ಜೈಲಿನಲ್ಲೇ ನಟ ದರ್ಶನ್‌ಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ: ದರ್ಶನ್ ಭೇಟಿಯಾದ ಹೆಂಡ್ತಿ, ಮಗ

ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್‌ಗೆ ಇಂದು 49ನೇ ಹುಟ್ಟುಹಬ್ಬ . ಆದರೇ, ಇದನ್ನು ಪ್ರತಿ ವರ್ಷದಂತೆ ಈ ಭಾರಿಯೂ ಸಂಭ್ರಮದಿಂದ ಆಚರಿಸಿಕೊಳ್ಳಲಾಗುತ್ತಿಲ್ಲ. ಈ ಭಾರಿ ನಟ ದರ್ಶನ್ ಜೈಲಿನಲ್ಲೇ ಇದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಹೆಂಡ್ತಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಭೇಟಿ ನೀಡಿ ವಿಶ್ ಮಾಡಿದ್ದಾರೆ.

author-image
Chandramohan
Darshan
Advertisment

ದರ್ಶನ್ ಅಭಿಮಾನಿಗಳಿಗೆ ಇಂದು ವಿಶೇಷ ದಿನ. ಅದೇ ಜನ್ಮದಿನ. ಆದ್ರೆ ಜೈಲಲ್ಲಿ ಆಚರಿಸಬೇಕಿದೆ. ಈ ನಡುವೆಯೂ ದರ್ಶನ್ ಅಭಿಮಾನಿಗಳು ಮಿತಿಮೀರಿ ನಡೆದುಕೊಂಡಿದ್ದಾರೆ. ಬೇಲ್​ ಕೊಡಿ ದಮ್ಮಯ್ಯ ಅಂತ ದರ್ಶನ್​ ಜೈಲಿನಿಂದ ಹೋರಾಡ್ತಿದ್ರೆ.. ದರ್ಶನ್​ ಮನೆಗೆ ಹೋಗ್ಬೇಕು ಬಿಡಯ್ಯ ಅಂತ ದರ್ಶನ್​ ಅಭಿಮಾನಿಗಳು ಪೊಲೀಸರ ಮೇಲೆನೇ ಕಿರಿಕ್​ ಮಾಡಿದ್ದಾರೆ. 
ಲೂನಾ ಟು ಲ್ಯಾಂಬೋರ್ಗಿನಿ.. ಲೈಟ್​ ಬಾಯ್​ ಟು ಚಾಲೆಂಜಿಂಗ್​ ಸ್ಟಾರ್​.. ನೇಮು.. ಫೇಮು.. ಸ್ಟಾರ್​ ಡಮ್ಮು.. ಎಲ್ಲಾ ಸುಮ್ನೆ ಬಂದಿಲ್ಲ.. ಹಗಲು-ರಾತ್ರಿಯ ದುಡಿಮೆ.. ಬೆವರಿನ ಸುವಾಸನೆ.. ಕೋಟ್ಯಾಂತರ ಅಭಿಮಾನಿಗಳನ್ನ  ಸಿಕ್ಸ್​ ಫೀಟ್​ ಕಟೌಟ್​ ಬಳಿಗೆ ಬಂದು ಸೇರುವಂತೆ ಮಾಡಿದೆ. ಹಾಗೆ ಬಂದವರು ಮಾಡೋದು ಒಂದೊಂದಲ್ಲ ಬಿಡಿ..

