ಆರ್​ಸಿಬಿ ಜರ್ಸಿ, ಪಂಜಾಬ್ ಪೇಟ.. ಗೇಲ್​ ಕಂಡು ಗಾಬರಿಯಾದ ಕ್ರಿಕೆಟ್ ಸ್ಟೇಡಿಯಂ..!

author-image
Ganesh
Updated On
ಆರ್​ಸಿಬಿ ಜರ್ಸಿ, ಪಂಜಾಬ್ ಪೇಟ.. ಗೇಲ್​ ಕಂಡು ಗಾಬರಿಯಾದ ಕ್ರಿಕೆಟ್ ಸ್ಟೇಡಿಯಂ..!
Advertisment
  • ಅಹ್ಮದಾಬಾದ್​ನಲ್ಲಿ ಇವತ್ತು IPL- 2025 ಫೈನಲ್ ಪಂದ್ಯ
  • ಪಂಜಾಬ್ ಕಿಂಗ್ಸ್ vs ಆರ್​ಸಿಬಿ ನಡುವೆ ಫೈನಲ್ ಮ್ಯಾಚ್
  • 9 ವರ್ಷಗಳ ಬಳಿಕ ಫೈನಲ್​ಗೆ ಎಂಟ್ರಿ ನೀಡಿರುವ ಆರ್​ಸಿಬಿ

ಐಪಿಎಲ್ ಫೈನಲ್ ಪಂದ್ಯವು ರಜತ್ ಪಾಟೀದಾರ್ ನಾಯಕತ್ವದ RCB ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ನಡುವೆ ಶುರುವಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1 ಲಕ್ಷ 32 ಸಾವಿರ ಕ್ರಿಕೆಟ್ ಅಭಿಮಾನಿಗಳು ಸೇರಿದ್ದಾರೆ.

ಲಕ್ಷಾಂತರ ಅಭಿಮಾನಿಗಳು RCB ಯನ್ನು ಬೆಂಬಲಿಸ್ತಿದ್ದಾರೆ. ಇನ್ನೂ ಕೆಲವರು ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಬಲಿಸ್ತಿದ್ದಾರೆ. ಕೊಹ್ಲಿ ಜೊತೆ ಆಡಿರುವ ಕ್ರಿಸ್ ಗೇಲ್ ಈ ಪಂದ್ಯವನ್ನು ವಿಶಿಷ್ಟ ರೀತಿಯಲ್ಲಿ ವೀಕ್ಷಿಸಲು ಬಂದಿದ್ದಾರೆ. ಎರಡೂ ತಂಡಗಳನ್ನು ಬೆಂಬಲಿಸುವ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಮೊದಲು ಬ್ಯಾಟಿಂಗ್.. ಪಂಜಾಬ್ ವಿರುದ್ಧ ಆಡುವ ಬಲಿಷ್ಠ ತಂಡ ಪ್ರಕಟ..!

ಆರ್​ಸಿಬಿ ಜರ್ಸಿ ತೊಟ್ಟಿರುವ ಗೇಲ್, ಪಂಜಾಬ್​ಗಾಗಿ ಪಂಜಾಬ್ ಸ್ಟೈಲ್​ನಲ್ಲಿ ಪೇಟ ಕಟ್ಟಿದ್ದಾರೆ. ಅಲ್ಲದೇ ಜರ್ಸಿಯ ಒಂದು ಭಾಗದಲ್ಲಿ ಆರ್​ಸಿಬಿ ಹಾಗೂ ಇನ್ನೊಂದು ಕಡೆಯಲ್ಲಿ ಪಂಜಾಬ್ ಕಿಂಗ್ಸ್ ಲೋಗೋ ಹೊಂದಿದೆ. ಅಂದ್ಹಾಗೆ ಗೇಲ್, ಐಪಿಎಲ್‌ನಲ್ಲಿಈ ಎರಡೂ ತಂಡಗಳ ಪರ ಆಡಿದ್ದಾರೆ. ಈ ಎರಡೂ ತಂಡಗಳು ಇಲ್ಲಿಯವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ.

ಗೇಲ್ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದು ಕೆಕೆಆರ್ ಪರ ಆಡುವ ಮೂಲಕ. ನಂತರ ಅವರು ಆರ್‌ಸಿಬಿ ಮತ್ತು ನಂತರ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಕೆಕೆಆರ್ ಪರ 16 ಪಂದ್ಯಗಳನ್ನು, ಪಂಜಾಬ್ ಪರ 41 ಪಂದ್ಯಗಳನ್ನು ಮತ್ತು ಆರ್‌ಸಿಬಿ ಪರ ಅತಿ ಹೆಚ್ಚು 85 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ್ದಾರೆ. 175 ನಾಟೌಟ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯೂ ಗೇಲ್ ಹೆಸರಿನಲ್ಲಿದೆ.

ಇದನ್ನೂ ಓದಿ: ಫೈನಲ್ ಮ್ಯಾಚ್​ನಲ್ಲಿ 5 ಸ್ಟಾರ್​ ವಾರ್.. ಇದು ಕೇವಲ ಆಟಗಾರರ ನಡುವಿನ ಬ್ಯಾಟಲ್ ಅಲ್ಲವೇ ಅಲ್ಲ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment