45 ಸಿನಿಮಾಗೆ ಪೈರಸಿ, ನೆಗೆಟಿವ್ ಪಬ್ಲಿಸಿಟಿಯಿಂದ ನಷ್ಟ! ನೋವು ತೋಡಿಕೊಂಡ ನಿರ್ಮಾಪಕ

ನಟ ಶಿವರಾಜ್ ಕುಮಾರ್, ನಟ ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಇದಕ್ಕೆ ಸಿನಿಮಾದ ಪೈರಸಿ ಹಾಗೂ ನೆಗೆಟಿವ್ ಪಬ್ಲಿಸಿಟಿ ಕಾರಣ ಎಂದು ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ನೋವು ತೋಡಿಕೊಂಡಿದ್ದಾರೆ. ಕನ್ನಡ ಇಂಡಸ್ಟ್ರಿ ಉದ್ದಾರವಾಗಲ್ಲ ಎಂದಿದ್ದಾರೆ.

author-image
Chandramohan
45 Cinema loss says producer

45 ಸಿನಿಮಾಗೆ ಆರ್ಥಿಕ ನಷ್ಟ! ನೋವು ತೋಡಿಕೊಂಡ ನಿರ್ಮಾಪಕ

Advertisment
  • 45 ಸಿನಿಮಾಗೆ ಆರ್ಥಿಕ ನಷ್ಟ! ನೋವು ತೋಡಿಕೊಂಡ ನಿರ್ಮಾಪಕ
  • ಸಿನಿಮಾ ಪೈರಸಿ, ನೆಗೆಟಿವ್ ಪಬ್ಲಿಸಿಟಿಯಿಂದ ಸಿನಿಮಾಗೆ ಸೋಲು
  • ಕನ್ನಡ ಇಂಡಸ್ಟ್ರಿ ಒಳಗಿನವರೇ ಇಂಡಸ್ಟ್ರಿ ಉದ್ದಾರ ಆಗಲು ಬಿಡುತ್ತಿಲ್ಲ-ರಮೇಶ್ ರೆಡ್ಡಿ

ಕನ್ನಡ ಸಿನಿಮಾ  ಇಂಡಸ್ಟ್ರಿ ಒಳಗಿನವರೇ 45 ಸಿನಿಮಾನಾ ತುಳಿದರು. ಕನ್ನಡ ಸಿನಿಮಾ ಇಂಡಸ್ಟ್ರೀ ಒಳಗಿನವರೇ ಕನ್ನಡ ಸಿನಿಮಾ ಇಂಡಸ್ಟ್ರಿನ ಉದ್ದಾರ ಆಗುವುದಕ್ಕೆ ಬಿಡುತ್ತಿಲ್ಲ ಎಂದು 45 ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಒಳಗೊಂದು,  ಹೊರಗೊಂದು ಮಾತಾಡೋ ಜನರಿಂದ ಇಂಡಸ್ಟ್ರಿ ಹಾಳಾಗುತ್ತಿದೆ.  ಯುದ್ಧ ಸಾರಿದ್ದು ಯಾರೋ.. ಆದ್ರೆ ಬರಿಯಾಗಿದ್ದು ನಾನು.  45 ಸಿನಿಮಾಗೆ ಮೊದಲ ಮೂರು ದಿನ ಸಖತ್ ಓಪನಿಂಗ್ ಪಡೆದಿತ್ತು.   ಆ ನಂತರದಲ್ಲಿ ಬೇಕು ಅಂತಲೇ ಸಿನಿಮಾ ಪೈರಸಿ ಮಾಡಿಸಿದ್ದರು.  ಸಿನಿಮಾ ಮೇಲೆ ನೆಗೆಟಿವ್ ಪಬ್ಲಿಸಿಟಿ ಮಾಡಿಸಿದ್ರು.  ಇದರಿಂದ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿದ ನನಗೆ ತೊಂದರೆ ಆಗಿದೆ. 
ಈ ಥರಾ ಒಳ ರಾಜಕೀಯ ಮಾಡಿದ್ರೆ ಯಾರು ಉದ್ಧಾರ ಆಗ್ತಾರೆ.  ಇದರಿಂದ ಕನ್ನಡ ಸಿನಿಮಾ ಮಾಡುವುದಕ್ಕೆ  ಯಾರು ಮುಂದೆ ಬರುತ್ತಾರೆ.  ಈ ವಾತಾವರಣ, ಈ ಥರಾ ಪದ್ಧತಿ ನಿಜಕ್ಕೂ ನೋವು ತರಿಸಿದೆ.  ನನಗೆ  ನಷ್ಟ  ತಡೆದುಕೊಳ್ಳೋ ಶಕ್ತಿಯಿದೆ. ಆದರೇ ಹೊಸ ನಿರ್ಮಾಪಕರ ಕಥೆ ಏನು? .ಅವರು ಮುಂದೆ ಸಿನಿಮಾ ನಿರ್ಮಾಣ ಮಾಡೋದಕ್ಕೆ ಮುಂದೆ ಬರಲ್ಲ.  ಯಾರು ಈ ಥರಾ ಮಾಡುತ್ತಿದ್ದಾರೋ ಅವರಿಗೆ  ದೇವರು ಒಳ್ಳೆಯ ಬುದ್ಧಿ ಕೊಡಲಿ. ಇನ್ನಾದ್ರೂ ಇಂಡಸ್ಟ್ರಿ ಪೈರಸಿ, ನೆಗೆಟಿವ್ ಪಬ್ಲಿಸಿಟಿ ವಿರುದ್ಧ ಹೋರಾಡಲಿ ಎಂದು 45 ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

45 Movie
Advertisment