45 Movie Review: ನಾಳೆ ತೆರೆಗೆ ಬರಲು ಸಿದ್ಧವಾಗಿರುವ 45 ಚಿತ್ರಕ್ಕೆ ನಾಯಕರು ಎಷ್ಟು?

ಈ ರೀತಿ ಒಂದು ಪ್ರಶ್ನೆ ಕೇಳಿದ್ರೆ, ತುಂಬಾ ಸಹಜವಾಗಿ ಬರೋ ಉತ್ತರ ಶಿವಣ್ಣ ಮತ್ತು ಉಪೇಂದ್ರ ಇಬ್ಬರು ನಾಯಕರು ಅನ್ನೋದು. ಮತ್ತೆ ಕೆಲವರಿಗೆ ರಾಜ್​​ ಬಿ ಶೆಟ್ಟಿ ಅವರೂ ಸೇರಿದಂತೆ ಮೂವರು ನಾಯಕರು ಅನ್ನಿಸಬಹುದು. ಆದರೆ, ನಿಮಗೆ ಗೊತ್ತಾ ಈ ಚಿತ್ರಕ್ಕೆ 10 ಮಂದಿ ನಾಯಕರು.

author-image
Siddeshkumar H P
45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_01A

Photograph: (45 Movie)

Advertisment
  • ನೋಡಲೇ ಬೇಕಾದ ಸಿನಿಮಾ 45 ಯಾಕೆ ಗೊತ್ತಾ..?
  • ಈ ಸಿನಿಮಾ ನೋಡಿದ ಪ್ರೇಕ್ಷಕನಿಗೆ ಏನು ಲಾಭ ?
  • ಇನ್ನೂ ಈ 45 ಸಿನಿಮಾದಿಂದ ಗೆದ್ದವರು ಯಾರು ?

ಈ ರೀತಿ ಒಂದು ಪ್ರಶ್ನೆ ಕೇಳಿದ್ರೆ, ತುಂಬಾ ಸಹಜವಾಗಿ ಬರೋ ಉತ್ತರ ಶಿವಣ್ಣ ಮತ್ತು ಉಪೇಂದ್ರ ಇಬ್ಬರು ನಾಯಕರು ಅನ್ನೋದು. ಮತ್ತೆ ಕೆಲವರಿಗೆ ರಾಜ್​​ ಬಿ ಶೆಟ್ಟಿ ಅವರೂ ಸೇರಿದಂತೆ ಮೂವರು ನಾಯಕರು ಅನ್ನಿಸಬಹುದು. ಆದರೆ, ನಿಮಗೆ ಗೊತ್ತಾ ಈ ಚಿತ್ರಕ್ಕೆ 10 ಮಂದಿ ನಾಯಕರು. 
ಹೌದು, 10 ಮಂದಿ ನಾಯಕರು ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು. ಆದರೂ ಇದು ಸತ್ಯ. ಕಳೆದ ಮೂರು ವರ್ಷಗಳಿಂದ ನಿರಂತರ ಶ್ರಮವಹಿಸಿ ಐದು ಭಾಷೆಗಳಲ್ಲಿ ನಿರ್ಮಿಸಿರುವ ಬಹುಕೋಟಿ ವೆಚ್ಚದ 45 ಹೆಸರಿನ ಸಿನಿಮಾ ನಾಳೆ ರಿಲೀಸ್​ ಆಗಲಿದೆ. 
ಈಗಾಗಲೇ ಟ್ರೇಲರ್​​ ಮೂಲಕ ದೇಶಾದ್ಯಂತ ಕುತೂಹಲ ಹೆಚ್ಚಿಸಿರುವ ಈ ಸಿನಿಮಾಗೆ 10 ಮಂದಿ ನಾಯಕರು. ಬಿಡಿಸಿ ಹೇಳಬೇಕು ಅಂದ್ರೆ, ಶಿವಣ್ಣ, ಉಪೇಂದ್ರ, ರಾಜ್​ ​ಬಿ ಶೆಟ್ಟಿ, ರೋಸಿ(ಶ್ವಾನ), ನಿರ್ದೇಶಕ, ಕತೆ, ಚಿತ್ರಕಥೆ, ಮ್ಯೂಸಿಕ್​​, ವಿಶುಯಲ್​ ಎಫೆಕ್ಟ್​ ಮತ್ತು ಗರುಡಪುರಾಣ ಹೀಗೆ 10 ಮಂದಿ ನಾಯಕರು. ನಾವು ಯಾಕೆ ಹೀಗೆ ಹೇಳ್ತಿದ್ದೀವಿ ಅನ್ನೋದು ಅರ್ಥ ಆಗಬೇಕು ಅಂದ್ರೆ ಸಿನಿಮಾ ನೋಡಲೇಬೇಕು.  