ದರ್ಶನ್ ಬರ್ತ್​ಡೇ ಹಿನ್ನೆಲೆ ಮನೆ ಬಳಿ ಫ್ಯಾನ್ಸ್​ ಹುಚ್ಚಾಟ!
ಕುಡಿದು ಬಂದು ಕೂಗಾಡ್ತಿದ್ದ ಅಭಿಮಾನಿಗೆ ಕಪಾಳಮೋಕ್ಷ!
ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ​​ ಇಂದು 49ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ತಿದ್ರು.. ಆದ್ರೆ ಈ ಬಾರಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ದರ್ಶನ್ ಹೊರಗೆ ಇಲ್ಲದಿದ್ರೂ ಸಂಭ್ರಮ ಏನು ಕಮ್ಮಿ ಇರಲಿಲ್ಲ.. 
ನೆಚ್ಚಿನ ನಟನ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸ್ತಿದ್ದಾರೆ. ಜೈಲಿನಲ್ಲಿರೋ ಅಣ್ಣನಿಗಾಗಿ.. ಆದಷ್ಟು ಬೇಗ ಹೊರಗೆ ಬನ್ನಿ ಅಂತ ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ದರ್ಶನ್ ಹುಟ್ಟುಹಬ್ಬಕ್ಕಾಗಿ ಪತ್ನಿ ವಿಜಯಲಕ್ಷ್ಮಿ.. ಆಪ್ತ ಧನ್ವೀರ್, ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್.. ಸೋಷಿಯಲ್ ಮೀಡಿಯಾದಲ್ಲಿ ದಚ್ಚುಗೆ ಶುಭ ಹಾರೈಸಿದ್ದಾರೆ.
ದರ್ಶನ್ ಮನೆ ಬಳಿ ಹೋಗಲೇಬೇಕೆಂದು ಫ್ಯಾನ್ಸ್​ ಕಿರಿಕಿರಿ
ದರ್ಶನ್ ಅಭಿಮಾನಿಗಳಿಗೆ ಇಂದು ವಿಶೇಷ ದಿನ. ಈ ವಿಶೇಷ ದಿನಂದು ಬೆಂಗಳೂರಿನ ಆರ್​ಆರ್​ ನಗರದ ಮನೆಗೆ ನುಗ್ಗಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಫ್ಯಾನ್ಸ್ ಮಧ್ಯೆ ಕಿರಿಕ್ ಆಗಿದೆ. ಪೊಲೀಸ್ ಅನ್ನೋದನ್ನ ನೋಡದೆ ತಳ್ಳಿ.. ಒಳ ನುಗ್ಗಲು ಪ್ರಯತ್ನಿಸಿದ್ದು ಮಾತ್ರವಲ್ಲದೆ.. ಕುಡಿದು ಬಂದು ಪದೇ ಪದೇ ಕಿರಿ ಕಿರಿ ಮಾಡಿದ್ದಕ್ಕೆ ಎಎಸ್​​ಐ ಯೋಗ ನರಸಯ್ಯ ರಾಜು ಅಭಿಮಾನಿಗೆ ಕಪಾಳಮೋಕ್ಷ ಮಾಡಲಾಗಿದೆ. 
ದರ್ಶನ್ ಇಲ್ಲದೆ ಬಿಕೋ ಎನ್ನುತ್ತಿರುವ ಫಾರಂ ಹೌಸ್
ಇನ್ನೂ ಪ್ರತೀ ಬಾರಿ ದರ್ಶನ್​ ಹುಟ್ಟುಹಬ್ಬದ ವೇಳೆ ಹಾಟ್​ ಸ್ಪಾಟ್​ ಆಗಿರುತ್ತಿದ್ದ ಟಿ.ನರಸೀಪುರ - ಮೈಸೂರು ಮುಖ್ಯ ರಸ್ತೆಯಲ್ಲಿರೋ ಫಾರಂ ಹೌಸ್.. ಈ ಬಾರಿ ಬಿಕೋ ಎನ್ನುತ್ತಿದೆ.. ದರ್ಶನ್ ಪ್ರತೀ ವರ್ಷ ಹುಟ್ಟು ಹಬ್ಬದ ದಿನ ಫ್ರೀ ಮಾಡ್ಕೊಂಡು ಸ್ನೇಹಿತರ ಜೊತೆಗೆ ಬಂದು ಫಾರಂ ಹೌಸ್​ ಪ್ರಾಣಿ ಪಕ್ಷಿಗಳ ಜೊತೆ ಹುಟ್ಟುಹಬ್ಬ ಆಚರಿಸ್ತಿದ್ರು.. ಆದ್ರೆ ಈ ಬಾರಿ ದರ್ಶನ್ ಜೈಲು ಸೇರಿದ್ರಿಂದ ಫಾರ್ಮ್ ಹೌಸ್​ ಖಾಲಿ ಖಾಲಿಯಾಗಿದೆ. ಅದ್ರೂ ಕೆಲ ಅಭಿಮಾನಿಗಳು ಫಾರಂ ಹೌಸ್ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ದಾಸನ ಬರ್ತಡೇ ದಿನವೇ ಪವಿತ್ರಾ ಗೌಡಗೆ ಕೋರ್ಟ್​ ಶಾಕ್
ದರ್ಶನ್​ ಬ್ಯುಸಿ ನಡುವೆ.. A1 ಪವಿತ್ರಾ ಗೌಡಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ಮಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರಣ ಕೊಟ್ಟು.. ಮಧ್ಯಂತರ ಜಾಮೀನು ಕೋರಿದ್ದ ಪವಿತ್ರಾ ಗೌಡ ಅರ್ಜಿಯನ್ನ ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಪವಿತ್ರಾ ಗೌಡ ಅವರಿಗೆ ಜೈಲೇ ಗತಿಯಾದಂತಾಗಿದೆ. ಅದೇನೆ ಇರಲಿ ಪದೇ ಪದೆ ದರ್ಶನ್​ ಫ್ಯಾನ್ಸ್​ ಹೀಗೆ ಮಿತಿಮೀರಿ ನಡೆದುಕೊಳ್ತಿರೋದು ಜೈಲಿನಲ್ಲಿರೋ ದರ್ಶನ್​ಗೆ ತಲೆ ನೋವಾಗಿ ಪರಿಣಮಿಸಿದೆ. 

ನ್ಯೂಸ್ ಫಸ್ಟ್​ ಬ್ಯುರೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

actor Darshan 49th birthday Actor Darshan
Advertisment