/newsfirstlive-kannada/media/post_attachments/wp-content/uploads/2025/03/Kn-Rajanna-on-Honey-Trap-1.jpg)
ಸಚಿವ ಕೆ.ಎನ್.ರಾಜಣ್ಣ ಮಾಡಿರುವ ಹನಿಟ್ರ್ಯಾಪ್ ಆರೋಪ ಸಂಚಲನ ಸೃಷ್ಟಿಸಿದೆ. ಸದನದಲ್ಲಿ ತನಿಖೆ ಆಗ್ಬೇಕೆಂದು ಎಂದಿದ್ದ ರಾಜಣ್ಣ, ಗೃಹಸಚಿವರನ್ನು ಭೇಟಿಯಾಗಿ, ತನಿಖೆಗೆ ಮನವಿ ಮಾಡಿದ್ರು. ಇದರ ಬೆನ್ನಲ್ಲೇ ಹನಿಟ್ರ್ಯಾಪ್ ಜಾಲದ ಹಿಂದಿನ ಅಸಲಿ ರಹಸ್ಯ ಪತ್ತೆ ಹಚ್ಚಲು ಸಿಐಡಿ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದಾರೆ.
‘ಹನಿಟ್ರ್ಯಾಪ್’ ತನಿಖೆ ಆರಂಭ
ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿತ್ತು ಅಂತ ಸಚಿವ ಕೆ.ಎನ್.ರಾಜಣ್ಣ ಸಿಡಿಸಿರುವ ಬಾಂಬ್ ಕೋಲಾಹಲ ಸೃಷ್ಟಿಸಿದೆ. ನಾನು ದೂರು ಕೊಡ್ತೀನಿ ನಾನು ದೂರು ಕೊಡ್ತೀನಿ ಬಡಬಡಾಯಿಸಿದ್ದ ಕೋ ಆಪರೇಟಿವ್ ಮಿನಿಸ್ಟರ್ ರಾಜಣ್ಣ ಕೊನೆಗೆ ಹೋಂ ಮಿನಿಸ್ಟರ್ ಬಳಿಕ ಮನವಿ ಮಾಡಿಕೊಂಡು ಮೌನಕ್ಕೆ ಜಾರಿದ್ದರು. ಈ ಬೆನ್ನಲ್ಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ಮೇರೆಗೆ ಸಿಐಡಿ ಅಧಿಕಾರಿಗಳ ತಂಡ ಸಚಿವ ರಾಜಣ್ಣ ಸರ್ಕಾರಿ ನಿವಾಸದಿಂದಲೇ ತನಿಖೆ ಪ್ರಾರಂಭಿಸಿದೆ.
ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್ನಲ್ಲಿ ಅಬ್ಬರಿಸಿದ್ದ ಸಚಿವರು ಸೈಲೆಂಟ್.. ಕೆ.ಎನ್ ರಾಜಣ್ಣ ನಡೆ ಬದಲಾಗಿದ್ದು ಯಾಕೆ?
‘ಹನಿ’ ಮೇಲೆ ಸಿ‘ಐ’ಡಿ!
ಸಿಐಡಿ ಅಧಿಕಾರಿಗಳಿಂದ ರಾಜಣ್ಣ ಮನೆಯಲ್ಲಿ ಪರಿಶೀಲನೆ ನಡೆಸಿದೆ. ಸಿಐಡಿ ಡಿಐಜಿ ವಂಶಿಕೃಷ್ಣ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿದ್ದು ಸಿಐಡಿ ಎಸ್ಪಿ ರಾಘವೇಂದ್ರ, ಡಿವೈಎಸ್ಪಿ ಕೇಶವ್ ತಂಡ ಸಾಥ್ ನೀಡಿದೆ. ರಾಜಣ್ಣ ಮನೆಯ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿರುವ ಸಿಐಡಿ ಸಚಿವ ರಾಜಣ್ಣರನ್ನ ಭೇಟಿ ಮಾಡುವವರ ಹಾಜರಾತಿ ಲೆಡ್ಜರ್ ಬುಕ್ ಪರಿಶೀಲನೆ ನಡೆಸಿದ್ದಾರೆ.
ಹನಿಟ್ಯ್ರಾಪ್ ಕೇಸ್ನ ತನಿಖೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ.ಎನ್.ರಾಜಣ್ಣ ಅದು ಸಿಎಂ ಹಾಗೂ ಗೃಹ ಮಂತ್ರಿಗಳ ತೀರ್ಮಾನಕ್ಕೆ ಬಿಟ್ಟದ್ದು, ಅವರು ಏನೇ ತೀರ್ಮಾನ ತೆಗೆದುಕೊಂಡ್ರೂ ಅದೇ ಫೈನಲ್ ಎಂದಿದ್ದಾರೆ. ಇದುವರೆಗೆ ಸಚಿವ ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ದೂರು ಕೊಡುವ ಗೋಜಿಗೆ ಹೋಗಿರಲಿಲ್ಲ. ಆದ್ರೆ ಸದನದಲ್ಲಿ ಕೊಟ್ಟ ಮಾತಿನಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಉನ್ನತ ಮಟ್ಟದ ತನಿಖೆಗೆ ಕೈ ಹಾಕಿದ್ದಾರೆ.. ಸದ್ಯ ಸಿಐಡಿ ತಂಡ ಸಚಿವ ರಾಜಣ್ಣ ಮನೆಯಲ್ಲಿ ತಡಕಾಡಿದ್ದು, ಹೆಚ್ಚಿನ ಮಾಹಿತಿಗಳು ಮತ್ತಷ್ಟು ತನಿಖೆ ಬಳಿಕ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಶಾಸಕಾಂಗ ಇಲಾಖೆಯಲ್ಲಿ ಕಚೇರಿ ಸಹಾಯಕರ ಹುದ್ದೆಗಳು ಖಾಲಿ ಖಾಲಿ.. ಕೂಡಲೇ ಅರ್ಜಿ ಸಲ್ಲಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