ಸಿಗರೇಟ್, ಮೇಕಪ್‌.. ಅಪರ್ಣಾ ಬಲಿ ಪಡೆದ ಲಂಗ್ ಕ್ಯಾನ್ಸರ್‌ ಸ್ತ್ರೀಯರಿಗೆ ಮಾರಕ; ಶಾಕಿಂಗ್ ಮಾಹಿತಿ ಕೊಟ್ಟ ವೈದ್ಯರು

author-image
admin
Updated On
ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್‌.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?
Advertisment
  • ಧೂಮಪಾನ ಮಾಡುವವರ ಪಕ್ಕ ನಿಂತರೂ ಕ್ಯಾನ್ಸರ್ ಪಕ್ಕಾ!
  • ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್‌ನಿಂದ ಶ್ವಾಸಕೋಶದ ಕ್ಯಾನ್ಸರ್‌
  • ಜೆನೆಟಿಕ್ ಮೇಕ್ ಅಪ್ ಬಳಸುವವರಲ್ಲೂ ಈ ಹೆಮ್ಮಾರಿ ಪತ್ತೆ

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ಸಾವಿನ ಬಳಿಕ ಶ್ವಾಸಕೋಶದ ಕ್ಯಾನ್ಸರ್‌ ಬಗ್ಗೆ ಆತಂಕ ಹೆಚ್ಚಾಗಿದೆ. ಸಾಕಷ್ಟು ಜನರು ಈ ಮಾರಕ ಕಾಯಿಲೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಗೂಗಲ್‌ನಲ್ಲಿ ಈಗಾಗಲೇ ಲಂಗ್ ಕ್ಯಾನ್ಸರ್‌ ಬಗ್ಗೆ ಸರ್ಚ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ: ಅಪರ್ಣಾ ಬಲಿ ಪಡೆದ ಶ್ವಾಸಕೋಶ ಕ್ಯಾನ್ಸರ್​.. ಶೇ.50 ರಷ್ಟು ಧೂಮಪಾನ ಮಾಡದವ್ರಿಗೆ ಕಾಡ್ತಿದೆ ಈ ಮಾರಕ ಕಾಯಿಲೆ..! 

ಶ್ವಾಸಕೋಶದ ಕ್ಯಾನ್ಸರ್‌ ಬರಲು ನಂ.1 ಕಾರಣ ಅಂದ್ರೆ ಅದು ಧೂಮಪಾನ. ಸ್ಮೋಕಿಂಗ್ ಮಾಡುವವರಿಗೆ ಲಂಗ್ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ ಎಂದು ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲ ಸ್ಮೋಕಿಂಗ್ ಮಾಡದವರಿಗೂ ಲಂಗ್ ಕ್ಯಾನ್ಸರ್ ಪತ್ತೆಯಾಗಿದೆ. ಆಯುರ್ವೇದ ಜನರಲ್ ಫಿಸಿಷಿಯನ್ ಡಾ. ಶರದ್ ಕುಲಕರ್ಣಿ ಅವರು ಈ ಶ್ವಾಸಕೋಶದ ಕ್ಯಾನ್ಸರ್‌ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

publive-image

ಸಿಗರೇಟ್ ಸೇದದವರಿಗೂ ಮಾರಕ!
ಅಧ್ಯಯನಗಳ ಪ್ರಕಾರ ಈ ಶ್ವಾಸಕೋಶದ ಕ್ಯಾನ್ಸರ್​ಗೆ ಸಿಗರೇಟ್ ಸೇದುವುದು ಮಾತ್ರವೇ ಕಾರಣವಲ್ಲ. ಸ್ಮೋಕಿಂಗ್ ಮಾಡುವವರ ಪಕ್ಕದಲ್ಲಿ ನಿಂತಿದ್ದವರಿಗೂ ಈ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇನ್ನು ಅಚ್ಚರಿಯ ಸಂಗತಿ ಏನಂದ್ರೆ ಲಂಗ್ ಕ್ಯಾನ್ಸರ್ ಪೈಕಿ ಶೇಕಡಾ 50ರಷ್ಟು ಜನ ಪ್ಯಾಸಿವ್ ಸ್ಮೋಕರ್ಸ್ ಅಂದ್ರೆ ಸಿಗರೇಟ್ ಸೇದುವಾಗ ಪಕ್ಕದಲ್ಲಿ ನಿಂತವರು ಎನ್ನಲಾಗಿದೆ. ಇವರನ್ನು ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಎಂದು ವೈದ್ಯರು ಪರಿಗಣಿಸುತ್ತಾರೆ.
ಸಿಗರೇಟ್ ಒಂದೇ ಅಲ್ಲ ಪೆಟ್ರೋಲ್ ಕೆಮಿಕಲ್‌ನಿಂದ ಉತ್ಪತ್ತಿಯಾಗುವ ತುಂಬಾ ವಾಯುಮಾಲಿನ್ಯ ಕೂಡ ಲಂಗ್ ಕ್ಯಾನ್ಸರ್‌ಗೆ ಮತ್ತೊಂದು ಕಾರಣವಾಗಿದೆ. ತುಂಬಾ ಸಂಸ್ಕರಿಸಿದ ಆಹಾರ (ಪ್ಯಾಕೆಟ್ ಫುಡ್) ಬಳಸುವುದು, ಮಾನಸಿಕ ಒತ್ತಡ ಹೆಚ್ಚಿರುವ ಸ್ತ್ರೀಯರಲ್ಲಿ ಈ ಶ್ವಾಸಕೋಶದ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ. ರಾಸಾಯನಿಕ ಗೊಬ್ಬರ ಬಳಿಸಿದ ಆಹಾರಗಳನ್ನು ತಿನ್ನುವುದರಿಂದಲೂ ಲಂಗ್ ಕ್ಯಾನ್ಸರ್ ಬರುತ್ತದೆ. ಪಂಜಾಬ್‌ನಲ್ಲಿ ಈ ರೀತಿಯ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ.

publive-image

ಮಾನಸಿಕ ಒತ್ತಡವೂ ಕಾರಣ
ಲಂಗ್ ಕ್ಯಾನ್ಸರ್ 3ನೇ ಅತಿ ಭಯಾನಕ ಕ್ಯಾನ್ಸರ್. ಇತ್ತೀಚೆಗೆ ಭಾರತೀಯರಲ್ಲಿ 54-70 ವಯಸ್ಸಿನವರಿಗೆ ಈ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇದುವರೆಗೂ ಭಾರತದಲ್ಲಿ 72,510 ಶ್ವಾಸಕೋಶ ಕ್ಯಾನ್ಸರ್ ಪ್ರಕರಣ ಪತ್ತೆಯಾಗಿದ್ದು, 66,279 ಮಂದಿ ಈ ಶ್ವಾಸಕೋಶದ ಕ್ಯಾನ್ಸರ್​ಗೆ ಬಲಿಯಾಗಿದ್ದಾರೆ.

ಪ್ರತಿ ದಿನ ತಮಗೆ ತಾವು ಸಮಯ ಕೊಡದೇ ಕೆಲಸದಲ್ಲಿ ಬ್ಯುಸಿ ಆಗುವುದು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಿದೆ. 8-10 ಗಂಟೆ ಕೆಲಸ ಮಾಡಿದ್ರು 24 ಗಂಟೆಯಲ್ಲಿ ತಮಗೆ 2-3 ಗಂಟೆ ಕೊಡಬೇಕು. ಆಗ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್‌.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ? 

ಮೇಕ್‌ಅಪ್ ಕೂಡ ಕಾರಣ!
ಭಾರತದಲ್ಲಿ ಬಹಳಷ್ಟು ಲಂಗ್ ಕ್ಯಾನ್ಸರ್ ರೋಗಿಗಳು ಸಿಗರೇಟ್ ಸೇದದವರಲ್ಲಿ ಪತ್ತೆಯಾಗಿದೆ. ಜೆನೆಟಿಕ್ ಮೇಕ್ ಅಪ್ ಬಳಸುವವರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿದೆ. ಇತ್ತೀಚಿಗೆ ಅಧ್ಯಯನಗಳಲ್ಲಿ ಲಂಗ್ ಕ್ಯಾನ್ಸರ್‌ಗೆ ವಾಯುಮಾಲಿನ್ಯ, ಜೆನೆಟಿಕ್ ಮೇಕ್‌ಅಪ್‌ಗಳ ಅತಿಯಾದ ಬಳಕೆ ಕಾರಣ ಎನ್ನಲಾಗಿದೆ.

ಸದ್ಯ ನಗರ ಪ್ರದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾದವರ ಸಂಖ್ಯೆ ದುಪ್ಪಾಟ್ಟಾಗುತ್ತಿದೆ. 2025ರ ವೇಳೆಗೆ ಈ ಹೆಮ್ಮಾರಿ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆಗಳಿವೆ.

ಲಂಗ್ ಕ್ಯಾನ್ಸರ್ ಲಕ್ಷಣವೇನು? 
ವಿಪರೀತ ಕೆಮ್ಮು, ಉಸಿರಾಟದ ತೊಂದರೆ, ತೂಕ ಇಳಿಕೆ, ಕೆಮ್ಮಿದಾಗ ರಕ್ತಸ್ರಾವ, ಎದೆ ನೋವು, ತಲೆನೋವು, ನಿಶಕ್ತಿ, ಮುಖ ಊದಿಕೊಳ್ಳುವುದು, ತ್ವಚೆಯ ಬದಲಾವಣೆ

ಲಂಗ್ ಕ್ಯಾನ್ಸರ್​ಗೆ ಕಾರಣ
1. ಧೂಮಪಾನ
2. ಧೂಮಪಾನ ಮಾಡುವವರ ಜೊತೆ ನಿಲ್ಲುವುದು
3. ಅಡುಗೆ ಮನೆಯ ಹೊಗೆ, ಫ್ಯಾಕ್ಟರಿ ಹೊಗೆ
4. ಡಯೆಟ್
5. ಮೇಕಪ್​ ವಿಧಾನ
6. ಫ್ಯಾಮಿಲಿ ಹಿಸ್ಟರಿ

ಬಚಾವ್ ಆಗಲು ಏನು ಮಾಡ್ಬೇಕು? 

ಲಂಗ್ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಸಿಗರೇಟ್, ಮಾದಕ ವ್ಯಸನಗಳಿಂದ ದೂರ ಇರಬೇಕು. ತುಂಬಾ ವಾಯುಮಾಲಿನ್ಯ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ. ಉತ್ತಮ ಆಹಾರ, ಮಾನಸಿಕ ಒತ್ತಡ ನಿಯಂತ್ರಿಸುವುದರಿಂದ ಈ ಕಾಯಿಲೆಯಿಂದ ದೂರ ಉಳಿಯಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment