newsfirstkannada.com

ಅಬ್ಬರಿಸಿದ ಕ್ರಿಕೆಟ್ ದೈತ್ಯ ಗೇಲ್: 10 ಸಿಕ್ಸರ್​.. 46 ಬಾಲ್​ನಲ್ಲಿ ಸ್ಫೋಟಕ ಬ್ಯಾಟಿಂಗ್..!

Share :

Published February 28, 2024 at 1:33pm

    ಟೆಸ್ಟ್​ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಬಂಪರ್​, ವಿಶೇಷ ಗೌರವ

    ಸೆಮಿಫೈನಲ್​ ಪಂದ್ಯವನ್ನಾಡಲು ಶ್ರೇಯಸ್​ ಅಯ್ಯರ್ ರೆಡಿ

    ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಕರ್ನಾಟಕ ತಂಡ

ಕ್ರಿಸ್​ ಗೇಲ್​ ಸ್ಫೋಟಕ ಬ್ಯಾಟಿಂಗ್​
ನೋಯ್ಡಾದಲ್ಲಿ ನಡೆಯುತ್ತಿರುವ ಇಂಡಿಯನ್​ ವೆಟ್ರನ್​​ ಪ್ರೀಮಿಯರ್​ ಲೀಗ್​ನಲ್ಲಿ ಕೆರಬಿಯನ್​ ದೈತ್ಯ ಕ್ರಿಸ್​ ಗೇಲ್​ ಘರ್ಜಿಸಿದ್ದಾರೆ. ಸುರೇಶ್​ ರೈನಾ ನೇತೃತ್ವದ ಉತ್ತರ ಪ್ರದೇಶ ತಂಡದ ಎದುರು 10 ಸಿಕ್ಸರ್​ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಉತ್ತರ ಪ್ರದೇಶ 6 ವಿಕೆಟ್​ ನಷ್ಟಕ್ಕೆ 269 ರನ್​ಗಳಿಸಿತ್ತು. ಈ ಟಾರ್ಗೆಟ್​ ಬೆನ್ನತ್ತಿದ ತೆಲಂಗಾಣ ಟೈಗರ್ಸ್​ ಪರ ಗೇಲ್​,​ 46 ಎಸೆತಗಳಲ್ಲಿ 3 ಬೌಂಡರಿ, 10 ಸಿಕ್ಸರ್​ ಸಹಿತ 94 ರನ್​ ಸಿಡಿಸಿದ್ರು. ಈ ಅಬ್ಬರದ ಬ್ಯಾಟಿಂಗ್​ ಹೊರತಾಗಿಯೂ ತೆಲಂಗಾಣ 45 ರನ್​ಗಳ ಸೋಲುಂಡಿತು. ಕ್ರಿಸ್ ​ಗೇಲ್ 94 ರನ್​ಗಳಿಸಿ ಮಿಂಚಿದರು.

ಟೆಸ್ಟ್​ ಕ್ರಿಕೆಟಿಗರಿಗೆ ಬಿಸಿಸಿಐನಿಂದ ಬಂಪರ್​
ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಗೆಲುವಿನ ಬೆನ್ನಲ್ಲೇ ಟೆಸ್ಟ್​ ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ನೀಡಲು ಬಿಸಿಸಿಐ ಮುಂದಾಗಿದೆ. ಟೆಸ್ಟ್​ ಪಂದ್ಯಗಳ ಮ್ಯಾಚ್​ ಫೀ ಹೆಚ್ಚಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಟೆಸ್ಟ್​ ಕ್ರಿಕೆಟ್​​ ಬಿಟ್ಟು ಕೆಲ ಆಟಗಾರರು ಐಪಿಎಲ್​ನತ್ತ ಹೆಚ್ಚು ಗಮನ ಹರಿಸ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಚ್​ ಫೀ ಹೆಚ್ಚಿಸೋ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ. ಜೊತೆಗೆ ವರ್ಷ ಪೂರ್ತಿ ನಡೆಯೋ ಎಲ್ಲಾ ಟೆಸ್ಟ್​ ಸರಣಿಗಳನ್ನು ಆಡೋ ಆಟಗಾರರಿಗೂ ವಿಶೇಷ ಗೌರವಧನ ನೀಡಲು ಬಿಸಿಸಿಐ ಚಿಂತಿಸಿದೆ.

ಸೆಮಿಫೈನಲ್​ ಪಂದ್ಯವನ್ನಾಡಲು ಶ್ರೇಯಸ್​ ರೆಡಿ..!
ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಮುಂಬೈ ತಂಡಕ್ಕೆ ಗುಡ್​ನ್ಯೂಸ್​ ಸಿಕ್ಕಿದೆ. ಸ್ಟಾರ್​ ಬ್ಯಾಟ್ಸ್​ಮನ್​ ಶ್ರೇಯಸ್​ ಅಯ್ಯರ್ ಫುಲ್​ ಫಿಟ್​​ ಆಗಿದ್ದಾರೆ ಎಂದು ವರದಿಯಾಗಿದೆ. ಬೆನ್ನು ನೋವಿನ ಕಾರಣ ನೀಡಿ ಕ್ವಾರ್ಟರ್​​ ಫೈನಲ್​ ಪಂದ್ಯದಿಂದ ಶ್ರೇಯಸ್​ ಅಯ್ಯರ್​ ಹೊರಗುಳಿದಿದ್ರು. ಇದೀಗ ಫುಲ್​ ಫಿಟ್​ ಆಗಿದ್ದು, ತಮಿಳು ನಾಡು ವಿರುದ್ಧ ಸೆಮಿಫೈನಲ್​ ಆಡಲಿದ್ದಾರೆ ಎನ್ನಲಾಗಿದೆ.

