ ಮೆನ್ ಬ್ಲ್ಯಾಕ್
ಬಿಸಿನೆಸ್ ಮೀಟಿಂಗ್ಸ್, ಮದುವೆ, ಅಫೀಷಿಯಲ್ ಇವೆಂಟ್​ಗಳಿಗೆ ಈ ಒಂದು ಶೂ ಒಳ್ಳೆಯ ಆಯ್ಕೆ ಅತ್ಯುತ್ತಮ ಗುಣಮಟ್ಟದ ಲೆದರ್​ನಿಂದ ಡಿಸೈನ್ ಆಗಿರುವ ಈ ಶೂಸ್ ನಿಮ್ಮ ಫಾರ್ಮಲ್ಸ್​ ಮೇಲೆ ಚೆಂದವಾಗಿ ಕುಳಿತುಕೊಳ್ಳುತ್ತೆ. ಡರ್ಬಿ ಡಿಸೈನ್​ನಲ್ಲಿ ತಯಾರಿಸಲಾಗಿರುವ ಈ ಶೂಸ್​ ನೀವು ಧರಿಸಿ ಹೊರಟರೆ ಅದರ ಖದರೆಽ ಬೇರೆ ಇರುತ್ತೆ.

publive-image

ರೆಡ್​ಟೇಪ್​ ವುಮನ್ ಕಲರ್​ಬ್ಲಾಕ್ಡ್ ಸ್ನೀಕರ್ಸ್​
ಕ್ಯಾಸ್ಯೂವಲ್ ಧಿರಿಸುಗಳಿಗೆ ರೆಡ್​ಟೇಪ್ ವುಮನ್ ಕಲರ್​ಬ್ಲಾಕ್ಡ್ ಸ್ನೀಕರ್ಸ್​ ಹೇಳಿ ಮಾಡಿಸಿದಂತಹ ಶೂಸ್​. ಚಿಕ್ ವೈಟ್ ಮತ್ತು ಬ್ಲ್ಯಾಕ್ ಕಲರ್​ಗಳಲ್ಲಿ ದೊರಕುವ ಈ ಬೂಟುಗಳ ಪ್ಯಾಟರ್ನ್​ಗಳಿಗೆ ಹೊಂದಿಕೊಳ್ಳುವಂತ ಲೇಸ್​ಗಳ ವಿನ್ಯಾಸ ಶೂಗಳ ಗ್ರಿಪ್​ ಇನ್ನಷ್ಟು ಹೆಚ್ಚಿಸುತ್ತದೆ. ಈ ಬೂಟುಗಳು ನಿತ್ಯ ಬಳಕೆಗೆ ಅತ್ಯುತ್ತಮ.

publive-image

ಶೂಟೊಪಿಯಾ ಗರ್ಲ್ಸ್ ಪ್ರಿಂಟೆಡ್​ ಸ್ನೀಕರ್ಸ್
ಹೆಣ್ಣು ಮಕ್ಕಳಿಗಾಗಿಯೇ ಡಿಸೈನ್ ಮಾಡಲಾಗಿರುವ ಶೂಗಳಿವು ತಿಳಿ ಗುಲಾಬಿ ಹಾಗೂ ಬಿಳಿ ಬಣ್ಣದಲ್ಲಿ ಸಿಗುವ ಈ ಶೂಗಳು ತುಂಬಾ ಸಿಂಪಲ್ ಮತ್ತು ಸರಳವಾಗಿ ಧರಿಸಬಹುದಾದಂತವು. ಕ್ಯೂಷನ್ ಫುಟ್​ಬೆಡ್​ಗಳು ಇರುವುದರಿಂದ ನೀವು ಯಾವುದೇ ಕಿರಿಕಿರಿಯಿಲ್ಲದೇ ಆರಾಮದಾಯಕವಾಗಿ ಬಳಸಬಲ್ಲಂತ ವಿನ್ಯಾಸ ಹೊಂದಿವೆ.

ಇದನ್ನೂ ಓದಿ: ಕನಸೇ ನಮ್ಮ ಅನಾರೋಗ್ಯದ ಬಗ್ಗೆ ಎಚ್ಚರಿಸುತ್ತೆ ಎಂದರೆ ನಂಬಲೇಬೇಕು! ಏನಿದು ಹೊಸ ಸ್ಟಡಿ? 

ಹೀಗೆ ಹುಡುಕುತ್ತಾ ಹೋದರೆ ಹಲವು ಬ್ರ್ಯಾಂಡ್ ಮತ್ತು ಡಿಸೈನ್​ಗಳು ನಮಗೆ ಕಾಣ ಸಿಗುತ್ತವೆ. ಆದ್ರೆ ನಮಗೆ ಯಾವ ರೀತಿಯ ಕಾರ್ಯಕ್ರಮಕ್ಕೆ ಯಾವ ಬಟ್ಟೆಯ ಮೇಲೆ ಯಾವ ಶೂಗಳನ್ನು ಹಾಕಬೇಕು ಎಂಬ ಸಾಮಾನ್ಯ ಜ್ಞಾನ ಇರಬೇಕಾಗುತ್ತದೆ. ನೀವು ಶೂ ಖರೀದಿಸುವಾಗ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment