ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರದ ಜೈಲಿನ ಅಡ್ಮಿಷನ್ನ ಒಂದೇ ಬ್ಯಾರಕ್ನಲ್ಲಿ ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೂಶ್ ಸೇರಿ ಎಲ್ಲ ಆರೋಪಿಗಳು ಇದ್ದಾರೆ. ರಾತ್ರಿ ಊಟ ಎಂದು ಮುದ್ದೆ, ಚಪಾತಿ, ಅನ್ನ ಸಾಂಬಾರ್ ನೀಡಲಾಗಿದೆ.
ಅದರಂತೆ ಪವಿತ್ರಾ ಗೌಡ ಅವರು ಮಹಿಳಾ ಬ್ಯಾರಕ್ನಲ್ಲಿದ್ದು ಯಾರ ಜೊತೆಯೂ ಮಾತನಾಡಿಲ್ಲ. ಮೌನಕ್ಕ ಶರಣಾಗಿದ್ದು ಕಣ್ಣೀರು ಹಾಕುತ್ತಿದ್ದಾರೆ. ರಾತ್ರಿಯೂ ಊಟ ಮಾಡದೇ, ಬೆಳಗಿನ ಜಾವದವರೆಗೂ ಅವರು ಚಡಪಡಿಸಿದ್ದಾರೆ. ಅಲ್ಲದೇ ಹೀಗಾಗಿ ಬಿಡುತ್ತಲ್ಲ ಎಂದು ದರ್ಶನ್ ಜೊತೆ ನಾಗರಾಜ್, ಲಕ್ಷ್ಮಣ್ ಮಾತನಾಡಿದ್ದಾರಂತೆ. ಇನ್ನು ದರ್ಶನ್ ಅವರಿಗೆ ಇಂದು ಖೈದಿ ನಂಬರ್ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