ವೇಗದ ಶತಕ ಸಿಡಿಸಿದ ನಿಕೋಲ್​ ಲೋಫ್ಟಿ
ನಮೀಬಿಯಾ ಕ್ರಿಕೆಟರ್​​ ತಂಡದ ಬ್ಯಾಟ್ಸ್​ಮನ್​ ನಿಕೋಲ್​ ಲೋಫ್ಟಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ನಿಕೋಲ್​ ಲೋಫ್ಟಿ ಸೆಂಚುರಿ ಸಿಡಿಸಿದ್ದಾರೆ. ಇನ್ನಿಂಗ್ಸ್​ನಲ್ಲಿ 11 ಬೌಂಡರಿ, 8 ಸಿಕ್ಸರ್​ ಸಿಡಿಸಿದ್ದಾರೆ. ಇದಕ್ಕೂ ಮುನ್ನ ವೇಗದ ಶತಕದ ದಾಖಲೆ ನೇಪಾಳದ ಕುಶಾಲ್​ ಮಲ್ಲಾ ಹೆಸರಲ್ಲಿತ್ತು. ಕುಶಾಲ್​ ಮಲ್ಲಾ 34 ಎಸೆತಗಳಲ್ಲಿ ಈ ಸಾಧನೆ ಮಾಡಿದ್ರೆ, ಭಾರತದ ರೋಹಿತ್​ ಶರ್ಮಾ ಹಾಗೂ ಸೌತ್​ ಆಫ್ರಿಕಾದ ಡೇವಿಡ್​ ಮಿಲ್ಲರ್​ 35 ಎಸೆತಗಳಲ್ಲಿ ಶತಕ ಪೂರೈಸಿದ್ರು.

ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದ ಕರ್ನಾಟಕ
ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲುಂಡಿದೆ. ವಿದರ್ಭ ತಂಡದ ನೀಡಿದ್ದ 371 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಕರ್ನಾಟಕ ತಂಡ ಕೇವಲ 243 ರನ್​ಗಳಿಗೆ ಆಲೌಟ್​ ಆಯ್ತು. ನಾಯಕ ಮಯಾಂಕ್​ ಅಗರ್ವಾಲ್​ ಹೊರತುಪಡಿಸಿದ್ರೆ, ಉಳಿದ್ಯಾವ ಆಟಗಾರರು ಅರ್ದಶತಕದ ಗಡಿ ದಾಟಲಿಲ್ಲ. 243 ರನ್​ಗಳಿಗೆ ಆಲೌಟ್​ ಆಗಿ ಕರ್ನಾಟದಕ ಟೂರ್ನಿಯಿಂದ ಹೊರ ಬಿದ್ರೆ, ಗೆದ್ದ ವಿದರ್ಭ ಸೆಮಿಫೈನಲ್​ಗೆ ಪ್ರವೇಶಿಸಿತು.

ದಾಖಲೆಯ ಶತಕ ಸಿಡಿಸಿದ ಮುಂಬೈಕರ್ಸ್​​
ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮುಂಬೈ ತಂಡದ ತನುಶ್​ ಕೊಟ್ಯಾನ್ ಹಾಗೂ ತುಶಾರ್​ ದೇಶಪಾಂಡೆ ಇತಿಹಾಸ ನಿರ್ಮಿಸಿದ್ದಾರೆ. ಬರೋಡ ವಿರುದ್ಧದ ಪಂದ್ಯದಲ್ಲಿ 10 ಕ್ರಮಾಂಕದಲ್ಲಿ ಕಣಕ್ಕಿಳಿದ ತನುಶ್​ ಕೊಟ್ಯಾನ್​ ಹಾಗೂ 11ನೇ ಕ್ರಮಾಂಕದಲ್ಲಿ ಆಡಿದ ತುಷಾರ್​ ದೇಶಪಾಂಡೆ ಇಬ್ಬರೂ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ 78 ವರ್ಷಗಳ ಫಸ್ಟ್​ ಕ್ಲಾಸ್​ ಕ್ರಿಕೆಟ್​ನ ಇತಿಹಾಸದಲ್ಲಿ 10 ಹಾಗೂ 11ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ ಬ್ಯಾಟ್ಸ್​ಮನ್​ಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನುಷ್​​ 120 ರನ್​ ಸಿಡಿಸಿದ್ರೆ, ತುಷಾರ್​​ 123 ರನ್ ಸಿಡಿಸಿದ್ರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಬ್ಬರಿಸಿದ ಕ್ರಿಕೆಟ್ ದೈತ್ಯ ಗೇಲ್: 10 ಸಿಕ್ಸರ್​.. 46 ಬಾಲ್​ನಲ್ಲಿ ಸ್ಫೋಟಕ ಬ್ಯಾಟಿಂಗ್..!

https://newsfirstlive.com/wp-content/uploads/2024/02/GYLE.jpg

Load More