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_Shivanna
ವಿಭಿನ್ನ ದೃಶ್ಯವೈಭವದಲ್ಲಿ ಶಿವಣ್ಣ

ನಾಯಕ 1: ಡಾ.ಶಿವರಾಜ್​​ಕುಮಾರ್​​
ಶಿವಣ್ಣ ಏನು? ಅವರ ಆ್ಯಕ್ಟಿಂಗ್​ ಏನು ಅನ್ನೋದು ಕನ್ನಡ ಪ್ರೇಕ್ಷಕರಿಗೆ ಬಿಡಿಸಿ ಹೇಳಬೇಕಾಗಿಲ್ಲ. ಆದರೆ, ಪ್ರಥಮ ಬಾರಿಗೆ ಶಿವಣ್ಣ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿ ಹೇಳಬೇಕು ಅಂದ್ರೆ ಶಿವಣ್ಣನ ದಶಾವತಾರವನ್ನೇ ಈ ಚಿತ್ರದಲ್ಲಿ ನೋಡಬಹುದು. ಇದನ್ನು ವಿವರವಾಗಿ ಹೇಳೋದಕ್ಕಿಂತ ಚಿತ್ರ ನೋಡಿದ್ರೆ ಒಳ್ಳೆಯದು. ಸಂಬಂಧಗಳಿಗೆ ಬೆಲೆ ಕೊಡುವವರಿಗೆ, ತಾಯಿಯನ್ನ ಪ್ರೀತಿಸುವವರಿಗೆ ಶಿವಣ್ಣನ ಒಂದೊಂದು ಡೈಲಾಗ್​​ ಕೂಡ ಹೃದಯಸ್ಪರ್ಷಿಯಾಗಿದೆ. 

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_Upendra
Photograph: (45 movie trailer)

ನಾಯಕ 2: ಉಪೇಂದ್ರ
ಚಿತ್ರಕ್ಕೆ ನಾಯಕ ಎಷ್ಟು ಮುಖ್ಯನೋ? ಖಳ ನಾಯಕ ಕೂಡ ಅಷ್ಟೇ ಮುಖ್ಯ. ತನಗೆ ಕೊಟ್ಟಿರೋ ಪಾತ್ರಕ್ಕೆ 100 ಪರ್ಸೆಂಟ್​ ಜೀವ ತುಂಬಿರೋದು ಉಪೇಂದ್ರ, ತೆಲುಗು, ತಮಿಳು ಸಿನಿಮಾಗಳಲ್ಲಿ ವಿಲನ್​​ಗಳ ಅಬ್ಬರ ನೋಡಿರೋರಿಗೆ ಉಪೇಂದ್ರ ಅವರ ಎಂಟ್ರಿ, ವೇಷ ಭೂಷಣ ಮತ್ತು ಆ್ಯಕ್ಟಿಂಗ್​ ಥ್ರಿಲ್ಲಿಂಗ್​ ಅನುಭವ ನೀಡಿದೆ. ಇನ್ನೂ ಉಪೇಂದ್ರ ಅವರು ಈ ಸಿನಿಮಾದಲ್ಲಿ ನಾಯಕನೋ ಖಳನಾಯಕನೋ ಅನ್ನೋದು ಅರ್ಥವಾಗೋದೇ ಕ್ಲೈಮಾಕ್ಸ್​​ನಲ್ಲಿ.  

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_Raj-B-Shetty
Photograph: (45 movie trailer)

ನಾಯಕ 3:  ರಾಜ್​​ ಬಿ ಶೆಟ್ಟಿ
ದೊಡ್ಡ ದೊಡ್ಡ ಸ್ಟಾರ್​​ಗಳಿರುವ ಚಿತ್ರದಲ್ಲಿ ಸ್ಕ್ರೀನ್​​ ಸ್ಪೇಸ್​ ಯಾರಿಗೆ ಎಷ್ಟು ಸಿಗುತ್ತೆ ಅನ್ನೋದು ಮುಖ್ಯವಾಗುತ್ತೆ. ನಿಮಗೆ ಆಶ್ಚರ್ಯ ಆಗಬಹುದು. ಆಲ್​ಮೋಸ್ಟ್​ ಚಿತ್ರದ ಪ್ರತೀ ಸೀನ್​​ನಲ್ಲೂ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.  ಇಡೀ ಸಿನಿಮಾದ ಜೀವಾಳವೇ ಇವರ ಪಾತ್ರ ಮತ್ತು ಆ್ಯಕ್ಟಿಂಗ್​​.  ಹಾಸ್ಯ, ಎಮೋಷನ್​​, ನಟನೆ ಎಲ್ಲವೂ ಅತ್ಯಂತ ಸಹಜವಾಗಿ ಮೂಡಿಬಂದಿದೆ. 

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_rosiy-dog
Photograph: (freepik)

ನಾಯಕ 4: ರೋಸಿ(ಶ್ವಾನ)  
ಈ ಚಿತ್ರದಲ್ಲಿ ನಾಯಕ ನಟರಿಗೆ ಇರುವಷ್ಟೆ ಪ್ರಾಮುಖ್ಯತೆ ರೋಸಿ ಹೆಸರಿನ ಶ್ವಾನಕ್ಕೂ ನೀಡಲಾಗಿದೆ. ಚಿತ್ರ ಇನ್ನೂ ಬಿಡುಗಡೆ ಆಗದೇ ಇರೋದ್ರಿಂದ ಈ ಬಗ್ಗೆ ಹೆಚ್ಚು ವಿವರ ಹೇಳದೇ ಇರೋದೇ ಒಳ್ಳೇದು.

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_Arjun-Janya

ನಾಯಕ  5: ನಿರ್ದೇಶಕ ಅರ್ಜುನ್​ ಜನ್ಯ
ನಿಜಕ್ಕೂ ಈ ಚಿತ್ರದ ಅತಿ ದೊಡ್ಡ ಯಶಸ್ಸು ಸಿಗಬೇಕಿರೋದು ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ,  ಕ್ಲಿಷ್ಟಕರವಾದ ಒಂದು ವಿಷಯವನ್ನು ಅತ್ಯಂತ ಸರಳವಾಗಿ ಎಲ್ಲೂ ಗೊಂದಲ ಮೂಡಿಸದೇ ನಿರ್ದೇಶನ ಮಾಡಿರುವ ಅವರ ಶೈಲಿಗೆ ಹ್ಯಾಟ್ಸಾಫ್ ಹೇಳಲೇ ಬೇಕು​​. ಚಿತ್ರ ನೋಡಿದ ಯಾರೇ ಆಗಲಿ ಇದು ಅರ್ಜುನ್​ ಜನ್ಯ ನಿರ್ದೇಶನದ ಪ್ರಥಮ ಚಿತ್ರ ಅಂತಾ ಹೇಳೋಕೆ ಸಾಧ್ಯವೇ ಇಲ್ಲ. ನಿರ್ದೇಶಕನಾಗಿ ಅಷ್ಟು ಉತ್ತಮವಾದ ಕೆಲಸವನ್ನ ಅವರು ಮಾಡಿದ್ದಾರೆ. 

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_45-story
Photograph: (45 poster)

ನಾಯಕ 6: ಕತೆ
ಹೌದು, ಒಂದು ವಿನೂತನ ಕತೆ ಐದು ಭಾಷೆಗಳಲ್ಲಿ ಚಿತ್ರ ರಸಿಕರನ್ನ ರಂಜಿಸಲು ಸಿದ್ದವಾಗಿದೆ. ಇದೊಂದು ರೀತಿಯ ವಿಭಿನ್ನ ಕಥೆ. ನಮ್ಮ ನಡುವೆಯೇ ನಡೆಯೋ ಕತೆ, ಪುರಾಣದ ಕತೆ, ಫ್ಯಾಂಟಸಿ ಕತೆ ಹೀಗೆ ಏನು ಬೇಕಾದ್ರೂ ಅನ್ನಿಸಬಹುದು. ಆದರೆ, ಗೊಂದಲವಿಲ್ಲದ ಕತೆಯ ಅಂದವನ್ನು ಹೆಚ್ಚಿಸಿರೋದು ನಿರ್ದೇಶಕರ ಸಾಮರ್ಥ್ಯ

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_45-movie-Story
Photograph: (45 movie trailer)

ನಾಯಕ 7: ಚಿತ್ರಕಥೆ
ಇಡೀ ಚಿತ್ರದಲ್ಲಿ ವಿಭಿನ್ನ ಪಾತ್ರಗಳು, ವಿಭಿನ್ನ ಸಂದರ್ಭಗಳು, ಫ್ಲಾಶ್​​ ಬ್ಯಾಕ್​​, ಡೈಲಾಗ್​​ ಎಲ್ಲವನ್ನೂ ಅಚ್ಚುಕಟ್ಟಾಗಿ ಪೋಣಿಸಿರುವುದು ಚಿತ್ರಕಥೆ. ಚಿತ್ರನೋಡುವಾಗ ಕೆಲವು ಕಡೆ ಗೊಂದಲ ಮೂಡಿದರೂ ಅದು ಚಿತ್ರದ ಕ್ಲೈಮಾಕ್ಸ್​​ನಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುತ್ತದೆ. ಇದು ಚಿತ್ರದ ಮತ್ತೊಂದು ಸ್ಟ್ರೆಂತ್​​

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_Visual-Effect
Photograph: (45 movie trailer)

ನಾಯಕ: 8: ವಿಶುಯಲ್​ ಎಫೆಕ್ಟ್​​
ಇಡೀ ಚಿತ್ರದ ಕತೆ, ಚಿತ್ರಕಥೆ, ನಟರು ವಿಭಿನ್ನ ಪಾತ್ರಗಳು ಇವೆಲ್ಲವೂ ಒಂದು ತೂಕವಾದರೆ, ವಿಶುಯಲ್​ ಎಫೆಕ್ಟ್​ ಮತ್ತೊಂದು ತೂಕ. ಕನ್ನಡ ಚಿತ್ರದಲ್ಲಿ ಹಿಂದೆಂದೂ ಕಂಡಿರದಂತ ವಿಶುಯಲ್​ ಎಫೆಕ್ಟ್​​ ಈ ಚಿತ್ರದಲ್ಲಿ ಕಾಣಬಹುದಾಗಿದೆ. ತೆಲುಗು, ತಮಿಳು ಸೇರಿದಂತೆ ಬೇರೆ ಭಾರತೀಯ ಭಾಷೆಗಳ ಸಿನಿಮಾಗಳಿಗೆ ನಾವು ಯಾವುದರಲ್ಲೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಕೊಡುತ್ತೆ ಈ ಚಿತ್ರದ ವಿಶುಯಲ್​​ ಎಫೆಕ್ಟ್​​ಗಳು. ಇಡೀ ಸಿನಿಮಾದ ಉದ್ದಕ್ಕೂ ವಿಶುಯಲ್​ ಎಫೆಕ್ಟ್​ ಕೂಡ ಪ್ರಮುಖ ಪಾತ್ರದಾರಿ ಅಂದ್ರೆ ಖಂಡಿತಾ ತಪ್ಪಾಗೋದಿಲ್ಲ.

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_Arjun-Janya-music
Photograph: (Arjun Janya facebook page)

ನಾಯಕ 9: ಮ್ಯೂಸಿಕ್​​
ಅರ್ಜುನ್​ ಜನ್ಯಾ ಅವರು ಈ ಚಿತ್ರದಲ್ಲಿ ನಿರ್ದೇಶನದ ಜೊತೆ ಮ್ಯೂಸಿಕ್ ಕೂಡ ಅವರೇ ಮಾಡಿದ್ದಾರೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಯಾವುದೇ ಹಂತದಲ್ಲೂ ಬೋರ್​ ಹೊಡೆಯದಂತೆ ಚಿತ್ರದುದ್ದಕ್ಕೂ ಕುತೂಹಲ ಮೂಡಿಸುವಲ್ಲಿ ಮ್ಯೂಸಿಕ್​​ ಯಶಸ್ವಿಯಾಗಿದೆ. ಕಥೆಗೆ ಪೂರಕವಾಗಿ ಈ ಹಿಂದೆ ಬಿಡುಗಡೆಯಾಗಿರುವ ಕೆಲವು ಚಿತ್ರಗಳ ಮ್ಯೂಸಿಕ್​​ ಸಾಂದರ್ಭಿಕವಾಗಿ ಬಳಸಿಕೊಂಡಿರುವದು ಸಮಯೋಚಿತವಾಗಿದೆ. ಹಾಡುಗಳೇ ಇಲ್ಲದೇ ಇದ್ದರೂ ಇಡೀ ಚಿತ್ರವನ್ನೂ ಎಂಜಾಯ್​​ ಮಾಡಲು ಯಾವುದೇ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾರೆ ಅರ್ಜುನ್​ ಜನ್ಯಾ.

ನಾಯಕ 10: ಗರುಡಪುರಾಣ
ಕನ್ನಡವೂ ಸೇರಿದಂತೆ ವಿಶ್ವದ ಎಲ್ಲಾ ಭಾಷೆಗಳಲ್ಲೂ ವಿಭಿನ್ನ ಕಥೆಗಳನ್ನು ಆಧರಿಸಿ ಚಿತ್ರಗಳ ಬಂದಿವೆ. ಆದರೆ, ಗರುಡ ಪುರಾಣದಲ್ಲಿ ಅಡಕವಾಗಿರುವ ವಿಷಯಗಳನ್ನು ಈ ಕಾಲಕ್ಕೆ ತಕ್ಕಹಾಗೆ ಬಳಸಿಕೊಂಡು ನಿರೂಪಣೆ ಮಾಡಿರುವುದು ನಿಜಕ್ಕೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೂ ಕೂಡ ಚಿತ್ರದ ಪ್ರಮುಖ ಪಾತ್ರದಾರಿಯಾಗಿದೆ.

ಇನ್ನೂ ಈ ಸಿನಿಮಾದಿಂದ ಗೆದ್ದವರು ಯಾರು ಅಂತಾ ನೋಡೋದಾದ್ರೆ:


1) ಕನ್ನಡ ಸಿನಿಮಾ ಇಂಡಸ್ಟ್ರಿ
KGF ಚಾಪ್ಟರ್-​1 ಮತ್ತು KGF ಚಾಪ್ಟರ್​-2 ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಚಿತ್ರ. ಅದೇ ರೀತಿ ಕಾಂತಾರ ಭಾಗ 1 ಮತ್ತು 2 ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ. ಈ ಪರಂಪರೆಯನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳು 45 ಸಿನಿಮಾಗೆ ಇದೆ. ಹಾಗಾಗಿ ಇಡೀ ದೇಶದ ಚಿತ್ರರಂಗ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದರೆ ಅದು ಅತಿಶಯೋಕ್ತಿಯಲ್ಲ.

2) ನಿರ್ದೇಶಕ ಅರ್ಜುನ್​​ಜನ್ಯ
ಮ್ಯೂಸಿಕ್​ ಡೈರೆಕ್ಟರ್​ಆಗಿ ಗುರುತಿಸಿಕೊಂಡಿದ್ದ ಅರ್ಜುನ್​ ಜನ್ಯಾ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇದು ಅವರು ಚೊಚ್ಚಲ ನಿರ್ದೇಶನದ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲದಷ್ಟರ ಮಟ್ಟಿಗೆ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕಥೆಯ ಆಯ್ಕೆ, ನಿರೂಪಣೆ, ದಿಗ್ಗಜ ನಟರು ಚಿತ್ರದಲ್ಲಿದ್ದರೂ ಪ್ರಾಮುಖ್ಯತೆ ನೀಡುವಲ್ಲಿ ಯಾರಿಗೂ ತಾರತಮ್ಯ ಮಾಡದೇ ಇರುವುದು ಹಾಗೂ ಕೇವಲ ಬೆರಳೆಕಿಯಷ್ಟು ನಟರನ್ನು ಇಟ್ಟುಕೊಂಡು ಇಡೀ ಚಿತ್ರ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ. ಚಿತ್ರದಲ್ಲಿ ಇರುವುದು ಕೆಲವೇ ನಟರಾದರೂ ಪ್ರತಿ ನಟರ ಪಾತ್ರವೂ ಮನಸಲ್ಲಿ ಉಳಿಯುವಂತೆ ಮಾಡಿರುವುದು ಗಮನಸೆಳೆಯುತ್ತದೆ. 

