ಹ್ಯಾಪಿ ಮೂಡ್​ನಲ್ಲಿ ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಹಳ್ಳಿಕೇರಿ.. ಇಷ್ಟು ಜೋರಾದ ಸಂಭ್ರಮ ಯಾಕೆ ಗೊತ್ತಾ?

author-image
Veena Gangani
Updated On
ಹ್ಯಾಪಿ ಮೂಡ್​ನಲ್ಲಿ ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಹಳ್ಳಿಕೇರಿ.. ಇಷ್ಟು ಜೋರಾದ ಸಂಭ್ರಮ ಯಾಕೆ ಗೊತ್ತಾ?
Advertisment
  • ಚೈತ್ರಾ ಹಳ್ಳಿಕೇರಿ ಆಯೋಜಿಸಿದ್ದ ಪಾರ್ಟಿಗೆ ಯಾರೆಲ್ಲಾ ಬಂದಿದ್ರು?
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ನಟಿಯ ವಿಡಿಯೋ
  • ಬಿಗ್​ಬಾಸ್​ ಓಟಿಟಿ ಸೀಸನ್​ 1 ಸ್ಪರ್ಧಿಯಾಗಿದ್ದ ಚೈತ್ರಾ ಹಳ್ಳಿಕೇರಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಓಟಿಟಿ ಸೀಸನ್​ 1 ಸ್ಪರ್ಧಿ ಸಖತ್​ ಖುಷಿಯಲ್ಲಿದ್ದಾರೆ. ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್​ 1ಕ್ಕೆ ಹತ್ತನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಚೈತ್ರಾ ಹಳ್ಳಿಕೇರಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ: BBK11: ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಧರ್ಮನಿಗೆ ತಂದೆಯಿಂದ ಹೆಮ್ಮೆಯ ಮಾತು; ಹೇಳಿದ್ದೇನು?

publive-image

ಚೆಲುವೆ ಒಂದು ಹೇಳ್ತೀನಿ, ರಾಮಸ್ವಾಮಿ ಕೃಷ್ಣಸ್ವಾಮಿ, ಕಾಂಚನ ಗಂಗಾ, ಗೌಡ್ರು, ಖುಷಿ, ಗುನ್ನ, ಶಿಷ್ಯ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಚೈತ್ರಾ ಹಳ್ಳಿಕೇರಿ ಅಭಿನಯಿಸಿದ್ದಾರೆ. ಅಲ್ಲದೇ ಚೈತ್ರಾ ಹಳ್ಳಿಕೇರಿ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದರು.

publive-image

ಸದ್ಯ ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹುಟ್ಟು ಹಬ್ಬದ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನಟಿ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ಅಲ್ಲದೇ ಈ ಬರ್ತ್​ ಡೇ ಪಾರ್ಟಿಗೆ ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ ಬಂದಿದ್ದರು.

publive-image

ಅಲ್ಲದೇ ಪ್ರಸ್ತುತವಾಗಿ ಸೀತಾ ರಾಮ ಸೀರಿಯಲ್​ನಲ್ಲಿ ರಾಮನ ಚಿಕ್ಕಮ್ಮ ಭಾರ್ಗವಿ ಪಾತ್ರದಲ್ಲಿ ಅಭಿಸಯಿಸುತ್ತಿರೋ ಪೂಜಾ ಲೋಕೇಶ್ ಕೂಡ ಆಗಮಿಸಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ನಟಿ ಚೈತ್ರಾ ಹಳ್ಳಿಕೇರಿ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment