Advertisment

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ 37ನೇ ಹುಟ್ಟುಹಬ್ಬದ ಸಂಭ್ರಮ: ಕೆಲವರ ಯೋಗ್ಯತೆ ಏನ್ ಅಂತ ಗೊತ್ತಾಗಿದೆ ಎಂದಿದ್ದು ಯಾರ ಬಗ್ಗೆ?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ಕೆ.ಆರ್.ರಸ್ತೆಯ ಧ್ರುವ ಸರ್ಜಾ ಮನೆ ಮುಂದೆ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದಾರೆ. ಇಂದು ಬೆಳಿಗ್ಗೆ ಹುಟ್ಟುಹಬ್ಬದ ಕಾರ್ಯಕ್ರಮಗಳು ನಡೆದಿವೆ.

author-image
Chandramohan
actor dhruva sarja birthday

ನಟ ಧ್ರುವ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ

Advertisment
  • ನಟ ಧ್ರುವ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ
  • ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ದಾನ ನೀಡಲು ಧ್ರುವ ಸರ್ಜಾ ನಿರ್ಧಾರ
  • ವರ್ಷಕ್ಕೆ 2 ಸಿನಿಮಾ ಮಾಡುತ್ತೇನೆ, ಕೆ.ಡಿ. ಸಿನಿಮಾ ರೀಲೀಸ್ ಗೆ ರೆಡಿ


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ  ಇಂದು ಹುಟ್ಟಹಬ್ಬದ ಸಂಭ್ರಮ. ಧ್ರುವ ಸರ್ಜಾ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ನಿನ್ನೆ ರಾತ್ರಿಯೇ  ಅಭಿಮಾನಿಗಳು ಬೆಂಗಳೂರಿನ ಕೆ.ಆರ್‌.ರಸ್ತೆಯ ಧ್ರುವ ಸರ್ಜಾ ಮನೆ ಮುಂದೆ ಜಮಾಯಿಸಿದ್ದರು. ಅಭಿಮಾನಿಗಳು ಧ್ರುವ ಸರ್ಜಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾತ್ರಿಯೇ ಧ್ರುವ ಸರ್ಜಾ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ವಿಶೇಷ  ಅಂದರೇ, ಅಭಿಮಾನಿಗಳಿಗೆ ಸಪ್ರ್ರೈಸ್ ಗಿಫ್ಟ್ ಸಿಗಲಿದೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯ  ಅಭಿಯಾನವನ್ನು ನಟ ಧ್ರುವ ಸರ್ಜಾ ಆರಂಭಿಸಿದ್ದಾರೆ. ಅಭಿಮಾನಿಗಳು ಹಾಗೂ ಬೇರೆ ಬೇರೆಯವರು ನೀಡಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ , ವಿದ್ಯಾರ್ಥಿಗಳಿಗೆ ದಾನವಾಗಿ ನೀಡಲು ನಿರ್ಧರಿಸಿದ್ದಾರೆ. 
ಇನ್ನೂ ಹುಟ್ಟುಹಬ್ಬದ ವೇಳೆ ಮಾಧ್ಯಮಗಳ ಜೊತೆ ನಟ ಧ್ರುವ ಸರ್ಜಾ ಮಾತನಾಡಿದ್ದಾರೆ. 
ಕೆಲವರ ಯೋಗ್ಯತೆ ಏನಂತಾ ಗೊತ್ತಾಗಿದೆ. ಇನ್ನೂ ಮೇಲಿಂದ ನಾನು  ಬುದ್ಧಿ  ಕಲಿತೀನಿ ಎಂದಿದ್ದಾರೆ. ಇನ್ನೂ  ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ.  ಕೆಲವರ ಯೋಗ್ಯತೆ ಏನಂತಾ ನನಗೀಗ ಅರ್ಥ ಆಗಿದೆ. ನಾನು ನನ್ನ ಕೆಲಸದ ಕಡೆಗೆ ಗಮನ ಕೊಡ್ತೀನಿ. ಕೆ.ಡಿ ಸಿನಿಮಾದ ಕೆಲಸ ಎಲ್ಲಾ ಮುಗಿಸಿದ್ದೀನಿ. ರಿಲೀಸ್ ವಿಚಾರ ಪ್ರೊಡಕ್ಷನ್ ಹೌಸ್, ನಿರ್ದೇಶರು ತಿಳಿಸಬೇಕು. ಸುದೀಪ್ ಜೊತೆಗೆ ಕೆಲಸ ಮಾಡಿ ಖುಷಿ ಕೊಟ್ಟಿದೆ. ಅವರು ನಮ್ಮ ಸೀನಿಯರ್.  ಅವರ ಪಾತ್ರ ತುಂಬಾ ಚೆನ್ನಾಗಿ ಬಂದಿದೆ. ಮುಂದೆ ದುನಿಯಾ ಸೂರಿ ಜೊತೆ ಸಿನಿಮಾ ಮಾಡ್ತಿದ್ದೀನಿ.  ಕೆಲಸಗಳು ನಡೀತಿದೆ. ಎಲ್ಲವೂ ಅಧಿಕೃತ ಆದ ನಂತರ  ಮಾಹಿತಿ ನೀಡ್ತೀನಿ ಎಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳಿದ್ದಾರೆ. 
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಲವರ ಯೋಗ್ಯತೆ ಏನು ಅಂತ ಗೊತ್ತಾಗಿದೆ ಎಂದು ಇಂದು ಹೇಳಿದ್ದಾರೆ. ಯಾರ ಬಗ್ಗೆ ಹೀಗೆ ಹೇಳಿದ್ರು? ಯಾರು ಅನ್ನು ಗುರಿಯಾಗಿ ಇಟ್ಟುಕೊಂಡು ನಟ ಧ್ರುವ ಸರ್ಜಾ ಈ ಮಾತು ಹೇಳಿರಬಹುದು ಎಂಬ ಚರ್ಚೆಯನ್ನು ಧ್ರುವ ಸರ್ಜಾ ಅಭಿಮಾನಿಗಳೇ ಮಾಡುತ್ತಿದ್ದಾರೆ. 
ನಟ ನೀಡುವ ಹೇಳಿಕೆ, ಅದರ ಮಾರ್ಮಿಕ ಅರ್ಥವನ್ನು  ಕಂಡು ಹಿಡಿಯುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಅದು ಹೇಗಾದರೂ ಇರಲಿ, ನಟ ಧ್ರುವ ಸರ್ಜಾಗೆ ಹ್ಯಾಪಿ ಬರ್ತ್ ಡೇ ಎಂದು ಹೇಳೋಣ.

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Actor Prince Dhruva sarja birthday
Advertisment
Advertisment
Advertisment