45-Movie-Review_Shivarajkumar_Upendra_Raj-B-Shetty_Arjun-Janya_Kannada-Movie-Review_NewsfirstKannada_45-movie-producer-Ramesh-Reddy

3) ನಿರ್ಮಾಪಕ ರಮೇಶ್​​ ರೆಡ್ಡಿ ಅವರ ಧೈರ್ಯ
ದೊಡ್ಡ ದೊಡ್ಡ ನಟರ ಮೇಲೆ ಬಂಡವಾಳ ಹೂಡಲು ಹಲವರು ಮುಂದೆ ಬರ್ತಾರೆ. ಈ ಚಿತ್ರದಲ್ಲೂ ದೊಡ್ಡ ನಟರು ಇದ್ದಾರೆ. ಆದರೆ, ಚೊಚ್ಚಲ ನಿರ್ದೇಶಕರೊಬ್ಬರ ಮೇಲೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ಗುಂಡಿಗೆ ಬೇಕು. ಅಂತಹ ಗುಂಡಿಗೆ ತೋರಿರುವುದು ನಿರ್ಮಾಪಕರಾದ ರಮೇಶ್​ ರೆಡ್ಡಿಯವರು. ಅವರ ಹೂಡಿಕೆಗೆ ಸೂಕ್ತ ಪ್ರತಿಫಲ ಸಿಗುವಂತೆ ಚಿತ್ರ ಮೂಡಿಬಂದಿದೆ. ಪ್ರೇಕ್ಷಕರಿಂದ ಅಷ್ಟೇ ಉತ್ತಮ ಪ್ರತಿಕ್ರಿಯೆ ಬಂದರೆ, ರಮೇಶ್​ ರೆಡ್ಡಿ ಅಂತವರಿಗೆ ಸ್ಫೂರ್ತಿ ಸಿಗುತ್ತದೆ. 

ಸಿನಿಮಾ ನೋಡಿದ ಪ್ರೇಕ್ಷಕನಿಗೆ ಏನು ಲಾಭ ಅಂದ್ರೆ
- ಪಕ್ಕಾ ಎಂಟರ್​​ಟೈನ್​​ಮೆಂಟ್​​
- ಅದ್ಭುತ ದೃಶ್ಯ ವೈಭವ
- ಪಕ್ಕಾ ಪೈಸಾ ವಸೂಲ್​​
ಕೊನೆಯದಾಗಿ ಹೇಳಬೇಕು ಅಂದ್ರೆ ಉತ್ತಮವಾದ ಕಥೆ, ದಿಗ್ಗಜ ನಟರು, ಕಥೆಯ ನಿರೂಪಣೆ, ಅದ್ಭುತ ದೃಶ್ಯ ವೈಭವ, ಪಕ್ಕಾ ಎಂಟರ್​ಟೈನ್​ಮೆಂಟ್​ ಹಾಗೂ ಒಂದೊಳ್ಳೆ ಸಾಮಾಜಿಕ ಸಂದೇಶ. ಇವೆಲ್ಲವುದರ ಸಮ್ಮಿಲನವೇ 45 ಚಿತ್ರ. 

ಎಂಟರ್​​ಟೈನ್​​ಮೆಂಟ್ ಬ್ಯೂರೋ, ನ್ಯೂಸ್​ಫಸ್ಟ್​​

45 Movie 45 Trailer
Advertisment